Advertisement

ದಿಲ್ಲಿಯ 7ರಲ್ಲಿ 6 ಸಂಸತ್‌ ಕ್ಷೇತ್ರಗಳಿಗೆ ಆಪ್‌ ಅಭ್ಯರ್ಥಿ ಹೆಸರು

10:34 AM Mar 02, 2019 | udayavani editorial |

ಹೊಸದಿಲ್ಲಿ : ದಿಲ್ಲಿಯ ಏಳು ಲೋಕಸಭಾ ಸೀಟುಗಳ ಪೈಕಿ ಆರು ಸೀಟುಗಳಿಗೆ ಆಮ್‌ ಆದ್ಮಿ ಪಕ್ಷ ಇಂದು ಶನಿವಾರ ತನ್ನ ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

Advertisement

ಅಭ್ಯರ್ಥಿಗಳ ಹೆಸರು ಮತ್ತು ಅವರ ಕ್ಷೇತ್ರ ವಿವರ ಇಂತಿದೆ :

1. ಆತಿಶ್‌ – ಪೂರ್ವ ದಿಲ್ಲಿ
2. ಗುಗ್ಗನ್‌ ಸಿಂಗ್‌ ರಂಗ – ವಾಯವ್ಯ ದಿಲ್ಲಿ.
3. ರಾಘವ ಛಡ್ಡಾ – ದಕ್ಷಿಣ ದಿಲ್ಲಿ.
4. ದಿಲೀಪ್‌ ಪಾಂಡೆ – ಈಶಾನ್ಯ ದಿಲ್ಲಿ.
5. ಪಂಕಜ್‌ ಗುಪ್ತ – ಚಾಂದಿನಿ ಚೌಕ್‌
6. ಬೃಜೇಶ್‌ ಗೋಯಲ್‌ – ಹೊಸದಿಲ್ಲಿ.

ಈ ಆರು ಅಭ್ಯರ್ಥಿಗಳನ್ನು ಈ ಮೊದಲು ಪಕ್ಷವು ಅವರವರ ಲೋಕಸಭಾ ಕ್ಷೇತ್ರಗಳಿಗೆ ಪ್ರಭಾರಿಗಳನ್ನಾಗಿ ನೇಮಕ ಮಾಡಿತ್ತು. 

ದಿಲ್ಲಿ ಆಪ್‌ ಸಂಚಾಲಕ ಗೋಪಾಲ್‌ ರಾಯ್‌ ಅವರು ಆರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಇಂದು ಪ್ರಕಟಿಸಿದರು. ಪಶ್ಚಿಮ ದಿಲ್ಲಿ ಕ್ಷೇತ್ರದ ಅಭ್ಯರ್ಥಿ ಯಾರೆಂಬುದನ್ನು ಶೀಘ್ರವೇ ಪ್ರಕಟಿಸಲಾಗುವುದು ಎಂದವರು ಸುದ್ದಿ ಗೋಷ್ಠಿಯಲ್ಲಿ ಹೇಳಿದರು. ಈ ಪ್ರಕಟನೆಯೊಂದಿಗೆ ಆಪ್‌ ಜತೆಗೆ ದಿಲ್ಲಿಯಲ್ಲಿ ಕಾಂಗ್ರೆಸ್‌ ಪಕ್ಷ ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬುದೀಗ ನಿಚ್ಚಳವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next