Advertisement

ಆರ್‌ಬಿಐ ನಿವೃತ್ತ ಗವರ್ನರ್‌ ರಾಜನ್‌ ರಾಜ್ಯಸಭೆಗೆ ಎಂಟ್ರಿ?

06:15 AM Nov 09, 2017 | Team Udayavani |

ಹೊಸದಿಲ್ಲಿ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ)ನ ನಿವೃತ್ತ ಗವರ್ನರ್‌ ರಘುರಾಂ ರಾಜನ್‌ ರಾಜ್ಯಸಭೆಗೆ ಎಂಟ್ರಿಯಾಗುತ್ತಾರಾ?

Advertisement

ಹೌದು ಎನ್ನುತ್ತಿದೆ ಆಮ್‌ ಆದ್ಮಿ ಪಕ್ಷದ ಮೂಲಗಳು. ಈಗಿರುವ ಮಾಹಿತಿಯಂತೆ ಆಮ್‌ ಆದ್ಮಿ ಪಕ್ಷ ನಾಯಕ, ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಈಗಾಗಲೇ ರಘುರಾಂ ರಾಜನ್‌ ಅವರ ಜತೆ ಮಾತುಕತೆ ನಡೆಸಿದ್ದಾರೆ. ರಾಜ್ಯಸಭಾ ಸದಸ್ಯತ್ವಕ್ಕೆ ನಾಮನಿರ್ದೇಶನ ಮಾಡುವ ಬಗ್ಗೆ ಆಹ್ವಾನ ನೀಡಿರುವುದನ್ನು ಪಕ್ಷ ದೃಢಪಡಿಸಿವೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ರಾಜನ್‌ ಒಪ್ಪಿಕೊಂಡಿದ್ದಾರೋ, ಇಲ್ಲವೋ ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

2015ರ ಚುನಾವಣೆಯಲ್ಲಿ ಜಯಭೇರಿ ಭಾರಿಸುವುದರೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿರುವ ಆಮ್‌ ಆದ್ಮಿ ಪಕ್ಷ, ರಾಜ್ಯಸಭೆಗೆ ಒಟ್ಟು ಮೂರು ಸದ ಸ್ಯರನ್ನು ನೇಮಿಸಬಹು ದಾಗಿದೆ. ಸದಸ್ಯತ್ವ ಮುಂದಿನ ಜನವರಿಯಿಂದ ಆರಂಭ ಗೊಳ್ಳ ಲಿದೆ. ಈ ಮೂರು ಸ್ಥಾನಕ್ಕೂ ಪಕ್ಷ ದಿಂದ ಹೊರಗಿರುವ ಹಾಗೂ ವೃತ್ತಿಪರರನ್ನೇ ಆಯ್ಕೆ ಮಾಡಬೇಕೆನ್ನುವುದು ಕೇಜ್ರಿವಾಲ್‌ ಲೆಕ್ಕಾಚಾರ ಎನ್ನಲಾಗಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆಯೇ, ಆಮ್‌ ಆದ್ಮಿಯ ಹಿರಿಯ ನಾಯಕ, ಕವಿ, ಕುಮಾರ್‌ ವಿಶ್ವಾಸ್‌ ಕೂಡ ರಾಜ್ಯಸಭೆ ಸದಸ್ಯತ್ವಕ್ಕೆ ತಾನೂ ಒಬ್ಬ ಪ್ರಬಲ ಆಕಾಂಕ್ಷಿ ಎಂದು ಹೇಳಿ ಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next