Advertisement

ಒಗ್ಗಟಿನಿಂದ ಸಮಸ್ಯೆ ಪರಿಹಾರ: ಶಿವಾನಂದ ಶೆಟ್ಟಿ

11:10 AM May 01, 2022 | Team Udayavani |

ಮುಂಬಯಿ: ಹೊಟೇಲಿಗರ ಪ್ರತಿಷ್ಠಿತ ಸಂಸ್ಥೆ ಆಹಾರ್‌ ತನ್ನ ಸದಸ್ಯರಲ್ಲಿ ಕ್ರೀಡಾ ಮನೋಭಾವನೆ ಹಾಗೂ ತಂಡ ಬಂಧು ತ್ವವನ್ನು ಕಲ್ಪಿಸುವ ಉದ್ದೇಶದಿಂದ ಆಹಾರ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾಟ ಎ. 28ರಂದು ಚುನ್ನಾಭಟ್ಟಿಯ ವಸಂತ್‌ದಾದಾ ಪಾಟೀಲ್‌ ಕ್ರೀಡಾಂಗಣದಲ್ಲಿ ನಡೆಯಿತು.

Advertisement

ಆಹಾರ್‌ನ ಹತ್ತು ವಲಯಗಳ ಹತ್ತು ತಂಡಗಳಾದ ವಲಯ ಒಂದರ ಸೂಪರ್‌ ಕಿಂಗ್ಸ್‌, ವಲಯ ಎರಡರ ಚಾಂಪಿಯನ್ಸ್‌, ವಲಯ ಮೂರರ ವಾರಿಯರ್, ವಲಯ ನಾಲ್ಕರ ಟೈಟನ್ಸ್‌, ವಲಯ ಐದರ ಸ್ಪಾರ್ಟನ್ಸ್‌, ವಲಯ ಆರರ ಇನ್‌ಕ್ರಿಟಿಬಲ್ಸ್‌. ವಲಯ ಏಳರ ಸ್ಟಾಲೈನ್ಸ್‌, ವಲಯ ಎಂಟರ ರಾಯಲ್ಸ್‌, ವಲಯ ಒಂಭತ್ತು ನಿಂಜಾಸ್‌, ವಲಯ ಹತ್ತರ ಸ್ಟೈಕರ್ ಭಾಗವಹಿಸಿದ್ದವು.

ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ಅವರು ಪಂದ್ಯಾಟವನ್ನು ದೀಪಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿ, ಆಹಾರ್‌ ಸದಸ್ಯ ಬಾಂಧವರನ್ನು ಒಂದೇ ವೇದಿಕೆಯಡಿಗೆ ತರುವಲ್ಲಿ ಶ್ರಮಿ ಸುತ್ತಿದೆ. ಹೊಟೇಲ್‌ ಉದ್ಯಮದ ಸಮಸ್ಯೆಗಳನ್ನು ಬಗೆಹರಿಸುವುದರೊಂದಿಗೆ ಹೊಟೇಲ್‌ ಉದ್ಯಮದಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾ ವಂತರಿಗೆ ವೇದಿಕೆಯನ್ನು ಕಲ್ಪಿಸಿಕೊಡುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಎರಡು ವರ್ಷಗಳ ಕೊರೊನಾ ಮಹಾಮಾರಿಯಿಂದ ಬಳಿಕ ಇದೀಗ ನಾವು ಸ್ವಲ್ಪ ಚೇತರಿಕೆಯನ್ನು ಕಾಣುತ್ತಿದ್ದು, 2 ವರ್ಷಗಳ ಬಳಿಕ ನಾವಿಂದು ಒಟ್ಟಾಗಿ ಸೇರಿದ್ದೇವೆ. ಸದಸ್ಯ ಬಾಂಧವರನ್ನು ಕಂಡಾಗ ಸಂತೋಷವಾಗುತ್ತಿದೆ. ನಮ್ಮಲ್ಲಿ ಒಗ್ಗಟ್ಟು ಮತ್ತು ಒಮ್ಮತವಿದ್ದಾಗ ಯಾವುದೇ ಸಮಸ್ಯೆಗಳು ಬಂದಾಗಲೂ ಸಮರ್ಥವಾಗಿ ಎದುರಿಸಲು ಸಾಧ್ಯವಾಗುತ್ತದೆ. ಒಗ್ಗಟ್ಟು  ಮತ್ತು ಬಂಧುತ್ವಕ್ಕಾಗಿ ಇಂತಹ ಕ್ರೀಡಾ ಕೂಟಗಳು ಪೂರಕವಾಗಿವೆ ಎಂದು ನುಡಿದು ಶುಭಹಾರೈಸಿದರು.

ಅಪರಾಹ್ನ 3ರಿಂದ ರಾತ್ರಿ 8ರ ವರೆಗೆ ನಡೆದ ಈ ಪಂದ್ಯಾವಳಿಯಲ್ಲಿ ವಲಯ ಐದರ ಸ್ಪಾರ್ಟನ್ಸ್‌ ತಂಡ ಆಹಾರ್‌ ಪ್ರೀಮಿ ಯರ್‌ ಲೀಗ್‌ ಕ್ರಿಕೆಟ್‌ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ವಲಯ 10 ರ ಸ್ಟೈಕರ್ ತಂಡವು ಉಪ ವಿಜೇತ ಪುರಸ್ಕಾರಕ್ಕೆ ಪಾತ್ರವಾಯಿತು. ಪಂದ್ಯಾವಳಿಯಲ್ಲಿ ಅತ್ಯು ತ್ತಮ ದಾಂಡಿಗ ಪುರಸ್ಕಾರವನ್ನು ಗೌರವ್‌ ಪಯ್ಯಡೆ ಅವರು ಪಡೆದರೆ, ಉತ್ತಮ ಬೌಲರ್‌ ಆಗಿ ಸಂದೀಪ್‌ ಶೆಟ್ಟಿ ಹಾಗೂ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು ಗಣೇಶ್‌ ಗಾಯಕ್ವಾಡ್‌ ಅವರು ಪಡೆದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆಹಾರ್‌ನ ಅಧ್ಯಕ್ಷ ಶಿವಾನಂದ ಶೆಟ್ಟಿ ಅವರು ಮಾತನಾಡಿ, ಭವಿಷ್ಯದಲ್ಲೂ ಇಂತಹ ಕ್ರೀಡಾಕೂಟಗಳನ್ನು ನಿರಂತರವಾಗಿ ಆಯೋಜಿಸಲಾಗುವುದು. ಭಾಗವಹಿಸಿದ ಎಲ್ಲ ತಂಡಗಳಿಗೆ ಹಾಗೂ ಸಹಕರಿಸಿದ ಸದಸ್ಯರಿಗೆ ಕೃತಜ್ಞತೆಗಳು. ಎಲ್ಲರ ಸಹಾಯ, ಸಹಕಾರ ಸದಾಯಿರಲಿ ಎಂದು ಶುಭಹಾರೈಸಿದರು. ಆಹಾರ್‌ನ ಪ್ರಧಾನ ಕಾರ್ಯದರ್ಶಿ ಸುಧಾಕರ್‌ ಟಿ. ಶೆಟ್ಟಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಲಯಗಳ ಉಪಾ ಧ್ಯಕ್ಷರು, ಉಪಸಮಿತಿಗಳ ಪದಾಧಿಕಾರಿಗಳು, ಸದಸ್ಯ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪಂದ್ಯಾಟದ ಪ್ರಾಯೋಜಕರಾಗಿ ಕಿಂಗ್‌ಫಿಶರ್‌, ಪೆನೊìಡ್‌ ಆ್ಯಂಡ್‌ ರಿಕಾರ್ಡ್‌, ಜಿ. ಟಿ. ಟೂರ್ ಆ್ಯಂಡ್‌ ಟ್ರಾವೆಲ್ಸ್‌ ಅವರು ಸಹಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next