ಗಯಾನ: ಅಂಡರ್ 19 ವಿಶ್ವಕಪ್ ನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಂ ಇಂಡಿಯಾ ಕೂಟದಲ್ಲಿ ಶುಭಾರಂಭ ಮಾಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ ಯಶ್ ಧುಲ್ ನಾಯಕತ್ವದ ಟೀಂ ಇಂಡಿಯಾ 45 ರನ್ ಅಂತರದ ಗೆಲುವು ಸಾಧಿಸಿದೆ.
ಇಲ್ಲಿನ ಪ್ರೊವಿಡೆನ್ಸ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 46.5 ಓವರ್ ಗಳಲ್ಲಿ232 ರನ್ ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ 45.4 ಓವರ್ ಗಳಲ್ಲಿ 187 ರನ್ ಗೆ ಆಲೌಟಾಗಿ ಸೋಲನುಭವಿಸಿತು.
ಇದನ್ನೂ ಓದಿ:ಇಂಡಿಯಾ ಓಪನ್ ಬ್ಯಾಡ್ಮಿಂಟನ್: ಲಕ್ಷ್ಯ ಸೇನ್‌ಗೆ ಫೈನಲ್; ಸಿಂಧು ಫೇಲ್
ಆರಂಭಿಕ ಆಘಾತ ಕಂಡ ಭಾರತ ತಂಡಕ್ಕೆ ಯಶ್ ಧುಲ್ ನಾಯಕನ ಆಟವಾಡಿ ಆಧರಿಸಿದರು. 82 ರನ್ ಗಳಿಸಿದ್ದ ವೇಳೆ ಯಶ್ ರನೌಟ್ ಗೆ ಬಲಿಯಾಗಬೇಕಾಯಿತು. ಉಳಿದಂತೆ ಕೌಶಲ್ ತಾಂಬೆ 35 ರನ್, ಶೇಕ್ ರಶೀದ್ 31 ರನ್ ಗಳ ಕಾಣಿಕೆ ನೀಡಿದರು.
Related Articles
ದಕ್ಷಿಣ ಆಫ್ರಿಕಾ ಪರ ಡೆವಾಲ್ಡ್ ಬ್ರೆವಿಸ್ 65 ರನ್ ಮತ್ತು ನಾಯಕ ಜಾರ್ಜ್ ವ್ಯಾನ್ ಹೀರ್ಡನ್ 36 ರನ್ ಗಳಿಸಿದ್ದು ಬಿಟ್ಟರೆ, ಬೇರಾವ ಆಟಗಾರನಿಂದ ಬೆಂಬಲ ಸಿಗಲಿಲ್ಲ. ಭಾರತದ ವಿಕ್ಕಿ ಒಸ್ತ್ವಾಲ್ ಐದು ವಿಕೆಟ್ ಪಡೆದು ಮಿಂಚಿದರೆ, ರಾಜ್ ಬಾವ ನಾಲ್ಕು ವಿಕೆಟ್ ಪಡೆದರು.
ಭಾರತ ಅಂಡರ್ 19 ತಂಡ ತನ್ನ ಮುಂದಿನ ಪಂದ್ಯವನ್ನು ಐರ್ಲೆಂಡ್ ವಿರುದ್ಧ ಆಡಲಿದೆ. ಜ.19ರಂದು ಈ ಪಂದ್ಯವು ಟ್ರಿನಿಡಾಡ್ ನಲ್ಲಿ ನಡೆಯಲಿದೆ.