Advertisement

Aakash: ಆಕಾಶ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗ ಯಶಸ್ವಿ

10:30 PM Jan 12, 2024 | Pranav MS |

ಬಾಲಸೋರ್‌: ಹೊಸ ತಲೆಮಾರಿನ ಆಕಾಶ್‌ ಕ್ಷಿಪಣಿಯ ಪ್ರಾಯೋಗಿಕ ಪರೀಕ್ಷೆ ಶುಕ್ರವಾರ ಒಡಿಶಾದ ಚಂದೀಪುರದಲ್ಲಿ ಯಶಸ್ವಿಯಾಗಿ ನೆರವೇರಿದೆ. ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಈ ಪ್ರಯೋಗವನ್ನು ಮಾಡಿದೆ.

Advertisement

ಭೂಮಿಯಿಂದ ಅತ್ಯಂತ ಕಡಿಮೆ ಎತ್ತರದಲ್ಲಿ ಅತ್ಯಧಿಕ ವೇಗದಲ್ಲಿ ಸಂಚರಿಸುತ್ತಿದ್ದ ವೈಮಾನಿಕ ಗುರಿಯನ್ನು ಆಕಾಶ್‌ ಕ್ಷಿಪಣಿ ವ್ಯವಸ್ಥೆಯು ಯಶಸ್ವಿಯಾಗಿ ಛೇದಿಸಿ, ನಾಶ ಮಾಡಿದೆ. ಈ ಮೂಲಕ ಕ್ಷಿಪಣಿ, ಸ್ವದೇಶಿ ನಿರ್ಮಿತ ರೇಡಿಯೋ ಫ್ರೀಕ್ವೆನ್ಸಿ ಸೀಕರ್‌, ಲಾಂಚರ್‌, ರೇಡಾರ್‌, ನಿಯಂತ್ರಣ ಮತ್ತು ಸಂವಹನ ವ್ಯವಸ್ಥೆಯನ್ನು ಒಳಗೊಂಡ ಪೂರ್ಣಪ್ರಮಾಣದ ಶಸ್ತ್ರಾಸ್ತ್ರ ವ್ಯವಸ್ತೆಯ ಕಾರ್ಯಕ್ಷಮತೆಯನ್ನು ದೃಢಪಡಿಸಿದೆ ಎಂದು ಡಿಆರ್‌ಡಿಒ ತಿಳಿಸಿದೆ.

ಆಕಾಶ್‌-ಎನ್‌ಜಿ ವ್ಯವಸ್ಥೆಯು ಅತ್ಯಾಧುನಿಕ ಕ್ಷಿಪಣಿ ವ್ಯವಸ್ಥೆಯಾಗಿದ್ದು, ಅಧಿಕ ವೇಗದ ಮತ್ತು ಚುರುಕಾದ ವೈಮಾನಿಕ ಬೆದರಿಕೆಗಳನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿರುವ ಕಾರಣ, ಮುಂದೆ ಇದನ್ನು ಬಳಕೆದಾರರ ಪ್ರಯೋಗಗಳಿಗೆ ಒಳಪಡಿಸಬಹುದಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
ಯಶಸ್ವಿ ಪರೀಕ್ಷೆ ಹಿನ್ನೆಲೆಯಲ್ಲಿ ಡಿಆರ್‌ಡಿಒ, ಭಾರತೀಯ ವಾಯುಪಡೆ, ಸಾರ್ವಜನಿಕ ವಲಯದ ಸಂಸ್ಥೆಗಳನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅಭಿನಂದಿಸಿದ್ದಾರೆ.

ಆಕಾಶ್‌ ಕ್ಷಿಪಣಿ ಬಗ್ಗೆ
– ಡಿಆರ್‌ಡಿಒದಿಂದ ಅಭಿವೃದ್ಧಿಪಡಿಸಲಾಗಿರುವ ತಂತ್ರಜ್ಞಾನ
– ಮಧ್ಯ ಪ್ರಾಚ್ಯ ಸೇರಿ ಹಲವು ರಾಷ್ಟ್ರಗಳಿಂದ ಖರೀದಿಗೆ ಆಸಕ್ತಿ
80 ಕಿಮೀ- ಕ್ಷಿಪಣಿಯ ವ್ಯಾಪ್ತಿ

Advertisement

Udayavani is now on Telegram. Click here to join our channel and stay updated with the latest news.

Next