Advertisement
ದುರ್ಬಲರಿಗಾಗಿ ಮಿಡಿಯುವ ಜೀವ33 ವರ್ಷದ ಸೋಫಿಯಾ ಮಿಯರ್ಸ್ ಸ್ವ ಗೃಹ ಬಂದಿಯಾಗಿದ್ದು, ಈ ಮಹಾಕಾರ್ಯಕ್ಕೆ ಮುಂದಾಗಿದ್ದಾರೆ. ದಿನದ 10 ಗಂಟೆ ಅಡುಗೆ ಮನೆಯಲ್ಲಿಯೇ ವ್ಯಯಿಸಿ ತಮ್ಮ ನಗರದಲ್ಲಿ ವಾಸವಿರುವ 80 ಮಂದಿ ಬಡ ಮಂದಿಗೆ ಮತ್ತು ನಿರ್ಗತಿಕರಿಗೆ ಆಹಾರ ಸರಬರಾಜು ಮಾಡುತ್ತಿದ್ದಾರೆ. ಸೋಫಿಯಾಗೆ 4 ಜನ ಮಕ್ಕಳಿದ್ದು, ಇವರ ಈ ಕಾರ್ಯಕ್ಕೆ ಆಕೆಯ ಗಂಡ ಸಾಥ್ ನೀಡಿದ್ದಾರೆ.
ಈ ಕುರಿತು ತನ್ನ ಅಭಿಪ್ರಾಯ ಹಂಚಿಕೊಂಡ ಸೋಫಿಯಾ ನಮಗೆ ಕುಟುಂಬವಿದೆ, ಬೇಕಾದನ್ನು ಮಾಡಿ ಸೇವಿಸಲು ಸಾಕಷ್ಟು ದಿನಸಿ ಇದೆ. ಆದರೆ ಕೆಲ ನಿರ್ಗತಿಕರಿಗೆ ಆಹಾರದ ಕೊರತೆ ಎದುರಾಗಿದ್ದು, ಯಾರೂ ಹಸಿವಿನಿಂದ ಬಳಲಬಾರದು ಎಂಬ ದೃಷ್ಟಿಯಿಂದ ಈ ಕಾರ್ಯ ಮಾಡುತ್ತಿದ್ದೇನೆ ಎಂದು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.