Advertisement

ಬೇಸಿಗೆಗೆ ಹಿತ ನೀಡುವ  ವೈವಿಧ್ಯಮಯ ಮಜ್ಜಿಗೆ

07:30 AM Mar 16, 2018 | |

ಹೊರಗೆ ಬಿಸಿಲಿನ ತಾಪ ಏರುತ್ತಿದ್ದಂತೆ,  ದೇಹ ತಂಪಾಗಿರುವ ಏನನ್ನಾದರೂ  ಬಯಸುತ್ತಿರುವಾಗ, ಮಜ್ಜಿಗೆಯು ಬಹಳ ಸಲಭವಾಗಿ ತಯಾರಿಸಬಹುದಾದ ಪಾನೀಯ. ಅತಿಸಾರ, ಅರುಚಿ, ಆಮಶಂಕೆ, ಅಜೀರ್ಣ, ಮೂಲವ್ಯಾಧಿ, ವಾಂತಿ, ಭೇದಿ, ಮೂತ್ರಕಟ್ಟು, ಉರಿಮೂತ್ರ, ಕಾಮಾಲೆ ಇತ್ಯಾದಿ ಹಲವಾರು ಸಮಸ್ಯೆಗಳಿಗೆ ಮಜ್ಜಿಗೆಯು ಅಮೃತಕ್ಕೆ ಸಮನಾದ ಪಾನ. ಇಂಗು, ಹಸಿಶುಂಠಿ, ದಾಳಿಂಬೆ, ಮೆಂತ್ಯ, ಓಂಕಾಳುಗಳನ್ನು ಬಳಸಿ ತಯಾರಿಸುವ ಮಜ್ಜಿಗೆಗಳು ಅಧರಕ್ಕೆ ರುಚಿಮಾತ್ರವಲ್ಲ ಉದರಕ್ಕೂ ಹಿತನೀಡಿ ಆರೋಗ್ಯಕ್ಕೆ ಬಹಳ ಉತ್ತಮ. ಇಲ್ಲಿವೆ ಕೆಲವು ರೆಸಿಪಿ.

Advertisement

ಮಜ್ಜಿಗೆಯ ಜೊತೆ ಪುದಿನ 
ಬೇಕಾಗುವ ಸಾಮಗ್ರಿ: ಪುದಿನ ಎಲೆಗಳು- ಇಪ್ಪತ್ತು, ಹಸಿಮೆಣಸು- ಎರಡು, ಶುಂಠಿ- ಅರ್ಧ ಇಂಚು, ಮಜ್ಜಿ ಗೆ- ಮೂರು ಲೋಟ, ತೆಂಗಿನ ತುರಿ- ಎಂಟು ಚಮಚ, ಉಪ್ಪು ರುಚಿಗೆ, ಇಂಗು- ಕಾಲು ಚಮಚ.

ತಯಾರಿಸುವ ವಿಧಾನ: ಪುದಿನ ಎಲೆಗಳಿಗೆ ತೆಂಗಿನ ತುರಿ, ಹಸಿಮೆಣಸು, ಶುಂಠಿ, ಇಂಗು ಮತ್ತು ಉಪ್ಪು$ ಸೇರಿಸಿ ನುಣ್ಣಗೆ ರುಬ್ಬಿ ಮಜ್ಜಿಗೆಗೆ ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ಅತಿಯಾದ ಬಾಯಾರಿಕೆ, ಅಜೀರ್ಣವಾದಾಗ ಈ ಮಜ್ಜಿಗೆಯ ಸೇವನೆ ಬಹಳ ಹಿತನೀಡುವುದು.

ಕಲಗಚ್ಚಿನ ಮಜ್ಜಿಗೆ 
ಬೇಕಾಗುವ ಸಾಮಗ್ರಿ:
ಅಕ್ಕಿ ಮೂರನೇ ಸಲ ತೊಳೆದ ನೀರು, ಜೀರಿಗೆ ಪುಡಿ- ಎರಡು ಚಮಚ, ಲಿಂಬೆಹಣ್ಣು – ಅರ್ಧ, ಮಜ್ಜಿಗೆ- ಒಂದು ಲೋಟ, ಇಂಗು- ಕಾಲು ಚಮಚ, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಕಲಗಚ್ಚಿಗೆ ಜೀರಿಗೆಪುಡಿ, ಉಪ್ಪು, ಲಿಂಬೆರಸ, ಇಂಗು ಸೇರಿಸಿ ಕರಗಿಸಿ. ನಂತರ ಮಜ್ಜಿಗೆ ಸೇರಿಸಿ ಮಿಶ್ರಮಾಡಿ. ಹೊಟ್ಟೆ ಉರಿ, ಎಸಿಡಿಟಿ ತೊಂದರೆಯವರಿಗೆ ಇದರ ಸೇವನೆ ಬಹಳ ಹಿತ.

Advertisement

ಸಾಂಬಾರು ಸೊಪ್ಪಿನ ಮಜ್ಜಿಗೆ
 ಬೇಕಾಗುವ ಸಾಮಗ್ರಿ:
ಸಣ್ಣಗೆ ಹಚ್ಚಿದ ಸಾಂಬಾರು ಸೊಪ್ಪು$- ನಾಲ್ಕು ಚಮಚ, ಹೆಚ್ಚಿದ ಈರುಳ್ಳಿ- ನಾಲ್ಕು ಚಮಚ, ಹಸಿಮೆಣಸು- ಒಂದು, ಮಜ್ಜಿಗೆ – ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಮಜ್ಜಿಗೆಗೆ ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು ಸೇರಿಸಿ ಬೇಕಷ್ಟು ನೀರು ಸೇರಿಸಿ ಹದ ಮಾಡಿಕೊಳ್ಳಿ. ನಂತರ ಇದಕ್ಕೆ ತುಪ್ಪದಲ್ಲಿ ಸಾಸಿವೆ ಒಗ್ಗರಣೆಯನ್ನು ಇಂಗಿನ ಜೊತೆ ನೀಡಿ. ಅಜೀರ್ಣ, ಅರುಚಿ, ಹೊಟ್ಟೆ ಉಬ್ಬರವಾದಾಗ ಈ ಮಜ್ಜಿಗೆಯ ಸೇವನೆ ಹಿತ.

ಮಜ್ಜಿಗೆ ಜೊತೆ ಬಸಳೆ
ಬೇಕಾಗುವ ಸಾಮಗ್ರಿ:
ಬಸಳೆ ಎಲೆಗಳು- ಆರು, ಕಾಯಿತುರಿ- ಆರು ಚಮಚ, ಕಾಳುಮೆಣಸು- ನಾಲ್ಕು. ಜೀರಿಗೆ- ಒಂದು ಚಮಚ, ಮಜ್ಜಿಗೆ- ಎರಡು ಕಪ್‌, ಉಪ್ಪು ರುಚಿಗೆ.

ತಯಾರಿಸುವ ವಿಧಾನ: ಹೆಚ್ಚಿದ ಬಸಳೆ ಸೊಪ್ಪನ್ನು ಸಣ್ಣ ಉರಿಯಲ್ಲಿ ಬಾಡಿಸಿ. ನಂತರ ಇದಕ್ಕೆ ಜೀರಿಗೆ, ಕಾಳುಮೆಣಸು, ಕಾಯಿತುರಿ, ಉಪ್ಪು ಸೇರಿಸಿ ರುಬ್ಬಿ ಮಜ್ಜಿ ಗೆಗೆ ಸೇರಿಸಿ. ಕೊತ್ತಂಬರಿ ಸೊಪ್ಪು$ಸೇರಿಸಿ ಇಂಗಿನ ಒಗ್ಗರಣೆ ನೀಡಿ ಸರ್ವ್‌ ಮಾಡಬಹುದು.

         ಇದೇರೀತಿ ಓಂಕಾಳು, ಹಸಿಮೆಣಸು, ಶುಂಠಿಯನ್ನು ಸ್ವಲ್ಪ ಕಾಯಿತುರಿಯ ಜೊತೆ ಸೇರಿಸಿ ರುಬ್ಬಿ ಮಜ್ಜಿಗೆಗೆ ಸೇರಿಸಿ ಸರ್ವ್‌ ಮಾಡಬಹುದು. ಜೀರ್ಣಕ್ರಿಯೆಗೆ ಇದು ಉತ್ತಮ.

       ಕೊತ್ತಂಬರಿಸೊಪ್ಪು, ಉಪ್ಪು, ಇಂಗು, ಶುಂಠಿ, ಹಸಿಮೆಣಸು ಅಥವಾ  ಇಂಗು, ಹಸಿಮೆಣಸು, ಶುಂಠಿ ಸೇರಿಸಿ ರುಬ್ಬಿ ಲಿಂಬೆರಸ ಸೇರಿಸಿದ ಮಜ್ಜಿಗೆಗೆ ಸೇರಿಸಿ ಸಾಸಿವೆ ಕರಿಬೇವಿನ ಒಗ್ಗರಣೆ ನೀಡಿಯೂ ಮಜ್ಜಿಗೆ ತಯಾರಿಸಬಹದು.                                                 
ಗೀತಸದಾ

Advertisement

Udayavani is now on Telegram. Click here to join our channel and stay updated with the latest news.

Next