Advertisement
ಅದರಲ್ಲಿ ಸ್ಟ್ರೀಟ್ಸ್ಟೋರೋದಲ್ಲಿರುವ “ಕೆಓಎ ಕ್ಯಾಂಪ್ ಗ್ರೌಂಡ್’ ಕೂಡ ಒಂದು. ಈ ಜಾಗವು ಹಲವು ಅನುಕೂಲಗಳನ್ನೊಳಗೊಂಡ ಆಕರ್ಷಕ ವಿಶಾಲವಾದ ಸ್ಥಳ. ಇಲ್ಲಿ ಈಜುಕೊಳ, ಆಟದ ಮೈದಾನ, ಗೇಮ್‌ರೂಮ್, ಸಮ್ಮೇಳನದ ಕೊಠಡಿಗಳ ವ್ಯವಸ್ಥೆ, ಫಿಶಿಂಗ್ ಮಾಡಲು ಪ್ರತ್ಯೇಕ ಸರೋವರ, ಇವೆಲ್ಲದರ ಮಧ್ಯೆ ಓಡಾಡಲು ವ್ಯಾಗನ್ ವ್ಯವಸ್ಥೆ ಹಾಗೂ ಸುಸಜ್ಜಿತ ಕೊಠಡಿಗಳೂ ಇಲ್ಲಿವೆ.
Related Articles
Advertisement
ಎಲ್ಲರೂ ಸೇರಿ ವಿವಿಧ ಕಾರ್ಯಕ್ರಮಗಳನ್ನು, ಚಟುವಟಿಕೆಗಳನ್ನು ನಿಯೋಜಿಸಿಕೊಂಡೆವು. ಅಲ್ಲಿಯೇ ಎಲ್ಲರೂ ಸೇರಿ ಆಹಾರವನ್ನು ತಯಾರಿಸಿ ಲಘು ಉಪಹಾರವನ್ನು ಮಾಡಿದೆವು. ಶಾಲೆಯ ಪಾಠ, ಹೋಮ್‌ವರ್ಕ್‌ಗಳಿಂದ ಬಿಡುವ ಪಡೆದಿದ್ದ ಮಕ್ಕಳೆಲ್ಲರು ಸೇರಿ ಅಲ್ಲಿನ ವಿಸ್ತಾರವಾದ ಜಾಗದಲ್ಲಿ ಖುಷಿಯಿಂದ ಆಟವಾಡಿದರು. ಸ್ವಿಮ್ಮಿಂಗ್ ಆಸಕ್ತಿಯಿರುವವರಿಗೆ ಇಲ್ಲಿರುವ ಈಜುಕೊಳದಲ್ಲಿ ಸ್ವಿಮ್ಮಿಂಗ್ ಮಾಡಿ ಸಮಯ ಕಳೆಯಬಹುದು. ನಮ್ಮೊಂದಿಗೆ ಬಂದಿದ್ದ ಹಲವರು ಈಜುಕೊಳದಲ್ಲಿ ಕೇಕೆ ಹಾಕುತ್ತ ಈಜಾಡಿ ಸಂಭ್ರಮಿಸಿದರು. ಬಹಳ ವಿಶೇಷವಾಗಿ ನಾವೆಲ್ಲ ಬಾಲ್ಯದಲ್ಲಿ ಆಡವಾಡುತ್ತಿದ್ದ ಲಗೋರಿ ಆಟವನ್ನು ಆಡಿದ್ದು ಮತ್ತೆ ನಮ್ಮ ಚಿಕ್ಕ ವಯಸ್ಸಿನ ಕ್ಷಣಗಳನ್ನು ನೆನೆಪಿಸಿತ್ತು. ಅಲ್ಲಿ ನೆರೆದಿದ್ದ ಹಿರಿಯಲೆಲ್ಲರು ಮಕ್ಕಳೊಂದಿಗೆ ಲಗೋರಿ ಆಟವನ್ನು ಆಡಿ ತಮ್ಮ ನೆನೆಪುಗಳನ್ನು ಹಂಚಿಕೊಂಡರು.
ಬೇಸಗೆಯಲ್ಲಿ ಸೂರ್ಯಾಸ್ತವಾಗುವುದೇ ನಿಧಾನ. ಹೊಟ್ಟೆ ಚುರುಗುಟ್ಟಿದಾಗ ಎಲ್ಲರಿಗೂ ಊಟದ ನೆನಪು. ಚಪಾತಿ, ಪಲ್ಯ, ಎಣ್ಣೆಗಾಯಿ, ಪಲಾವ್, ಮೊಸರನ್ನ ಎಲ್ಲ ಹೊಟ್ಟೆ ತುಂಬಾ ತಿಂದು ದೊಡ್ಡ ಕೇಕ್‌ನೊಂದಿಗೆ ಊಟವನ್ನು ಮುಗಿಸಿದರು. ಶಿಬಿರದ ಬೆಂಕಿ ಹಾಕಿಕೊಂಡು ಪಾಪ್‌ಕಾರ್ನ್ ತಿನ್ನುತ್ತಾ ಕನ್ನಡ ಚಿತ್ರಗೀತೆಗಳನ್ನು ಹಾಡಿ, ಅಂತ್ಯಾಕ್ಷರಿ, ಮೂಕಾಭಿನ¿ದಂತಹ ಆಟಗಳನ್ನು ಆಡಿ ಮೋಜು ಮಾಡಿದರು.
ಕರ್ನಾಟಕದ ವಿವಿಧ ಪ್ರಾಂತದ ಸದಸ್ಯರೆಲ್ಲರೂ ತಮ್ಮ ತಮ್ಮ ಊರು, ಬಾಲ್ಯ, ಶಾಲೆಗಳು, ಸಂಬಂಧಿಕರು, ವಿವಿಧ ಬಗೆಯ ಖಾದ್ಯಗಳ ವಿಚಾರಗಳನ್ನೂ ಮೆಲುಕು ಹಾಕುತ್ತ ಹರಟುತ್ತಿದ್ದರು. ಅತ್ತ ಕಡೆ ಮಕ್ಕಳು ಅವರದ್ದೇ ಆಟದಲ್ಲಿ ಮಗ್ನರಾಗಿದ್ದರು. ಹೀಗೆ ತಮ್ಮ ತಮ್ಮದೇ ಗುಂಗಿನಲ್ಲಿದ್ದ ನಮಗೆ ಮಧ್ಯರಾತ್ರಿ ಒಂದು ಗಂಟೆಯಾಗಿದ್ದು ತಿಳಿಯಲೇ ಇಲ್ಲ. ರಾತ್ರಿಯ ನಸುಕಿನಲ್ಲಿ ಡೇರೆ ಹಾಕಿ ಬೆಚ್ಚಗೆ ಮಲಗಿದ್ದು ಸುಂದರ ಅನುಭವ ಎನಿಸಿತ್ತು.
ಮರುದಿನ ಬೆಳಗ್ಗೆ ಎದ್ದು ಎಲ್ಲರೂ ತಮ್ಮತಮ್ಮ ಪ್ರಾತಃ ವಿಧಿಗಳನ್ನು ಮುಗಿಸಿ ಒಳಾಂಗಣ ಆಟದಲ್ಲಿ ತೊಡಗಿಕೊಂಡೆವು.ಅನುಕೂಲಕರವಾಗಿದ್ದ ವಾತಾ ರಣದಲ್ಲಿ ನಡೆದಾಡುತ್ತ ಅಲ್ಲಿನ ಸುತ್ತಮುತ್ತಲಿನ ಪರಿಸರವನ್ನು ಎಲ್ಲರೂ ಕಣ್ತುಂಬಿಕೊಂಡರು. ಎಲ್ಲರೂ ಸೇರಿ ತಯಾರಿಸಿದ್ದ ಆಹಾರವನ್ನು ಸೇವಿಸಿ ತಮ್ಮ ತಮ್ಮ ಡೇರೆಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಮಧುರ ನೆನಪುಗಳೊಂದಿಗೆ ಮನೆಯ ದಾರಿ ಹಿಡಿದಿದ್ದೇವು.