Advertisement

ಸೋಷಿಯಲ್ ಮೀಡಿಯಾಗಳಿಗೆ ಗುಡ್ ಬೈ ಹೇಳಿದ ನಟ ಅಮೀರ್ ಖಾನ್

06:35 PM Mar 15, 2021 | Team Udayavani |

ಮುಂಬೈ : ಬಾಲಿವುಡ್ ನಟ ಅಮೀರ್ ಖಾನ್ ಸಾಮಾಜಿಕ ಜಾಲತಾಣಗಳಿಂದ ಹೊರ ನಡೆದಿದ್ದಾರೆ. ಸಂವಹನ ಮಾಧ್ಯಮಗಳಾದ ಟ್ವಿಟರ್‍, ಫೇಸ್‍ಬುಕ್, ಇನ್‍ಸ್ಟಾಗ್ರಾಂಗಳಿಗೆ ಗುಡ್ ಬೈ ಹೇಳಿದ್ದಾರೆ.

Advertisement

ಇಂದು ಟ್ವಿಟರ್‍ ನಲ್ಲಿ ಕೊನೆಯ ಪೋಸ್ಟ್ ಮಾಡಿರುವ ಅಮಿರ್ ಖಾನ್, ಸಾಮಾಜಿಕ ಜಾಲತಾಣ ಬಳಕೆ ನಿಲ್ಲಿಸುತ್ತಿರುವುದಾಗಿ ಹಾಗೂ ಅದಕ್ಕೆ ಕಾರಣವನ್ನು ಹೇಳಿಕೊಂಡಿದ್ದಾರೆ.

ಭಾನುವಾರ 56 ನೇ ವಸಂತಕ್ಕೆ ಕಾಲಿಟ್ಟಿ ಬಿಟೌನ್ ಮಿಸ್ಟರ್ ಫರ್ಪೆಕ್ಟ್ ಅಮಿರ್ ಖಾನ್ ತಮ್ಮ ಟ್ವಿಟರ್ ಸೇರಿದಂತೆ ಎಲ್ಲ ಸೋಷಿಯಲ್ ಅಕೌಂಟ್‍ ಗಳ ಬಳಕೆ ಕೈ ಬಿಟ್ಟಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಸ್ಪಷ್ಟನೆ ನೀಡಿರುವ ಅವರು, ಸಿನಿಮಾಗಳ ಮೇಲೆ ಹೆಚ್ಚು ಗಮನ ಹರಿಸುವ ನಿಟ್ಟಿನಲ್ಲಿ ಸೋಷಿಯಲ್ ಮೀಡಿಯಾ ಬಳಕೆ ತ್ಯಜಿಸುತ್ತಿರುವುದಾಗಿ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ. ತಮ್ಮ ಮುಂದಿನ ಸಿನಿಮಾ ಸೇರಿದಂತೆ ಎಲ್ಲ ಮಾಹಿತಿಗಳು ಅಮೀರ್ ಖಾನ್ ಪ್ರೊಡಕ್ಷನ್ಸ್‌ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಮೂಲಕ ಲಭ್ಯವಾಗಲಿವೆ ಎಂದಿದ್ದಾರೆ.

ಅಮೀರ್ ಖಾನ್ ಕಳೆದ ಫೆಬ್ರುವರಿಯಲ್ಲಿಯೂ ತಮ್ಮ ಮೊಬೈಲ್ ಫೋನ್ ಬಳಕೆ ನಿಲ್ಲಿಸುವುದಾಗಿ ಹೇಳಿಕೊಂಡಿದ್ದರು. ಸಿನಿಮಾ ಶೂಟಿಂಗ್‍ಗೆ ಪ್ರಾಮುಖ್ಯತೆ ನೀಡುವ ನಿಟ್ಟಿನಲ್ಲಿ ಸ್ವಲ್ಪ ದಿನಗಳ ವರೆಗೆ ಮೊಬೈಲ್‍ ಬಳಕೆಯಿಂದ ದೂರ ಇರುವುದಾಗಿ ಹೇಳಿಕೊಂಡಿದ್ದರು.

ಇನ್ನು ಸದ್ಯ ಅಮೀರ್ ಖಾನ್ ಅವರ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಈ ವರ್ಷದ(2021) ಕ್ರಿಸ್‍ಮಸ್ ವೇಳೆಗೆ ಲಾಲ್ ಸಿಂಗ್ ಚಡ್ಡಾ ಬಿಡುಗಡೆಗೆಯಾಗುವ ನಿರೀಕ್ಷೆ ಇದೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next