ಮುಂಬಯಿ : ಬಾಲಿವುಡ್‌ನ ಮಿಸ್ಟರ್ ಫರಪೆಕ್ಷನಿಸ್ಟ್ ಎಂದೇ ಖ್ಯಾತಿವೆತ್ತಿರುವ ಆಮಿರ್ ಖಾನ್ ಅವರ ಹೊಸ ಚಿತ್ರ ದಂಗಲ್ ವಾರದಿಂದ ವಾರಕ್ಕೆ ಬಾಕ್ಸ್ ಆಫೀಸ್ ದಾಖಲೆಯನ್ನು ಮುರಿಯುತ್ತಾ ಹೊಸ ದಾಖಲೆಗಳನ್ನು ಬರೆಯುತ್ತಾ ಇದೀಗ 350 ಕೋಟಿ ರೂ.ಗಳ ಸಂಪಾದನೆಯನ್ನು ದಾಟಿರುವುದು ಹೊಸ ವಿಕ್ರಮವಾಗಿದೆ.
ಅತ್ಯಂತ ಮನೋಜ್ಞವಾಗಿ ಚಿತ್ರಿತವಾಗಿರುವ ದಂಗಲ್ ಚಿತ್ರಕ್ಕಾಗಿ ಆಮಿರ್ ಖಾನ್ ಎರಡು ವರ್ಷಗಳ ಕಾಲ ಚಿತ್ರರಂಗದಿಂದ ಬಹುತೇಕ ನಾಪತ್ತೆಯಾಗಿದ್ದರು. ಈಗ ಅವರ ಈ ತಪಸ್ಸು ಅದ್ಭುತ ಫಲವನ್ನು ನೀಡುತ್ತಿದೆ.
ಕುಸ್ತಿಪಟು ಮಹಾವೀರ್ ಫೋಗಟ್ ತನ್ನಿಬ್ಬರು ಪುತ್ರಿಯರಾದ ಗೀತಾ ಫೋಗಟ್ ಮತ್ತು ಬಬಿತಾ ಕುಮಾರಿ ಅವರಿಗೆ ತಾನೇ ಖುದ್ದು ಕುಸ್ತಿ ಕಲೆಯನ್ನು ಕಲಿಸಿ ಅವರಿಂದ ದೇಶಕ್ಕೆ ಅಂತಾರಾಷ್ಟ್ರೀಯ ಪದಕಗಳನ್ನು ತರಿಸುವ ನೈಜ ಬದುಕಿನ ಕಥೆಯನ್ನು ಒಳಗೊಂಡ ದಂಗಲ್ ಚಿತ್ರದಲ್ಲಿ ಆಮೀರ್ ಅವರ ನಟನೆ ಅದ್ಭುತವಾಗಿದೆ; ಕಥೆ ಅತ್ಯಂತ ಹೃದಯಸ್ಪರ್ಶಿಯಾಗಿದೆ. ಹಾಗಾಗಿಯೇ ಈ ಚಿತ್ರ ವಾರದಿಂದ ವಾರಕ್ಕೆ ಹೊಸ ಹೊಸ ಬಾಕ್ಸ್ ಆಫೀಸ್ ವಿಕ್ರಮಗಳನ್ನು ದಾಖಲಿಸುತ್ತಲೇ ಬರುತ್ತಿದೆ.
ಖ್ಯಾತ ಸಿನೇಮಾ ವಿಮರ್ಶಕ ಹಾಗೂ ವಾಣಿಜ್ಯ ವಿಶ್ಲೇಷ ತರಣ್ ಆದರ್ಶ್ ಅವರು ದಂಗಲ್ ಚಿತ್ರದ ಬಾಕ್ಸ್ ಆಫೀಸ್ ವಿಕ್ರಮವನ್ನು ಈ ಕೆಳಗಿನಂತೆ ಗುರುತಿಸಿದ್ದಾರೆ :
ದಂಗಲ್ ಚಿತ್ರದ 2ನೇ ದಿನದ ಗಳಿಕೆ: 50 ಕೋಟಿ ರೂ., 3ನೇ ದಿನ 100 ಕೋಟಿ, 5ನೇ ದಿನ 150 ಕೋಟಿ, 8ನೇ ದಿನ 200 ಕೋಟಿ, 10ನೇ ದಿನ 250 ಕೋಟಿ, 13ನೇ ದಿನ 300 ಕೋಟಿ, 19ನೇ ದಿನ 350 ಕೋಟಿ ರೂ.
ಮೂರನೇ ವಾರದ ಮೊದಲ ದಿನವಾದ ಶುಕ್ರವಾರ 6.66 ಕೋಟಿ, ಶನಿವಾರ 10.80 ಕೋಟಿ, ಭಾನುವಾರ 14.33 ಕೋಟಿ, ಸೋಮವಾರ 4.35 ಕೋಟಿ, ಮಂಗಳವಾರ 4.03 ಕೋಟಿ
ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 353.68 ಕೋಟಿ ರೂ.