ಗಾಂಧಿನಗರ : ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿಯಾಗಿದ್ದ ಇಸುದನ್ ಗಢ್ವಿ ಅವರು ಬಿಜೆಪಿ ಅಭ್ಯರ್ಥಿ ಅಯರ್ ಮುಲುಭಾಯ್ ಹರ್ದಾಸ್‌ಭಾಯ್ ಬೇರಾ ವಿರುದ್ಧ ಸೋಲು ಅನುಭವಿಸಿದ್ದಾರೆ.
ಅಯರ್ ಮುಲುಭಾಯ್ ಅವರು ಗುಜರಾತ್‌ನ ಖಂಭಾಲಿಯಾ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಅಂತರದಿಂದ ಗೆದ್ದಿದ್ದಾರೆ. ಗಢ್ವಿ ಎರಡನೇ ಸ್ಥಾನದಲ್ಲಿದ್ದಾರೆ. ಕಾಂಗ್ರೆಸ್‌ನ ಹಾಲಿ ಶಾಸಕ ಅಹಿರ್ ವಿಕ್ರಮಭಾಯ್ ಅರ್ಜನ್‌ಭಾಯ್ ಮಾಡಂ ಮೂರನೇ ಸ್ಥಾನದಲ್ಲಿದ್ದಾರೆ.
ಅಯರ್ ಮುಲುಭಾಯ್ 77834 ಮತಗಳನ್ನು ಪಡೆದಿದ್ದು, ಗಢ್ವಿ 59089 ಮತಗಳನ್ನು ಪಡೆದಿದ್ದಾರೆ. ಹಾಲಿ ಶಾಸಕ ಕಾಂಗ್ರೆಸ್ ಹುರಿಯಾಳು 44715 ಮತಗಳನ್ನು ಪಡೆದಿದ್ದಾರೆ.
ಖಂಬಲಿಯಾ ಕ್ಷೇತ್ರದ ಇತಿಹಾಸವೇ ಕುತೂಹಲಕಾರಿಯಾಗಿದ್ದು, 2017ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿಕ್ರಂಭಾಯ್ ಅರ್ಜನ್‌ಭಾಯ್ ಮಾಡಂ ಅಹಿರ್ ಬಿಜೆಪಿ ಅಭ್ಯರ್ಥಿ ಕಲುಭಾಯಿ ನಾರಂಭಾಯ್ ಚಾವ್ಡಾ ಅವರನ್ನು 11,046 ಮತಗಳಿಂದ ಸೋಲಿಸಿದ್ದರು. ಈ ಬಾರಿ ಅವರು ಮೂರನೇ ಸ್ಥಾನಕ್ಕೆ ತಳ್ಳಲ್ ಪಟ್ಟಿದ್ದಾರೆ.
ಹಲವು ಹೋರಾಟಗಳನ್ನು ಸಂಘಟಿಸಿದ್ದ 40 ವರ್ಷದ ಮಾಜಿ ಪತ್ರಕರ್ತ ಗಢ್ವಿಯವರನ್ನು ಸಮೀಕ್ಷೆಯ ಆಧಾರದ ಮೇಲೆ ತನ್ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಆಪ್ ಘೋಷಿಸಿತ್ತು. ಖಂಬಲಿಯಾ ಅಸೆಂಬ್ಲಿ ಕ್ಷೇತ್ರ ಜಾಮ್‌ನಗರ ಲೋಕಸಭಾ ಕ್ಷೇತ್ರದ ಭಾಗವಾಗಿದ್ದು, ಗುಜರಾತ್ ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿದೆ.