ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವೇ ಇಂತಹುದೊಂದು ಆದೇಶ ಹೊರಡಿಸಿದೆ. ಖಾಸಗಿ ಏಜೆನ್ಸಿಗಳು ಸೇರಿದಂತೆ ಆಧಾರ್ ನೋಂದಣಿ ಮಾಡುವಂಥ ಎಲ್ಲ ಕೇಂದ್ರಗಳನ್ನೂ ಸರ್ಕಾರಿ ಕಟ್ಟಡಗಳು, ಪಾಲಿಕೆ ಕಟ್ಟಡಗಳು, ಜಿಲ್ಲಾ ಪರಿಷತ್ ಅಥವಾ ಜಿಲ್ಲಾಧಿಕಾರಿ ಕಚೇರಿಯ ಆವರಣಕ್ಕೆ ವರ್ಗಾಯಿಸಬೇಕು. ಸೆಪ್ಟೆಂಬರ್‌ವೊಳಗೆ ಈ ಕಾರ್ಯ ಪೂರ್ಣಗೊಳ್ಳಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.
Advertisement
ದೇಶದಲ್ಲಿರುವ 25 ಸಾವಿರ ಆಧಾರ್ ನೋಂದಣಿ ಕೇಂದ್ರಗಳ ಮೇಲೆ ಈ ಸೂಚನೆಯು ಪರಿಣಾಮ ಬೀರಲಿದೆ ಎಂದು ಹೇಳಲಾಗಿದೆ. ಖಾಸಗಿ ಏಜೆನ್ಸಿಗಳು ಆಧಾರ್ ಮಾಡಿಕೊಡಲು ಮತ್ತು ತಿದ್ದುಪಡಿಗೆ ಜನರಿಂದ ಹೆಚ್ಚುವರಿ ಶುಲ್ಕ ಪಡೆಯುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ನೋಂದಣಿ ಕೇಂದ್ರಗಳು ಸರ್ಕಾರಿ ಕಟ್ಟಡಗಳ ಆವರಣದಲ್ಲೇ ಇದ್ದರೆ, ಅಲ್ಲಿನ ಕೆಲಸ ಕಾರ್ಯಗಳು ಸರ್ಕಾರದ ಮೇಲ್ವಿಚಾರಣೆಯಲ್ಲಿ ನಡೆಯುತ್ತವೆ. ಆಗ, ಈ ಎಲ್ಲ ಸಮಸ್ಯೆಗಳಿಗೂ ಪರಿಹಾರ ದೊರೆಯಲಿದೆ ಎಂದು ಪ್ರಾಧಿಕಾರದ ಸಿಇಒ ಅಜಯ್ ಭೂಷಣ್ ಪಾಂಡೆ ತಿಳಿಸಿದ್ದಾರೆ.