Advertisement

ಕಾಪು ಬೀಚ್‌ನಲ್ಲಿ  ನೀರು ಪಾಲಾದ ಯುವಕನ ಶವ ಪತ್ತೆ

10:36 AM Apr 30, 2018 | Harsha Rao |

ಕಾಪು: ಕಾಪು ಬೀಚ್‌ನಲ್ಲಿ ನೀರು ಪಾಲಾಗಿದ್ದ  ಬೆಂಗಳೂರು ನಿವಾಸಿ, ಮೂಲತಃ ರಾಜಸ್ಥಾನ ಮೂಲದ ಕಿಶೋರ್‌ ಸಿಂಗ್‌ (19) ಎಂಬಾತನ ಶವ ಎ. 29ರಂದು ಲೈಟ್‌ಹೌಸ್‌ ಬಳಿ ಪತ್ತೆಯಾಗಿದೆ.

Advertisement

ಶನಿವಾರ ಮಧ್ಯಾಹ್ನ ಬೆಂಗಳೂರು ಮತ್ತು ಮಂಗಳೂರಿನಿಂದ ಕಾಪು ಸಮುದ್ರ ತೀರಕ್ಕೆ ಆಗಮಿಸಿದ್ದ  ಏಳು ಜನರ ತಂಡದಲ್ಲಿದ್ದ ಕಿಶೋರ್‌ ಸಿಂಗ್‌ ಮತ್ತು ಭರತ್‌ ಸಿಂಗ್‌ ಸಮುದ್ರ ಪಾಲಾಗಿದ್ದರು.

ಇವರಲ್ಲಿ ಭರತ್‌ ಸಿಂಗ್‌ನನ್ನು ಲೈಫ್‌ ಗಾರ್ಡ್‌ ಸದಸ್ಯರು ರಕ್ಷಿಸಿದ್ದು, ಕಿಶೋರ್‌ ಸಿಂಗ್‌ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಕಿಶೋರ್‌ನ ಪತ್ತೆಗಾಗಿ ಲೈಫ್‌ ಗಾರ್ಡ್‌ ಸದಸ್ಯರು, ಪೊಲೀಸರು, ಹೋಮ್‌ ಗಾರ್ಡ್‌ ಸಿಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಯವರು ಸಾಕಷ್ಟು ಹುಡುಕಾಟ ನಡೆಸಿದ್ದರೂ ವಿಫಲರಾಗಿದ್ದರು.

ರವಿವಾರ ಬೆಳಗ್ಗೆ  ಕಾಪು ಲೈಟ್‌ ಬಳಿ ಸಮುದ್ರದಲ್ಲಿ  ಶವ ತೇಲುತ್ತಿರುವ ಬಗ್ಗೆ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮ್ಮುಖದಲ್ಲಿ  ಚಂದ್ರಹಾಸ್‌ ಕೈಪುಂಜಾಲು, ಸೂರಿ ಶೆಟ್ಟಿ, , ಪ್ರಶಾಂತ್‌, ವಿನೀತ್‌ ಜತೆ ಸೇರಿ ಶವವನ್ನು ಮೇಲಕ್ಕೆತ್ತಿದ್ದಾರೆ.ಮೃತದೇಹವನ್ನು ಮಣಿಪಾಲದಲ್ಲಿ ಮರಣೋತ್ತರ ಪರೀಕೆೆÒಗೊಳಪಡಿಸಿ, ಬಳಿಕ ಮೃತನ ಸಹೋದರ ಜೋದ ರಾಮ್‌ ಅವರಿಗೆ ಹಸ್ತಾಂತರಿಸಲಾಗಿದೆ. ಶವವನ್ನು ರಾಜಸ್ಥಾನಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next