Advertisement
ಭಾರತದಲ್ಲಿ ಆಧಾರ್ ಡಾಟಾ ಬೇಸ್‌ಗೆ ಅಕ್ರಮವಾಗಿ ಕೈ ಹಾಕಲಾಗಿರುವ ಬಗ್ಗೆ ಸಿಬಿಎಸ್ ಪತ್ರಕರ್ತ ಝಾಕ್ ವಿಟೇಕರ್ ಅವರು ಬಝ್ಫೀಡ್ ವರದಿಗೆ ನೀಡಿರು ಪ್ರತಿಕ್ರಿಯೆಗೆ ರೀ-ಟ್ವೀಟ್ ಮಾಡಿರುವ ಸ್ನೋಡನ್, ಖಾಸಗಿ ಮಾಹಿತಿಗಳ ಸುರಕ್ಷಿತವಾಗಿರಬೇಕು ಎಂಬುದು ಎಲ್ಲ ಸರಕಾರಗಳ ಸಹಜ ಪ್ರವೃತ್ತಿ ಮತ್ತು ಆಶಯವಾಗಿರುತ್ತದೆ; ಆದರೆ ಅದಕ್ಕೆ ಕನ್ನ ಹಾಕುವುದಕ್ಕೆ ಯಾವುದೇ ಕಾನೂನು ಒಂದು ಅಡಚಣೆಯೇ ಅಲ್ಲ ಎಂಬುದನ್ನು ಇತಿಹಾಸವೇ ನಮಗೆ ತೋರಿಸುತ್ತದೆ; ಪರಿಣಾಮವಾಗಿ ಅವು ಸುಲಭದಲ್ಲಿ ಚೋರರ ಕೈವಶವಾಗುತ್ತವೆ’ ಎಂದು ಹೇಳಿದ್ದಾರೆ.
Related Articles
Advertisement
ಖರೀದಿ ನಡೆಸಿದ ಕೇವಲ 10 ನಿಮಿಷಗಳಲ್ಲಿ ಆ ಏಜಂಟ್ ಪತ್ರಿಕಾ ವರದಿಗಾರನಿಗೆ ಲಾಗಿನ್ ಐಡಿ ಮತ್ತು ಪಾಸ್ ವರ್ಡ್ ಕೊಟ್ಟಿದ್ದಾನೆ. ಇದರ ಮೂಲಕ ನೂರು ಕೋಟಿ ಆಧಾರ್ ನಂಬರ್‌ಗಳಿಗೆ ಅನಿರ್ಬಂಧಿತ ಸಂಪರ್ಕ ದೊರಕಿ ಅವುಗಳಲ್ಲಿನ ಖಾಸಗಿ ಮಾಹಿತಿಗಳನ್ನು ತನಿಖಾ ವರದಿಗಾರ ಪಡೆದಿರುವುದಾಗಿ “ದ ಟ್ರಿಬ್ಯೂನ್’ ವರದಿ ತಿಳಿಸಿತ್ತು.
ಲಾಗ್ ಇನ್ ಗೇಟ್‌ವೇ ಮೂಲಕ ಯಾರೇ ಆದರೂ ಯಾವುದೇ ನಿರ್ದಿಷ್ಟ ಆಧಾರ್ ನಂಬರ್ ಅನ್ನು ಪೋರ್ಟಲ್‌ನಲ್ಲಿ ತಲುಪಬಹುದಾಗಿದ್ದು ಆ ನಂಬರ್‌ನ ವ್ಯಕ್ತಿಯ ಹೆಸರು, ವಿಳಾಸ, ಪೋಸ್ಟಲ್ ಕೋಡ್, ಫೋಟೋ, ಫೋನ್ ನಂಬರ್, ಇ-ಮೇಲ್ ವಿಳಾಸ ಇತ್ಯಾದಿಗಳನ್ನು ಸುಲಭದಲ್ಲಿ ಪಡೆಯಬಹುದಾಗಿದೆ. ಇದಕ್ಕಿಂತ ಗಂಭೀರವಾದ ಇನ್ನೊಂದು ಆಘಾತಕಾರಿ ಸಂಗತಿ ಎಂದರೆ ಹೆಚ್ಚುವರಿಯಾಗಿ 300 ರೂ.ಗಳನ್ನು ಏಜಂಟ್‌ಗೆ ಪಾವತಿಸಿದರೆ ಆಧಾರ್ ಕಾರ್ಡ್ ಪ್ರಿಂಟ್ ಮಾಡಬಲ್ಲ ಸಾಫ್ಟ್ ವೇರನ್ನು ಕೂಡ ಆತ ಒದಗಿಸುತ್ತಾನೆ ಎಂದು ಪತ್ರಿಕಾ ವರದಿ ತಿಳಿಸಿತ್ತು.