Advertisement
ಒಪ್ಪಂದದ ಸ್ವರೂಪ ಹೇಗೆ?ಸದ್ಯ ಆಯ್ಕೆಯಾಗಿರುವ ಗ್ರಾ.ಪಂಗಳಲ್ಲಿ ಸಿಎಸ್‌ಸಿ-ಎಸ್‌ಪಿವಿ ಸಂಸ್ಥೆಯವರು ಆಧಾರ್ ನೋಂದಣಿ ಮತ್ತು ತಿದ್ದುಪಡಿಗೆ ನೌಕರರನ್ನು ನೇಮಿಸಲಿದ್ದಾರೆ. ಆಧಾರ್ ಕಿಟ್‌ಗಳನ್ನು ಸಂಸ್ಥೆಯವರೇ ಅಳವಡಿಸುತ್ತಾರೆ. ಗ್ರಾ.ಪಂ.ನವರು ಕೇಂದ್ರ ಸ್ಥಾಪನೆಗೆ ಸ್ಥಳಾವಕಾಶ, ಇಂಟರ್‌ನೆಟ್ ಹಾಗೂ ಮೂಲಸೌಕರ್ಯ ನೀಡಬೇಕಿದೆ. ಪ್ರತೀ ಆಧಾರ್ ನೋಂದಣಿ, ತಿದ್ದುಪಡಿಗೆ ಸಂಗ್ರಹವಾಗುವ 100 ರೂ.ಗಳಲ್ಲಿ ಸಿಎಸ್‌ಸಿ, ಎಸ್‌ಪಿವಿಗೆ 85 ರೂ. ಮತ್ತು ಗ್ರಾ.ಪಂ./ಗ್ರಾಮೀಣಾಭಿವೃದ್ಧಿ ಹಾಗೂ ಪಂ.ರಾಜ್ ಇಲಾಖೆಗೆ 15 ರೂ. ನೀಡಲಾಗುತ್ತದೆ.
ಗ್ರಾ.ಪಂ.ನಲ್ಲಿ ಸಿಬಂದಿ ಮೂಲಕ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಸ್ಥಾಪಿಸಿದರೆ ಪಂಚಾಯತ್‌ನ ದೈನಂದಿನ ಕಾರ್ಯಗಳಿಗೆ ತೊಂದರೆ ಉಂಟಾಗಲಿದೆ. ಹಾಗೂ ಆಧಾರ್ ನೋಂದಣಿ – ತಿದ್ದುಪಡಿ ಪರಿಣಾಮಕಾರಿಯಾಗಿ ಅನುಷ್ಠಾನ ವಾಗುವುದಿಲ್ಲ. ಹೀಗಾಗಿ ಸಿಎಸ್‌ಸಿ, ಎಸ್‌ಪಿವಿ ಸಹಯೋಗದೊಂದಿಗೆ ಆಧಾರ್ ನೋಂದಣಿ ತಿದ್ದುಪಡಿ ಕೇಂದ್ರ ಸ್ಥಾಪನೆಗೆ ರಾಜ್ಯ ಸರಕಾರ ನಿರ್ಧರಿಸಿದೆ. ದಕ್ಷಿಣ ಕನ್ನಡ, ಉಡುಪಿ : ಎಲ್ಲೆಲ್ಲಿ?
ದ.ಕ. ಜಿಲ್ಲೆಯ ಮಂಗಳೂರು ತಾಲೂಕಿನ ಬಜಪೆ ಗ್ರಾಮ ಪಂಚಾಯತ್, ಬಂಟ್ವಾಳ ತಾಲೂಕಿನ ಕೊಳ್ನಾಡು, ಬೆಳ್ತಂಗಡಿಯ ಉಜಿರೆ, ಸುಳ್ಯದ ಅಲೆಟ್ಟಿ, ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾ. ಪಂ., ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶಿರೂರು, ಉಡುಪಿ ತಾಲೂಕಿನ ಪಡುಬಿದ್ರಿ, ಅಲೆವೂರು, ಕಾರ್ಕಳದ ನಿಟ್ಟೆ, ವರಂಗದಲ್ಲಿ ಪ್ರಾಯೋಗಿಕವಾಗಿ ಆಧಾರ್ ತಿದ್ದುಪಡಿಗೆ ಅವಕಾಶ ಕಲ್ಪಿಸಲಾಗಿದೆ.
Related Articles
ಸಿಎಸ್‌ಸಿ, ಎಸ್‌ಪಿವಿ ಸಹಯೋಗ ದೊಂದಿಗೆ ಗ್ರಾ.ಪಂ.ಗಳಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕೇಂದ್ರ ಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಸೂಚಿಸಿದ್ದು, ಅದರಂತೆ ಪ್ರಾಯೋಗಿಕ ವಾಗಿ ದ.ಕ. ಜಿಲ್ಲೆ ಯಲ್ಲಿ 5 ಗ್ರಾ. ಪಂ.ಗಳನ್ನು ಆಯ್ಕೆ ಮಾಡಲಾಗಿದೆ. ಇದು ಯಶಸ್ವಿಯಾದರೆ ಇತರ ಗ್ರಾ. ಪಂ.ಗಳಲ್ಲಿ ಜಾರಿ ಗೊ ಳಿಸುವ ನಿಟ್ಟಿನಲ್ಲಿ ಸರಕಾರ ತೀರ್ಮಾ ನಿಸಲಿದೆ.
ಆರ್. ಸೆಲ್ವಮಣಿ, ಸಿಇಒ, ಜಿ. ಪಂ.-ದ.ಕ.
Advertisement