Advertisement

ಆ್ಯಪ್ ಮಿತ್ರ: ಆಯ್‌ ಕರ್‌ ಸೇತು

05:13 AM Jun 29, 2020 | Lakshmi GovindaRaj |

ಆರೋಗ್ಯ ಸೇತು ಆ್ಯಪ್‌ನ ಕುರಿತು ಎಲ್ಲರಿಗೂ ತಿಳಿದೇ ಇದೆ. ಕೇಂದ್ರ ಸರ್ಕಾರ, ಕೋವಿಡ್‌ 19 ಕುರಿತು ಜನರಲ್ಲಿ ಜಾಗೃತಿ ಮತ್ತು ಎಚ್ಚರಿಕೆ ವಹಿಸಲು ಅನುವು ಮಾಡಿಕೊಡುವ ಸಲುವಾಗಿ ಈ ಆ್ಯಪ್‌ ಅನ್ನು ಬಿಡುಗಡೆಗೊಳಿಸಿತ್ತು. “ಆಯ್‌ ಕರ್‌  ಸೇತು’ ಕೂಡ ಸರ್ಕಾರಿ ಆ್ಯಪ್‌ ಆಗಿದ್ದು, ಇನ್‌ಕಂ ಟ್ಯಾಕ್ಸ್‌ ಲೆಕ್ಕ ಹಾಕಲು ಸಹಕರಿಸುತ್ತದೆ. ತೆರಿಗೆ ಇಲಾಖೆ ಈ ಆಪ್‌ ನ ರೂವಾರಿ.

Advertisement

ಅದರ ಸಹಾಯದಿಂದ ಜನರು ಸುಲಭವಾಗಿ ತಮ್ಮ ತೆರಿಗೆಯನ್ನು ಲೆಕ್ಕ ಹಾಕಬಹುದಾಗಿದೆ. ಅದರಲ್ಲಿ ಇನ್ನೂ  ಹಲವು ಸವಲತ್ತುಗಳಿವೆ. ಅದಲ್ಲಿನ ಚಾಟ್‌ ಬಾಕ್ಸ್‌ ಸಹಾಯದಿಂದ ತೆರಿಗೆ ಪಾವತಿದಾರರು ಹಲವು ಗೊಂದಲಗಳನ್ನು ಬಗೆಹರಿಸಿಕೊಳ್ಳ ಬಹುದಾಗಿದೆ. ಸನಿಹದಲ್ಲಿ ಟಿಪಿಎಸ್‌ (ಟ್ಯಾಕ್ಸ್‌ ಪೇಯರ್ಸ್‌ ಸರ್ವೀಸಸ್‌/ ಸಿಸ್ಟಮ್) ಕಚೇರಿಗಳು ಎಲ್ಲಿವೆ  ಎಂದೂ ಬಳಕೆದಾರರು ತಿಳಿದುಕೊಳ್ಳಬಹುದು.

ಬಳಕೆದಾರರು ಆ್ಯಪ್‌ನಲ್ಲಿ ತಮ್ಮ ಮೊಬೈಲ್‌ ಸಂಖ್ಯೆ ನೀಡಿ ರಿಜಿಸ್ಟರ್‌ ಆದ ನಂತರ, 12 ಅಂಕಿಯ ಆಧಾರ್‌ ಮತ್ತು 10 ಅಂಕಿಯ ಪ್ಯಾನ್‌ ಕಾರ್ಡನ್ನು ಆ್ಯಪ್‌ ಸಹಾಯದಿಂದ ಲಿಂಕ್‌  ಮಾಡಬಹುದಾಗಿದೆ. ಟ್ಯಾಕ್ಸ್‌ ರಿಟರ್ನ್ಸ್‌ ತಯಾರಿಸುವ ಪರಿಣತರನ್ನು ಹುಡುಕಲೂ ಆ್ಯಪ್‌ ಸಹಕರಿಸುತ್ತದೆ. ಟ್ಯಾಕ್ಸ್‌ ಅನ್ನು ಆನ್‌ಲೈನಿನಲ್ಲೇ ಕಟ್ಟಲು ಆ್ಯಪ್‌ ಅನುವು ಮಾಡಿಕೊಡುತ್ತದೆ. ಒಂದೇ ಮಾತಿನಲ್ಲಿ ಹೇಳುವುದಾದರೆ, ಈ ಆ್ಯಪ್‌,  ಸರ್ಕಾರ ಮತ್ತು ತೆರಿಗೆ ಪಾವತಿದಾರರ ನಡುವೆ ಸೇತುವೆಯಂತೆ ಕೆಲಸ ಮಾಡುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next