ನವದೆಹಲಿ: ಅಬಕಾರಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಿಬಿಐನಿಂದ ಸಮನ್ಸ್ ಪಡೆದಿದ್ದಾರೆ. ಆದರೆ ಈ ಪ್ರಕರಣವೀಗ ಬಿಜೆಪಿ-ಆಪ್ ಮಧ್ಯೆ ದೊಡ್ಡ ಕೆಸರೆರಚಾಟಕ್ಕೆ ಕಾರಣವಾಗಿದೆ.
ಈ ಮಧ್ಯೆ ಆಮ್ ಆದ್ಮಿ ಪಕ್ಷದ ಮುಖಂಡ ರಾಘವ್ ಛಡ್ಡಾ ಅವರು ಕೇಜ್ರಿವಾಲ್ ಅವರನ್ನು ಭಗವಾನ್ ಶ್ರೀ ಕೃಷ್ಣನಿಗೂ ಬಿಜೆಪಿಯನ್ನು ʻಕಂಸʼನಿಗೂ ಹೋಲಿಸಿದ್ದಾರೆ.
ʻ ಶ್ರೀ ಕೃಷ್ಣ ತನ್ನನ್ನು ಮುಗಿಸುವ ಸಂಗತಿಯನ್ನು ಕಂಸ ತಿಳಿದುಕೊಂಡಿದ್ದ. ಆದರೆ ಆದರೂ ಕೃಷ್ಣನ ವಿರುದ್ಧ ಸುಮಾರಷ್ಟು ಪಿತೂರಿಗಳನ್ನು ನಡೆಸಿ ಕೆಡವಲು ಪ್ರಯತ್ನಿಸಿದ್ದ. ಆದರೆ ಶ್ರೀ ಕೃಷ್ಣನ ತಲೆಯ ಒಂದು ಕೂದಲನ್ನು ಕೀಳುವುದಕ್ಕೂ ಕಂಸನಿಗೆ ಸಾಧ್ಯವಾಗಿಲ್ಲʼ ಎಂದು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: Kolar ‘ಜೈ ಭಾರತ್’ ರ‍್ಯಾಲಿ; ಪ್ರಧಾನಿ ಮೋದಿ ವಿರುದ್ಧ Rahul Gandhi ತೀವ್ರ ವಾಗ್ದಾಳಿ
ಅಬಕಾರಿ ಹಗರಣದ ಕುರಿತು ಸಿಬಿಐ ನೀಡಿದ್ದ ಸಮನ್ಸ್‌ಗೆ ಪ್ರತಿಯಾಗಿ ಅರವಿಂದ್ ಕೇಜ್ರಿವಾಲ್ ಭಾನುವಾರ ದೆಹಲಿಯ ಸಿಬಿಐ ಕಛೇರಿಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ.