Advertisement
ಪ್ರಕರಣಗಳ ವಿವರ ಇಂತಿದೆ:
ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ ಮದ್ಯ ವಶ:
ಅರಂತೋಡು ಪೇಟೆಯ ಅಡ್ಕಬಳೆ ರಸ್ತೆಯ ಗುಳಿಗರಾಜ ಚಿಕನ್ ಸೆಂಟರ್ ಎಂಬ ಹೆಸರಿನ ಅಂಗಡಿಯಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟ 1760/- ಮೌಲ್ಯದ 3.960 ಲೀಟರ್ (90 ಎಂ ಎಲ್ನ 44 ಮದ್ಯದ ಸ್ಯಾಚೆಟ್ ಗಳು) ಮದ್ಯವನ್ನು ಸುಳ್ಯ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಸಂತೋಷ್ ಬಿ ಪಿ ರವರು ಕಳೆದ ಶನಿವಾರ(ನ.23) ರಂದು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ, ಅಲ್ಲದೆ ಆರೋಪಿ ದಿನೇಶ್ ಕೆ ಹಾಗೂ ಕಾನೂನು ಬಾಹಿರವಾಗಿ ಮದ್ಯವನ್ನು ಮಾರಾಟ ಮಾಡಿರುವ ವೈನ್ ಶಾಪ್ ನ ಮಾಲಕನ ವಿರುದ್ದ ಕಲಂ 32, 34 ಕರ್ನಾಟಕ ಅಬಕಾರಿ ಕಾಯ್ದೆ 1965 ಪ್ರಕಾರ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ 2:
ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ:
ಶನಿವಾರ (ನ.23) ರಾತ್ರಿ ಕಡಬ ಕಸಬ ಸಂತೆ ಕಟ್ಟೆ ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಮಧ್ಯಪಾನ ಮಾಡುತ್ತಿದ್ದ ಆರೋಪಿತ ಸುರೇಶ (50) ಎಂಬಾತನ ವಿರುದ್ದ ಕಡಬ ಪೊಲೀಸು ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆತನ ಬಳಿಯಿದ್ದ ಮದ್ಯವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Related Articles
ಬಸ್ ನಿಲ್ದಾಣದ ಬಳಿ ಮದ್ಯಪಾನ:
ಶನಿವಾರ (ನ.23) ಸಂಜೆ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಕಲ್ಲಾಜೆ ಗುಡ್ಡೆ ಎಂಬಲ್ಲಿ ಸಾರ್ವಜನಿಕ ಬಸ್ಸು ನಿಲ್ದಾಣದ ಬಳಿ ಮದ್ಯಪಾನ ಮಾಡುತ್ತಿದ್ದ ಬೆಳಿಯಪ್ಪ ಗೌಡ (58) ಎಂಬಾತನ ವಿರುದ್ದ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಬಳಿಯಿದ್ದ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಪ್ರಕರಣ 4:ಬಸ್ ನಿಲ್ದಾಣದಲ್ಲೇ ಮದ್ಯ ಸೇವನೆ:
ಶನಿವಾರ(ನ.23) ಸಂಜೆ ಬೆಳ್ತಂಗಡಿ ತಾಲೂಕಿನ ಕಳಿಯಾ ಗ್ರಾಮದ ಗೇರುಕಟ್ಟೆ ಬಸ್ಸು ನಿಲ್ದಾಣದಲ್ಲಿ ಇಬ್ಬರು ವ್ಯಕ್ತಿಗಳು ಮದ್ಯ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ಯಲ್ಲಪ್ಪ ಹೆಚ್. ಮಾದಾರ್ ಪೊಲೀಸ್ ಉಪ ನಿರಿಕ್ಷಕರು, (ತನಿಖೆ)ಬೆಳ್ತಂಗಡಿ ಪೊಲೀಸ್ ಠಾಣೆರವರು ಸ್ಥಳಕ್ಕೆ ತೆರಳಿ ಆರೋಪಿ ಸತೀಶ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯಿಂದ ಮದ್ಯ ವಶಕ್ಕೆ ಪಡೆದುಕೊಂಡಿದ್ದಾರೆ.