Advertisement

ಅರಮನೆ ವೀಕ್ಷಣೆಗೂ ಅವಕಾಶ

06:12 AM Jun 08, 2020 | Lakshmi GovindaRaj |

ಮೈಸೂರು: ಪ್ರವಾಸಿಗರ ಅರಮನೆ ವೀಕ್ಷಣೆಗೆ ಸೋಮವಾರದಿಂದ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಅರಮನೆ ಮಂಡಳಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಅರಮನೆ ವೀಕ್ಷಣೆಗೆ ದಿನಕ್ಕೆ 3,500  ಜನರಿಗೆ  ಮಾತ್ರ ಅವಕಾಶ ಇರಲಿದೆ. ಬೆಳಗ್ಗೆ 10ರಿಂದ 5ರವರೆಗೆ ಅರಮನೆ ವೀಕ್ಷಣೆಗೆ ಅವಕಾಶವಿರಲಿದೆ. ವಾರಾಂತ್ಯ ದ ದಿನಗಳಾದ ಶನಿವಾರ-ಭಾನುವಾರ ಹಾಗೂ ಸರ್ಕಾರಿ ರಜೆಯ ದಿನಗಳಲ್ಲಿ ವೀಕ್ಷಣೆ ನಿರ್ಬಂಧಿಸಲಾಗಿದೆ.

Advertisement

ವಸ್ತುಗಳು ಮುಟ್ಟಬಾರದು: ಟಿಕೆಟ್‌ ಖರೀದಿಸಿ ಅರಮನೆಗೆ ಪ್ರವೇಶಿಸುತ್ತಿದ್ದಂತೆ ಪ್ರವಾಸಿಗರಿಗೆ ಥರ್ಮಲ್‌ ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ವೀಕ್ಷಣೆ ಸಂದರ್ಭದಲ್ಲಿ ಪ್ರವಾಸಿಗರು 3 ಅಡಿಯಷ್ಟು ಸಾಮಾಜಿಕ ಅಂತರ  ಕಾಯ್ದುಕೊಂಡು, ಅರಮನೆಯ ಕಂಬಗಳು ಹಾಗೂ ಇತರೆ ಯಾವುದೇ ವಸ್ತುಗಳನ್ನು ಮುಟ್ಟದಂತೆ ವೀಕ್ಷಿಸಬೇಕು. ಪ್ರವಾಸಿಗರ ಲಗೇಜ್‌ ಹಾಗೂ ಇನ್ನಿತರ ವಸ್ತುಗಳನ್ನು ತಮ್ಮ ವಾಹನಗಳಲ್ಲಿ ಇರಿಸಿಕೊಳ್ಳಬೇಕು.

ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟ ವೃದರಿಗೆ ಪ್ರವೇಶ ನಿಬಂಧಿಸಲಾಗಿದೆ. ಸಾರ್ವಜನಿಕರನ್ನು ಎಚ್ಚರಿಸುವ ಸಲುವಾಗಿ ಈ ಎಲ್ಲ ಮಾಹಿತಿಗಳನ್ನು ಆಗಾಗ್ಗೆ ಧ್ವನಿ ವರ್ಧಕಗಳಲ್ಲಿ  ತಿಳಿಸಲಾಗುವುದು ಎಂದು ಅರಮನೆ ಮಂಡಳಿ ಉಪ ನಿರ್ದೇ ಶಕ ಟಿ.ಎಸ್‌.ಸುಬ್ರಹ್ಮಣ್ಯ ತಿಳಿಸಿದ್ದಾರೆ.

ಧ್ವನಿ, ಬೆಳಕು ಕಾರ್ಯಕ್ರಮ ಸದ್ಯಕ್ಕಿಲ್ಲ: ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ರಾತ್ರಿ ವೇಳೆ ಅರಮನೆ ಆವರಣದಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ಆಯೋಜನೆ ಸದ್ಯಕ್ಕೆ ಇಲ್ಲ ಎಂದು ಮಾಹಿತಿ  ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next