Advertisement

ಎರಡೇ ತಿಂಗಳಲ್ಲಿ ಬಿಜೆಪಿ ಸೇರಿದ ಎರಡನೇ ಆಪ್‌ ಶಾಸಕ, ಅನಿಲ್‌ ಬಾಜ್‌ಪೈ

09:55 AM May 04, 2019 | Sathish malya |

ಹೊಸದಿಲ್ಲಿ : ಆಮ್‌ ಆದ್ಮಿ ಪಕ್ಷದ ಗಾಂಧಿ ನಗರ ಶಾಸಕ ಅನಿಲ್‌ ಬಾಜಪೈ ಅವರು ಇಂದು ಶುಕ್ರವಾರ ಭಾರತೀಯ ಜನತಾ ಪಕ್ಷ ಸೇರಿದ್ದಾರೆ.

Advertisement

ಕಳೆದ ಎರಡು ತಿಂಗಳಲ್ಲಿ ಬಿಜೆಪಿ ಸೇರಿರುವ ಎರಡನೇ ಆಪ್‌ ಶಾಸಕ ಇವರಾಗಿದ್ದಾರೆ.

ಬಿಜೆಪಿ ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆಪ್‌ ನಾಯಕರು ಮತ್ತು ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸುತ್ತಿರುವ ನಡುವೆಯೇ ಈ ವಿದ್ಯಮಾನ ನಡೆದಿರುವುದು ಗಮನಾರ್ಹವಾಗಿದೆ.

ಬಾಜಪೈ ಅವರು ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ಮತ್ತು ದಿಲ್ಲಿ ಬಿಜೆಪಿ ಪ್ರಭಾರಿ ಶ್ಯಾಮ್‌ ಜಜೂ ಮತ್ತು ಕೇಂದ್ರ ಸಚಿವ ವಿಜಯ್‌ ಗೋಯಲ್‌ ಅವರು ಉಪಸ್ಥಿತಿಯಲ್ಲಿ ದಿಲ್ಲಿ ಘಟಕ ಕಾರ್ಯಾಲಯದಲ್ಲಿ ಬಿಜೆಪಿ ಸೇರಿದರು.

Advertisement

Udayavani is now on Telegram. Click here to join our channel and stay updated with the latest news.

Next