Advertisement

ಊಟಕ್ಕೆ 7 ಲಕ್ಷ ರೂ. ತೆತ್ತ ಮಾಜಿ ಕ್ರಿಕೆಟಿಗ ಆಕಾಶ್‌ ಚೋಪ್ರಾ!

06:00 AM Jul 19, 2018 | Team Udayavani |

ನವದೆಹಲಿ: ಸಾಮಾನ್ಯವಾಗಿ ಹೋಟೆಲ್‌ ಅಥವಾ ರೆಸ್ಟೋರೆಂಟ್‌ಗೆ ತರಳಿದಾಗ ಮೆನು ಕಾರ್ಡ್‌ ನೋಡಿಕೊಂಡು ಆಹಾರ ಆರ್ಡರ್‌ ಮಾಡುವುದು ಸಹಜ. ಆದರೆ ಇಲ್ಲೊಬ್ಬ ಮಾಜಿ ಕ್ರಿಕೆಟಿಗ ಮೆನು ಕಾರ್ಡ್‌ ನೋಡದೆ, ಕನಿಷ್ಠ ಆಹಾರ ದರಗಳ ಲೆಕ್ಕಾಚಾರವನ್ನೂ ಮಾಡದೆ ಒಂದರ ಬೆನ್ನ ಹಿಂದೆ ಒಂದರಂತೆ ಬಗೆಬಗೆಯ ಆಹಾರವನ್ನು ವಿದೇಶಿ ರೆಸ್ಟೋರೆಂಟ್‌ವೊಂದರಲ್ಲಿ ಸೇವಿಸಿದ್ದಾರೆ. ಹೊಟ್ಟೆ ತುಂಬಾ ತಿಂದ ಬಳಿಕ ವೇಟರ್‌ಗೆ ಬಿಲ್‌ ಕೊಡಿ ಎಂದಿದ್ದಾರೆ. ಬಿಲ್‌ ನೋಡಿದ ಕ್ರಿಕೆಟಿಗ ಕಂಗಾಲಾಗಿದ್ದಾರೆ. ಒಂದು ಹೊತ್ತಿನ ಊಟ ಮುಗಿಸಿ ಹೊರಬರುವಷ್ಟರಲ್ಲಿ ಅವರಿಗೆ ಬಂದ ಬಿಲ್‌ ಬರೋಬ್ಬರಿ 7 ಲಕ್ಷ ರೂ. ಆಗಿತ್ತು.

Advertisement

ಟ್ವೀಟರ್‌ನಲ್ಲಿ ಕಥೆ ಬಿಚ್ಚಿಟ್ಟ ಕ್ರಿಕೆಟಿಗ: ಆಕಾಶ್‌ ಚೋಪ್ರಾ
ಹೆಸರು ಎಲ್ಲರಿಗೂ ಗೊತ್ತಿದೆ. ಒಂದಾನೊಂದು ಕಾಲದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌. ಕಳಪೆ ಫಾರ್ಮ್ನಿಂದಾಗಿ ತಂಡದಿಂದ ಹೊರಬಿದ್ದಿದ್ದರು. ಅವರು ಕ್ರಿಕೆಟ್‌ ಬಳಿಕ ಆಯ್ಕೆ ಮಾಡಿಕೊಂಡಿದ್ದು ಕ್ರಿಕೆಟ್‌ ಕಾಮೆಂಟ್ರಿ. ಒಬ್ಬ ಬ್ಯಾಟ್ಸ್‌ಮನ್‌ ಆಗಿ ಸಾಧಿಸಲಾಗದ್ದನ್ನು ಅವರು ಕ್ರಿಕೆಟ್‌ ಕಾಮೆಂಟ್ರಿ ಹೇಳುವ ಮೂಲಕ ಸಾಧಿಸಿದ್ದಾರೆ. ತಮ್ಮದೇ ಆದ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ.

ಸದ್ಯ ಟೀವಿ ಕ್ರಿಕೆಟ್‌ ಕಾಮೆಂಟ್ರಿಯಲ್ಲಿ ಚೋಪ್ರಾ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಇಂಡೋನೇಷ್ಯಾಕ್ಕೆ ತೆರಳಿದ್ದಾರೆ. ಭಾರತದ ಶೈಲಿಯ “ಇಂಡಿಯನ್‌ ತಂದೂರ್‌’ ಹೆಸರಿನ ರೆಸ್ಟೋರೆಂಟ್‌ ವೊಂದಕ್ಕೆ ತೆರಳಿ ಭರ್ಜರಿ ಊಟ ಮಾಡಿದ್ದಾರೆ. ಇಂಡೋನೇಷ್ಯಾದ ಕರೆನ್ಸಿ ಪ್ರಕಾರ ಬಿಲ್‌ 7 ಲಕ್ಷ
ರೂ. ಆಗಿತ್ತು. ಆಕಾಶ್‌ ಒಂದು ಕ್ಷಣ ಕಕ್ಕಾಬಿಕ್ಕಿಯಾದರು. ಬಳಿಕ ನಿಧಾನವಾಗಿ ಪರಿಶೀಲಿಸಿದಾಗ ಭಾರತೀಯ ಕರೆನ್ಸಿ ಪ್ರಕಾರ ಬಿಲ್‌ ಮೊತ್ತ 3,331 ರೂ. ಎಂದು ಅಲ್ಲಿನವರು ತಿಳಿಸಿದರು. ವಿಷಯ ತಿಳಿದ ಬಳಿಕ ಹಣ ತೆತ್ತು ನೆಮ್ಮದಿಯಿಂದ ಹೊರಬಂದರು. ಘಟನೆಯಿಂದಾಗಿ
ಇಂಡೋನೇಷ್ಯಾದ ಆರ್ಥಿಕತೆ ಭಾರತಕ್ಕೆ ಹೋಲಿಸಿದರೆ ಯಾವ ರೀತಿಯಲ್ಲಿ ಕುಸಿದಿದೆ ಎನ್ನುವುದನ್ನು ಕಾಣಬಹುದಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next