Advertisement

ಅನಧಿಕೃತ ಆಟೋಚಾಲನೆ ಕಡಿವಾಣಕ್ಕೆ ಆಧಾರ್‌-ಇ ಪರ್ಮಿಟ್‌

11:31 AM Feb 14, 2018 | |

ಬೆಂಗಳೂರು: ಆಧಾರ್‌ ಸಂಖ್ಯೆಯನ್ನು ಲಿಂಕ್‌ ಮಾಡುವ ಮೂಲಕ ಆಟೋ ಚಾಲಕರಿಗೆ ಇ- ಪರ್ಮಿಟ್‌ ವಿಸ್ತರಿಸುವ ಯೋಜನೆ ಜಾರಿಗೊಳಿ ಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

Advertisement

ಒಂದೇ ಪರ್ಮಿಟ್‌ ನಂಬರ್‌ ಇಟ್ಟುಕೊಂಡು ಹಲವು ಆಟೋಗಳ ಸಂಚಾರಕ್ಕೆ ಕಡಿವಾಣ ಹಾಕುವ ಸಲುವಾಗಿ ಸಾರಿಗೆ ಇಲಾಖೆ “ಆಧಾರ್‌ ಇ-ಪರ್ಮಿಟ್‌’ ವ್ಯವಸ್ಥೆ ಯೋಜನೆ ಜಾರಿಗೆ ಮುಂದಾಗಿದೆ. ಈಗಾಗಲೇ ಆಧಾರ್‌ ಇ-ಪರ್ಮಿಟ್‌ ನೀಡುವ ಪ್ರಾಯೋಗಿಕ ಪರೀಕ್ಷೆ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಯಶಸ್ವಿಯಾಗಿದ್ದು, ಇದೀಗ ನಗರಾದ್ಯಂತ ವಿಸ್ತರಿಸುವ ಸಲುವಾಗಿ ರಾಜಧಾನಿಯಲ್ಲಿ ಸಂಚರಿಸುವ ಆಟೋರಿಕ್ಷಾಗಳ ಪರವಾನಿಗೆಯನ್ನು ಭದ್ರತಾ ಅಂಶಗಳನ್ನೊಳಗೊಂಡ ಇ-ಪರ್ಮಿಟ್‌ ವ್ಯವಸ್ಥೆ ಜಾರಿಗೊಳಿಸಲು ಆಧಾರ್‌ ಸಂಖ್ಯೆಯೊಂದಿಗೆ ಲಿಂಕ್‌ ಮಾಡುವ ಸಾಫ್ಟ್ ವೇರ್‌ ಸಿದ್ಧಪಡಿಸಲು, ಎನ್‌ಐಸಿ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.

ನಗರದಲ್ಲಿ ಒಟ್ಟು 1.56,758 ಆಟೋರಿಕ್ಷಾಗಳು ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿವೆ. ಅಲ್ಲದೆ ಆಟೋರಿಕ್ಷಾಗಳ ಅನಧಿಕೃತ ಓಡಾಟಕ್ಕೆ ಕಡಿವಾಣ ಹಾಕುವ ಸಲುವಾಗಿ ರೂಪಿಸಲಾಗುತ್ತಿರುವ ಆಧಾರ್‌ ಇಪರ್ಮಿಟ್‌ ಸಹಕಾರಿಯಾಗಲಿದೆ ಎಂದು ವಿಧಾನಪರಿಷತ್‌ನಲ್ಲಿ ಸಾರಿಗೆ ಸಚಿವ ಎಚ್‌. ಎಂ ರೇವಣ್ಣ ತಿಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next