Advertisement
ಜೂ. 22ರಂದು ಮರ್ದಾಳದಲ್ಲಿ ತನ್ನ ಮಾಲಕತ್ವದ ಚಿನ್ನದಂಗಡಿಯ ಉದ್ಘಾಟನೆಯ ಸಿದ್ಧತೆಯಲ್ಲಿದ್ದ ನಾಗಪ್ರಸಾದ್ ಅದೇ ದಿನ ಮುಂಜಾನೆ ಕೆಂಪುಹೊಳೆ ಬಳಿ ಶವವಾಗಿ ಪತ್ತೆಯಾಗಿದ್ದರು. ಘಟನೆಯ ಕುರಿತು ಸಾರ್ವಜನಿಕ ವಲಯದಲ್ಲಿ ಹಲವು ಊಹಾಪೋಹಗಳು ಕೇಳಿಬಂದಿದ್ದವು. ಜಖಂಗೊಂಡಿರುವ ಬೈಕ್ ಹಾಗೂ ಮೃತದೇಹ ಪತ್ತೆಯಾಗಿರುವ ಜಾಗದಲ್ಲಿನ ರಸ್ತೆಯ ಪಕ್ಕದ ಕಾಂಕ್ರೀಟ್ ಕಟ್ಟೆಗೆ ಬೈಕ್ ಢಿಕ್ಕಿ ಹೊಡೆದು ಬಳಿಕ ಚರಂಡಿಗೆ ಉರುಳಿ ಬಿದ್ದ ರೀತಿಯಲ್ಲಿ ಕುರುಹುಗಳು ಕಂಡುಬಂದಿರುವುದು ಮತ್ತು ಮರಣೋತ್ತರ ಪರೀಕ್ಷೆಯ ವರದಿಯಲ್ಲಿಯೂ ಅಪಘಾತದಿಂದಾಗಿಯೇ ಮರಣ ಸಂಭವಿಸಿದೆ ಎಂದು ಉಲ್ಲೇಖವಾಗಿರುವ ಹಿನ್ನೆಲೆಯಲ್ಲಿ ಅಪಘಾತದಿಂದಾಗಿಯೇ ನಾಗಪ್ರಸಾದ್ ಅವರ ಸಾವು ಸಂಭವಿಸಿದೆ ಎಂದು ಖಚಿತಗೊಂಡಿದೆ.
ಆಮಂತ್ರಣ ನೀಡಲು ಇಚ್ಲಂಪಾಡಿಗೆ ತೆರಳಿದ್ದ ನಾಗಪ್ರಸಾದ್ ಅಲ್ಲಿಂದ ಬೆಳ್ತಂಗಡಿಗೆ ಹೋಗಲಿರುವುದಾಗಿ ಹೇಳಿ ಸಕಲೇಶಪುರದತ್ತ ಹೋಗಿರುವುದು ಯಾಕೆ ಎನ್ನುವ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಹಾಗೆಯೇ 2 ಹೆಲ್ಮೆಟ್ ಕೊಂಡೊಯ್ದಿದ್ದೇಕೆ? ಅವರ ಮೊಬೈಲ್ ಫೋನ್ ಅಪಘಾತ ಸ್ಥಳದಿಂದ ನಾಪತ್ತೆಯಾಗಿದ್ಹೇಗೆ ಎನ್ನುವ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಮೊಬೈಲ್ ಫೋನ್‌ನ ಕಾಲ್‌ಲಿಸ್ಟ್ ಮಾಹಿತಿ ಲಭಿಸಿದ ಮೇಲಷ್ಟೇ ಪ್ರಕರಣಕ್ಕೆ ಸಂಬಂಧಿಸಿದ ಸಂಶಯಗಳಿಗೆ ಉತ್ತರ ಸಿಗುವ ಸಾಧ್ಯತೆ ಇದೆ.