ಪಶ್ಚಿಮ ಬಂಗಾಳ : ಆಸ್ಪತ್ರೆಯಿಂದ ಬಿಡುಗಡೆಗೊಂಡ ಎರಡೇ ದಿನಗಳಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವೀಲ್ ಚೇರ್ ನ ಮೂಲಕವೇ ಕೋಲ್ಕತ್ತಾದ ಗಾಂಧಿ ಪ್ರತಿಮೆಯಿಂದ ಹಜ್ಹ್ರಾದ ತನಕ ತಮ್ಮ ಚುನಾವಣಾ ಪ್ರಚಾರದ ರೋಡ್ ಶೋ ವನ್ನು ಆರಂಭಿಸಿದ್ದಾರೆ.
ಓದಿ : ಸಾವಿಗೆದುರಾಗಿ ನಿಂತ ‘ಮರುಭೂಮಿಯ ಹೂ’ವಿನ ಘಮ…!
ಅಪಾರ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಕಾರ್ಯಕರ್ತರು ಮಮತಾ ಬ್ಯಾನರ್ಜಿ ಅವರಿಗೆ ಸಾಥ್ ನೀಡಿದ್ದಾರೆ.
Related Articles
ಇನ್ನು, ಹಜ್ಹ್ರಾದದಲ್ಲಿ ರೋಡ್ ಶೋ ಮುಕ್ತಾಯಗೊಂಡ ನಂತರ ಮಮತಾ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪಕ್ಷ ಇಂದು ಬೆಳಗ್ಗೆ ಮಾಹಿತಿ ನೀಡಿತ್ತು.
ರೋಡ್ ಶೋ ನಡುವೆಯೇ, ಮಮತಾ ಪ್ರತಿ ಪಕ್ಷಗಳಿಗೆ ಎಚ್ಚರಿಕೆ ನೀಡಿದ್ದಾರೆ. “ಜನರು ನಮಗೆ ಮತ ಹಾಕಿದರೆ, ಪ್ರಜಾಪ್ರಭುತ್ವವನ್ನು ಅವರಿಗೆ ಮರಳಿ ಕೊಡುತ್ತೇವೆ ಎಂದು ಭರವಸೆಯನ್ನು ನೀಡುತ್ತೇನೆ. ಬಂಗಾಳದ ವಿರುದ್ಧ ನಡೆಯುತ್ತಿರುವ ಎಲ್ಲಾ ಪಿತೂರಿಗಳು ನಾಶವಾಗಲಿ. ವೀಲ್ ಚೇರ್ ನ ಮೇಲೆ ಚುನಾವಣಾ ಪ್ರಚಾರ ಮಾಡುತ್ತೇನೆ. ಖೇಲ್ ಹೋಬ್, ಗಾಯಗೊಂಡ ಹುಲಿ ಅತ್ಯಂತ ಅಪಾಯಕಾರಿ ಪ್ರಾಣಿ” ಎಂದು ಮಮತಾ ಕಿಡಿ ಕಾರಿದ್ದಾರೆ.
ಇನ್ನು, ಮಮತಾ ಅವರು ಕಳೆದ ವಾರ ಅವರ ವಿಧಾನ ಸಭಾ ಕ್ಷೇತ್ರ ನಂದಿಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ದಾಳಿ ನಡೆದಿರುವುದಕ್ಕೆ ಯಾವುದೇ ಪೂರಕ ಸಾಕ್ಷಿಗಳಿಲ್ಲ ಎಂದು ಚುನಾವಣಾ ವೀಕ್ಷಕರ ವರದಿಯನ್ನು ಆಧರಿಸಿ ಚುನಾವಣಾ ಆಯೋಗ ತಿಳಿಸಿದೆ.
ಓದಿ : ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ: ಹಣಕ್ಕಾಗಿ ಡಿಮ್ಯಾಂಡ್!