ಹೊಸದಿಲ್ಲಿ: ಭೂಮಿ ಮಾರುವ ಅಥವಾ ಕೊಳ್ಳುವ ಯೋಚನೆ ಇದೆಯಾ? ಹಾಗಿದ್ದರೆ ಮುಂದಿನ ದಿನಗಳಲ್ಲಿ ಈ ವ್ಯವಹಾರಕ್ಕೂ ಆಧಾರ್ ಲಿಂಕ್ ಮಾಡಬೇಕಾದೀತು. ಕೇಂದ್ರ ನಗರಾಭಿವೃದ್ಧಿ ಖಾತೆ ಸಹಾಯಕ ಸಚಿವ ಹರ್‌ದೀಪ್‌ಪುರಿ ಇಂಥದ್ದೊಂದು ಸುಳಿವು ನೀಡಿದ್ದಾರೆ. ಬ್ಯಾಂಕ್ ಖಾತೆ, ಮೊಬೈಲ್ ಸಂಖ್ಯೆ, ತೆರಿಗೆ ರಿಟರ್ನ್ಸ್ ಸಲ್ಲಿಕೆ ಮತ್ತು ಪ್ಯಾನ್ ಕಾರ್ಡ್‌ಗೆ ಆಧಾರ್ ಲಿಂಕ್ ಕಡ್ಡಾಯವಾದ ಬಳಿಕ ಪ್ರಧಾನಿ ಮೋದಿ ಸರಕಾರದಿಂದ ಈ ನಿರ್ಣಯ ಹೊರ ಬೀಳುವ ಸಾಧ್ಯತೆ ಇದೆ.
ನೋಟು ಅಮಾನ್ಯಗೊಳಿಸಿ ಕಪ್ಪುಹಣ ಪಿಡುಗಿನ ಸದ್ದಡಗಿಸಲು ಪ್ರಯತ್ನ ಮಾಡುತ್ತಿರುವ ಪ್ರಧಾನಿ, ಇನ್ನೊಂದು ಸಾಹಸಕ್ಕೆ ಕೈ ಹಾಕಲು ಸಜ್ಜಾಗಿದ್ದಾರೆ. ಬೇನಾಮಿ ಆಸ್ತಿ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಅವರು ಹಲವು ಬಾರಿ ಘೋಷಣೆ ಮಾಡಿದ್ದರು. ಅದಕ್ಕೆ ಪೂರಕವಾಗಿ ರಿಯಲ್ ಎಸ್ಟೇಟ್ ವಹಿವಾಟಿಗೆ ಆಧಾರ್ ಲಿಂಕ್ ಮಾಡ ಲಾಗುತ್ತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
“ಇಟಿ ನೌ’ ಚಾನೆಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವ ಹದೀìಪ್ ಸಿಂಗ್ ಪುರಿ “ರಿಯಲ್ ಎಸ್ಟೇಟ್ ವ್ಯವಹಾರಕ್ಕೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯ ಗೊಳಿಸುವ ಬಗ್ಗೆ ಚಿಂತನೆಗಳಿವೆ. ಇದ ರಿಂದಾಗಿ ಈ ಕ್ಷೇತ್ರದಲ್ಲಿರುವ ಕಪ್ಪುಹಣ ನಿಯಂತ್ರಿಸಲು ಸಾಧ್ಯವಾಗುತ್ತದೆ. ಜತೆಗೆ ಬೇನಾಮಿ ಆಸ್ತಿ ನಿಯಂತ್ರಣಕ್ಕೆ ನೆರವಾ ಗು ತ್ತದೆ. ಆದರೆ ಈ ನಿಟ್ಟಿನಲ್ಲಿ ಸದ್ಯ ಅಧಿಕೃತ ಘೋಷಣೆ ಮಾಡಲು ಹೋಗುವುದಿಲ್ಲ’ ಎಂದಿದ್ದಾರೆ.
ಆಧಾರ್ ಅನ್ನು ಆಸ್ತಿ ಖರೀದಿಯಲ್ಲಿ ಜಾರಿಗೆ ತಂದರೆ ಅರ್ಥ ವ್ಯವಸ್ಥೆಯಲ್ಲಿ ಪಾರ ದರ್ಶಕತೆ ತಂದಂತೆ ಆಗುತ್ತದೆಯೇ ಎಂದು ಕೇಳಿದಾಗ “ಆ ದಿಕ್ಕಿನಲ್ಲಿ ನಾವು ಈಗಾಗಲೇ ಸಾಗುತ್ತಿದ್ದೇವೆ. ಶೀಘ್ರವೇ ಅದು ಜಾರಿ ಯಾಗಲಿದೆ’ ಎಂದಿದ್ದಾರೆ. ಜತೆಗೆ ಇಬ್ಬರು ವ್ಯಕ್ತಿಗಳ ನಡುವಿನ ಭೂಮಿ ವಹಿವಾಟು ಸಂಪೂರ್ಣ ಪಾರದರ್ಶಕ ವಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಅದರ ಮೇಲೆ ಗಮನ ಇರಿಸಬಹುದು ಎಂದರು. “ವಿಶ್ವದ ಯಾವುದೇ ದೇಶದ ಅರ್ಥ ವ್ಯವಸ್ಥೆಯಲ್ಲಿ ನಗದು ವಹಿವಾಟು ಇಲ್ಲವೇ ಇಲ್ಲ ಎಂಬ ಪರಿಸ್ಥಿತಿ ಇಲ್ಲ. ಆದರೆ ದೊಡ್ಡ ಮೊತ್ತದ ನಗದನ್ನು ತೆಗೆದುಕೊಂಡು ಹೋಗ ಬೇಕಾದ ಅಗತ್ಯವಿದೆಯೇ ಎಂಬುದನ್ನು ಗಮನಿ ಸಬೇಕು. ಈ ನಿಟ್ಟಿನಲ್ಲಿ ದೇಶ ಬದಲಾವಣೆಗೊಳ್ಳುತ್ತಿದೆ’ ಎಂದಿದ್ದಾರೆ.