Advertisement

ಐಎಸ್‌ಕೆಪಿ ಸೇರಲು ಸಿದ್ಧನಿದ್ದ ಬೆಂಗಳೂರಿನ ಯುವಕ

02:07 PM Aug 06, 2021 | Team Udayavani |

ಬೆಂಗಳೂರು: ಸಾಮಾಜಿಕ ಜಾಲತಾಣ ಹಾಗೂ ಕೆಲವೊಂದು ಆ್ಯಪ್‌ ಗಳು ಮೂಲಕ ಐಸಿಸ್‌ ಸಂಘಟನೆಯ ಸದಸ್ಯರನ್ನು ಸಂಪರ್ಕಿಸಿ, ಐಎಸ್‌-ಕೆಪಿ ಸಂಘಟನೆ ಸೇರಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಾಗಿದ್ದ ಬೆಂಗಳೂರಿನ ಮತ್ತೊಬ್ಬ ಶಂಕಿತನನ್ನು ಎನ್‌ಐಎ ಮತ್ತು ಸ್ಥಳೀಯ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ.

Advertisement

ಮಾದೇಶ್‌ ಪೆರುಮಾಳ್‌(26) ಬಂಧಿತ. ವೈಟ್‌ ಫೀಲ್ಡ್‌ನ ನಿವಾಸಿ ಮಾದೇಶ್‌ ಪೆರುಮಾಳ್‌ ಪಿಯುಸಿ ಅನುತ್ತೀರ್ಣವಾಗಿದ್ದಾನೆ. ಆದರೆ, ಯಾವಾಗಲೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಮಾದೇಶ್‌, ಐಸಿಸ್‌ ಬಗ್ಗೆ ಒಲವು ಹೊಂದಿದ್ದ. ಈ ನಡುವೆ ಟೆಲಿಗ್ರಾಂ, ಸಿಗ್ನಲ್‌ ಮತ್ತು ಇತರೆ ಆ್ಯಪ್‌ ಗಳು ಹಾಗೂ ಯುಟ್ಯೂಬ್‌ ಚಾನೆಲ್‌ಗ‌ಳ ಮೂಲಕ ದೇಶ-ವಿದೇಶದಲ್ಲಿರುವ ಐಸಿಸ್‌ ಸಂಘಟನೆ ಸದಸ್ಯರನ್ನು ಸಂಪರ್ಕಿಸಿದ್ದ. ಈ ವೇಳೆ ಅವಕಾಶ ಕೊಟ್ಟರೆ, ದೇಶ-ವಿದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಿದ್ಧವಿರುವುದಾಗಿ ಹೇಳಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.

ಐಎಸ್‌ಕೆಪಿ ಸೇರಲು ಸಿದ್ಧತೆ: ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆಯ ಸದಸ್ಯರನ್ನು ಸಂಪರ್ಕಿಸಿದ್ದ ಮಾದೇಶ್‌, ಅಫ್ಘಾನಿಸ್ತಾನದ ಉಗ್ರಸಂಘಟನೆ ಇಸ್ಲಾಮಿಕ್‌ ಸ್ಟೇಟ್‌-ಕೊರಸನ್‌ ಪ್ರಿವೆಟ್‌ (ಐಎಸ್‌-ಕೆಪಿ) ಸಂಘಟನೆ ಸೇರಲು ಸಿದ್ಧತೆ ನಡೆಸಿದ್ದ.
ತಮ್ಮ ಸಂಘಟನೆ ಸಿದ್ಧಾಂತಗಳು ತನಗೆ ಇಷ್ಟವಾಗಿದೆ.

ಹೀಗಾಗಿ ಸಂಘಟನೆಯಲ್ಲಿ ತನ್ನನ್ನು ಸದಸ್ಯನ್ನಾಗಿಮಾಡಿಕೊಳ್ಳಿ ಎಂದು ಕೋರಿದ್ದ. ಆದರೆ, ಹಿಂದೂ ಆಗಿದ್ದರೂ ಯಾವ ಕಾರಣಕ್ಕೆ ಈತ ಇಸ್ಲಾಂ ಬಗ್ಗೆ ಒಲವು ಹೊಂದಿದ್ದಾನೆ ಎಂಬ ಅನುಮಾನ ವ್ಯಕ್ತಪಡಿಸಿದ್ದ ಸಂಘಟನೆ ಸದಸ್ಯರು, ಹಲವು ಬಾರಿ ಈತ ಒತ್ತಾಯಿಸಿದ್ದರೂ ರಾಜ್ಯ ಮತ್ತು ದೇಶದಲ್ಲಿರುವ ಸಂಘಟನೆ ಸದಸ್ಯರ ನೇರ ಭೇಟಿಗೆ ನಿರಾಕರಿಸಿದ್ದರು. ಅನಂತರ ಈತನೇ ಸಾಮಾಜಿಕ ಜಾಲತಾಣ ಮೂಲಕ ಸಂಘಟನೆ ಸದಸ್ಯರಿಗೆ ತಾನು ವಿಧ್ವಂಸಕ ಕೃತ್ಯ ಎಸಗಲು ಸಿದ್ಧನಿದ್ದೇನೆ. ಯಾವುದೇ ಕೆಲಸ ಕೊಟ್ಟರು ಮಾಡುತ್ತೇನೆ ಎಂದು ಭರವಸೆ ನೀಡಿದ್ದ
ಎಂದು ಮೂಲಗಳು ತಿಳಿಸಿವೆ.

ಹಣ ಕೊಟ್ಟಿರಲಿಲ್ಲ!: ಐಎಸ್‌-ಕೆಪಿ ಸಂಘಟನೆ ಬಗ್ಗೆ ಒಲವು ಹೊಂದಿದ್ದ ಮಾದೇಶ್‌, ತಾನು ವಿದೇಶಕ್ಕೆ ಹೋಗಿ ಹಣ ಸಂಪಾದಿಸುತ್ತೇನೆ. ತೆರಳಲು ಹಣ ನೀಡಿ ಎಂದು ತಂದೆ ಬಳಿ ಕೇಳಿದ್ದ. ಆದರೆ, ಅವರು ಹಣ ಕೊಟ್ಟಿರಲಿಲ್ಲ. ಅದರಿಂದ ಈತ ಅಸಮಾಧಾನಗೊಂಡಿದ್ದ. ಮತ್ತೊಂದೆಡೆ ಉಗ್ರ ಸಂಘಟನೆ ಸದಸ್ಯರ ಬಳಿಯೂ ಅಫ್ಘಾನಿಸ್ತಾನ ಅಥವಾ ಸಿರಿಯಾಗೆ ಬರಲು ತನಗೆ ಆರ್ಥಿಕ ಸಹಾಯ ಮಾಡಿ ಎಂದು ಕೋರಿದ್ದ. ಆದರೆ, ಶಂಕಿತರು ಸಹಾಯ ಮಾಡದೆ ಅಲ್ಲಿಯೇ ಟಾಸ್ಕ್ ಕೊಡುವುದಾಗಿ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

Advertisement

3 ವರ್ಷಗಳಿಂದ ಉಗ್ರರಜತೆ ಮಾದೇಶ ಸಂಪರ್ಕ
ಕಳೆದ ಮೂರು ವರ್ಷಗಳಿಂದ ಸಂಘಟನೆ ಸದಸ್ಯರಜತೆಆನ್‌ಲೈನ್‌ ಮೂಲಕ ಸಂಪರ್ಕದಲ್ಲಿರುವ ಮಾದೇಶ್‌,ಈ ಮಧ್ಯೆ ಆಫ್ಘಾನಿಸ್ತಾನ-ಸಿರಿಯಾಗೆಬರಲು ಅವಕಾಶ ನೀಡದಿದ್ದರೆ, ಭಾರತದ ಯಾವುದೇಭಾಗದಲ್ಲಿವಿಧ್ವಂಸಕ ಕೃತ್ಯ ಎಸಗಲು ಸಿದ್ಧವಾಗಿದ್ದೇನೆ.ಈ ಮೂಲಕ
ತನ್ನ ಸಾಮರ್ಥ್ಯ ತೋರಿಸುತ್ತೇನೆ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಸಂಘಟನೆ ಸದಸ್ಯರಬಳಿ ಹೇಳಿಕೊಂಡಿದ್ದ.ಈ ಮಾಹಿತಿ ಸಂಗ್ರಹಿಸಿದ ದೆಹಲಿಎನ್‌ಐಎ ಅಧಿಕಾರಿಗಳು ಆತನ ಮನೆ ಮೇಲೆ ದಾಳಿ ನಡೆಸಿಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

-ಮೋಹನ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next