ದಾವಣಗೆರೆ: 80 ವರ್ಷದ ವೃದ್ದೆಯ ಮೇಲೆ ಅತ್ಯಾಚಾರ ಎಸಗಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ನಡೆದಿದೆ.
ಅತ್ಯಾಚಾರ ಮಾಡಿದ 30 ವರ್ಷದ ಯುವಕನನ್ನು ರವಿ ಎನ್ನಲಾಗಿದೆ.
Advertisement
80 ವರ್ಷದ ಅನಾಥ ವೃದ್ದೆಯ ಮೇಲೆ ಯುವಕ ಅತ್ಯಾಚಾರ ಎಸಗಿದ್ದು, ಗ್ರಾಮದ ಜನತೆ ಶವಸಂಸ್ಕಾರಕ್ಕೆ ಊರಿನ ಹೊರವಲಯಕ್ಕೆ ಹೋದ ವೇಳೆ ಈ ಘಟನೆ ನಡೆದಿದೆ.
ಅತ್ಯಾಚಾರ ಎಸಗಿದ ನಂತರವೂ ವೃದ್ದೆಯ ಮೇಲೆ ಮತ್ತೆ ಕಾಮುಕ ಯುವಕ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾನೆ. ಯುವಕನಿಂದ ತಪ್ಪಿಸಿಕೊಂಡ ವೃದ್ದೆ ಜೋರಾಗಿ ಕಿರಿಚಿಕೊಂಡಿದ್ದಾಳೆ.ಕೂಡಲೇ ಎಲ್ಲಾ ಜನರು ಆರೋಪಿಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.