ಉಳ್ಳಾಲ: ಯಡಿಯೂರಪ್ಪ ನೇತೃತ್ವದ ಸರಕಾರದ ಅವಧಿಯಲ್ಲಿ ರೈತರಿಗೆ ಉತ್ತಮ ಯೋಜನೆಗಳು ಅನುಷ್ಠಾನ ಆಗಿತ್ತು. ಆದರೆ ಸಿದ್ದರಾಮಯ್ಯ ನೇತೃತ್ವದ ಸರಕಾರ ದಲ್ಲಿ ಘೋಷಣೆಗಳು ಮತ್ತು ಭಾಗ್ಯ ಗಳಿಗೆ ಮಾತ್ರ ಸೀಮಿತವಾಗಿವೆ ಎಂದು ವಿಧಾನಪರಿಷತ್ ಸದಸ್ಯೆ, ನಟಿ ತಾರಾ ಅನುರಾಧಾ ಅಭಿಪ್ರಾಯಪಟ್ಟರು.
ಅವರು ಅಸೈಗೋಳಿಯ ಕೃಷಿಕ ರಾಮ ಕೃಷ್ಣ ಮತ್ತು ಕುರ್ನಾಡಿನ ಟಿ.ಜಿ. ರಾಜಾರಾಮ ಭಟ್ ಅವರ ಮನೆಯಲ್ಲಿ ಬಿಜೆಪಿಯ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿ ಸರಕಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವು ಯೋಜನೆ ಅನುಷ್ಠಾನಗೊಳಿಸಿತ್ತು. ಆದರೆ ಈಗಿನ ಸರಕಾರದಲ್ಲಿ ಕಳೆದ 5 ವರ್ಷಗಳಲ್ಲಿ ರೈತರಿಗೆ ಸಂಬಂಧ ಪಟ್ಟ ಯೋಜನೆಗಳ ಘೋಷಣೆ ಮಾತ್ರ ನಡೆದಿದೆ. ರೈತರ ಆತ್ಮಹತ್ಯೆ ಗಳಾಗುತ್ತಿದ್ದರೂ ಸಮಸ್ಯೆಗೆ ಪರಿಹಾರ ಕಲ್ಪಿಸುವ ಬದಲು ಆತ್ಮಹತ್ಯೆ ಗೈದ ರೈತರಿಗೆ ಲಕ್ಷಾಂತರ ರೂ. ಪರಿಹಾರದ ಹೆಸರಿನಲ್ಲಿ ಆತ್ಮಹತ್ಯೆಗೆ ಪ್ರೋತ್ಸಾಹಿಸುವ ಕಾರ್ಯ ಮಾಡಿದೆ ಎಂದ ಅವರು, ಯಡಿಯೂರಪ್ಪ ಅವಧಿಯಲ್ಲಿ ರೈತರಿಗೆ ನಡೆಸಿದ ಯೋಜನೆಗಳ ಸ್ಮರಿಸುವ ನಿಟ್ಟಿನಲ್ಲಿ ಮುಷ್ಟಿ ಅಕ್ಕಿ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ ಎಂದರು.
ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿ ಯಾರ್, ಜಿ.ಪಂ. ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಟಿ.ಜಿ. ರಾಜಾರಾಮ ಭಟ್, ಬಿಜೆಪಿ ರಾಜ್ಯ ಸಮಿತಿ ಸದಸ್ಯ ರವೀಂದ್ರ ಶೆಟ್ಟಿ ಉಳಿದೊಟ್ಟು, ರೈತ ಮೋರ್ಚಾ ಜಿ. ಸಮಿತಿ ಅಧ್ಯಕ್ಷ ರಾಜೀವ ಭಂಡಾರಿ, ಪ್ರ. ಕಾರ್ಯದರ್ಶಿ ಪ್ರಶಾಂತ್ ಗಟ್ಟಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಆಶಾ ಜಗದೀಶ್, ಜಿ.ಕಾರ್ಯದರ್ಶಿ ನಮಿತಾ ಶ್ಯಾಂ, ರಾಜೀವಿ ಕೆಂಪುಮಣ್ಣು, ಜಿಲ್ಲಾ ಪ್ರ. ಕಾರ್ಯದರ್ಶಿ ಕಿಶೋರ್ ರೈ, ಮಂ. ಮಂಡಲ ರೈತ ಮೋರ್ಚಾ ಅಧ್ಯಕ್ಷ ಪ್ರೇಮಾನಂದ ರೈ, ರಣ್‌ದೀಪ್ ಕಾಂಚನ್, ಜಗದೀಶ್ ಆಳ್ವ ಕುವೆತ್ತಬೆೈಲು, ರಾಮಕೃಷ್ಣ ಪಟ್ಟೋರಿ, ಹೇಮಂತ್ ಶೆಟ್ಟಿ ದೇರಳಕಟ್ಟೆ, ನವೀನ್ ಪಾದಲ್ಪಾಡಿ, ಡಾ| ಮುನೀರ್ ಬಾವಾ, ಅಶ್ರಫ್ ಹರೇಕಳ, ಜೀವನ್ ಕುಮಾರ್, ಗೋಪಿನಾಥ್ ಬಗಂಬಿಲ, ಲೋಹಿತ್ ಗಟ್ಟಿ, ರಾಜೀವಿ ಕೆಂಪುಮಣ್ಣು ಉಪಸ್ಥಿತರಿದ್ದರು.