Advertisement

Sanatana: ಸನಾತನ ಧರ್ಮದ ನಿರ್ಮೂಲನೆ.. ಪರೋಕ್ಷವಾಗಿ ಉದಯನಿಧಿ ಬೆಂಬಲಿಸಿದ ಕಮಲ್‌ ಹಾಸನ್

01:32 PM Sep 23, 2023 | Team Udayavani |

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲಿನ್  ಸನಾತನ ಧರ್ಮದ ಕುರಿತು ನೀಡಿದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ವಿಚಾರ ಇನ್ನು ಕೂಡ ಕಾದ ಕಬ್ಬಿಣದಂತೆ ಚರ್ಚೆಯಲ್ಲಿರುವಾಗಲೇ ಇದೀಗ ನಟ ಕಮಲ್‌ ಹಾಸನ್‌ ಅವರು ಇದರ ಕುರಿತು ಮಾತನಾಡಿದ್ದಾರೆ.

Advertisement

ಮಕ್ಕಳ್ ನೀಧಿ ಮೈಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಕೊಯಮತ್ತೂರಿನಲ್ಲಿ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ವೇಳೆ ʼಸನಾತನ ಧರ್ಮʼದ ಬಗ್ಗೆ ಮಾತನಾಡಿದ್ದಾರೆ.

“ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ‘ಚಿಕ್ಕ ಮಗುʼವೊಂದು ಇಂದು ಗುರಿಯಾಗುತ್ತಿದೆ” ಎಂದಿದ್ದಾರೆ. ಉದಯನಿಧಿ ಸ್ಟಾಲಿನ್‌ ಅವರ ಹೆಸರು ಬಳಸದೆ ಪರೋಕ್ಷವಾಗಿ ಅವರ ಹೇಳಿಕೆಯ ಪರವಾಗಿ ಕಮಲ್‌ ಹಾಸನ್‌ ನಿಂತಿದ್ದಾರೆ.

“ಸನಾತನ ಧರ್ಮದ ಬಗ್ಗೆ ಸಚಿವರು ಹೇಳಿರುವುದರಲ್ಲಿ ಹೊಸದೇನಿಲ್ಲ. ಈ ಹಿಂದೆ ದ್ರಾವಿಡ ಚಳವಳಿಯ ಹಲವಾರು ನಾಯಕರಾದ ಉದಯನಿಧಿ ಅವರ ತಾತ ಮತ್ತು ದಿವಂಗತ ಡಿಎಂಕೆಯ ಎಂ ಕರುಣಾನಿಧಿ ಅವರು ಮಾತನಾಡಿದ್ದಾರೆ.

ಪೆರಿಯಾರ್ ವಿ ರಾಮಸ್ವಾಮಿ ಅವರು ಜೀವಿಸಿದ ರೀತಿಯಿಂದ ಅವರ ಜೀವನವನ್ನು ಅರ್ಥಮಾಡಿಕೊಳ್ಳಬಹುದು. ಅವರು ಸಾಮಾಜಿಕ ಅನಿಷ್ಠಗಳನ್ನು ಕಟುವಾಗಿ ವಿರೋಧಿಸುತ್ತಿದ್ದರು. ನಮ್ಮಂತವರು ʼಸನಾತನʼ ಎಂಬ ಪದದ ಅರ್ಥವನ್ನು ತಿಳಿದುಕೊಂಡದ್ದೇ ಅವರಿಂದ ಎಂದು ನಟ ಹೇಳಿದ್ದಾರೆ.

Advertisement

ಪೆರಿಯಾರ್ ಅವರು ದೇವಾಲಯದ ಆಡಳಿತಗಾರರಾಗಿದ್ದರು. ಇದಲ್ಲದೆ ಕಾಶಿಯಲ್ಲಿದ್ದಾಗ ಅವರು ಪೂಜೆಯನ್ನು ಮಾಡುತ್ತಿದ್ದರು. ಆದರೆ ಈ ಎಲ್ಲವನ್ನು ಬಿಟ್ಟು ಅವರು ತಮ್ಮ ಜೀವನವನ್ನು ಜನರ ಸೇವೆಗೆ ಮುಡಿಪಾಗಿಟ್ಟರು. ಡಿಎಂಕೆ ಅಥವಾ ಇತರ ಪಕ್ಷಗಳು ಪೆರಿಯಾರ್ ಅವರು ಅವರಿಗೆ ಮಾತ್ರ ಸೀಮಿತವೆಂದು ಹೇಳುತ್ತಾರೆ. ಅವರು ಇಡೀ ತಮಿಳುನಾಡಿಗೆ ನಾಯಕ” ಎಂದು ಕಮಲ್‌ ಹಾಸನ್‌ ಹೇಳಿದರು.

ಸ್ಟಾಲಿನ್‌ ಹೇಳಿದ್ದೇನು?: 

“ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ.ಕೆಲ ವಿಷಯಗಳನ್ನು ವಿರೋಧಿಸಲು ಆಗುವುದಿಲ್ಲ. ಅವುಗಳನ್ನು ನಿರ್ಮೂಲನೆ ಮಾಡಿದರೆ ಮಾತ್ರ ಅದು ನಾಶವಾಗಬಹುದು. ನಾವು ಡೆಂಗ್ಯೂ, ಸೊಳ್ಳೆಗಳು, ಮಲೇರಿಯಾ ಅಥವಾ ಕೊರೊನಾವನ್ನು ವಿರೋಧಿಸಲು ಸಾಧ್ಯವಿಲ್ಲ. ಅದೇ ರೀತಿ ನಾವು ಸನಾತನವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿದ್ದರು.

“ಸನಾತನವನ್ನು ವಿರೋಧಿಸುವುದಕ್ಕಿಂತ, ಅದನ್ನು ನಾವು ನಿರ್ಮೂಲನೆ ಮಾಡಬೇಕು. ‘ಸನಾತನ’ ಎನ್ನುವ ಪದ ಸಂಸ್ಕೃತದಿಂದ ಬಂದಿದೆ. ಇದು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿಯಾಗಿದೆ” ಎಂದು ಆಡಳಿತಾರೂಢ ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next