Advertisement

M.B.Patil; ₹7,660 ಕೋಟಿ ಮೌಲ್ಯದ ಒಟ್ಟು 91 ಹೂಡಿಕೆ ಪ್ರಸ್ತಾವನೆಗಳಿಗೆ ಅನುಮೋದನೆ

10:36 AM Sep 16, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಬಂಡವಾಳ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿರುವ ರಾಜ್ಯ ಸರ್ಕಾರ 91 ಯೋಜನೆಗಳ ಒಟ್ಟು 7,660 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಅನುಮೋದನೆ ನೀಡಿದೆ.

Advertisement

ಇಲ್ಲಿನ ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ರಾಜ್ಯಮಟ್ಟದ ಏಕಗವಾಕ್ಷಿ ಸಮಿತಿಯ 140ನೇ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಯಿತು.

ಈ ಯೋಜನೆಗಳಿಂದ ಸುಮಾರು 18,146 ಜನರಿಗೆ ಉದ್ಯೋಗ ಅವಕಾಶಗಳು ಲಭಿಸಲಿವೆಯೆಂದು ಸಚಿವ ಎಂ. ಬಿ. ಪಾಟೀಲ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅನುಮೋದನೆ ನೀಡಿರುವ ಪ್ರಸ್ತಾವನೆಗಳಲ್ಲಿ 50 ಕೋಟಿ ರೂಪಾಯಿಗೂ ಅಧಿಕ ಬಂಡವಾಳ ಹೂಡಿಕೆಯ 25 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ 5,750.73 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸುಮಾರು 13,742 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಸಚಿವರು ಹೇಳಿದರು.

ರೂ. 15 ಕೋಟಿಯಿಂದ ರೂ 50 ಕೋಟಿ ಒಳಗಿನ ಬಂಡವಾಳ ಹೂಡಿಕೆಯ 57 ಹೊಸ ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇವುಗಳಿಂದ ₹1,145 ಕೋಟಿ ಬಂಡವಾಳ ಹೂಡಿಕೆಯಾಗಲಿದ್ದು ಅಂದಾಜು 4,404  ಜನರಿಗೆ ಉದ್ಯೋಗ ಲಭ್ಯವಾಗಲಿದೆ. ಇದಲ್ಲದೇ ಹೆಚ್ಚುವರಿ ಬಂಡವಾಳ ಹೂಡಿಕೆಯ 8 ಯೋಜನೆಗಳಿಗೆ ಅನುಮೋದನೆ ನೀಡಿದ್ದು, ಇದರಿಂದ ₹763.85 ಕೋಟಿ ಬಂಡವಾಳ ಹೂಡಿಕೆಯಾಗಲಿದೆ.

Advertisement

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಡಾ. ಎಸ್ ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಕಾರ್ಮಿಕ ಇಲಾಖೆ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ಕೆ.ಐ.ಎ.ಡಿ.ಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ . ಎಂ. ಮಹೇಶ್, ಐಟಿಬಿಟಿ ಇಲಾಖೆಯ ನಿರ್ದೇಶಕ ಎಚ್. ವಿ. ದರ್ಶನ್ ಮತ್ತು ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು.

ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳ ಪಟ್ಟಿ

1 ಸಂಸ್ಥೆ: ಪ್ರತಿಭಾ ಪಾಟೀಲ್ ಶುಗರ್  ಇಂಡಸ್ಟ್ರೀಸ್  ಪೈವೇಟ್ ಲಿಮಿಟೆಡ್

ಸ್ಥಳ: ಕಣ್ಣೂರ್ ಗ್ರಾಮ, ವಿಜಯಪುರ ತಾಲೂಕು, ವಿಜಯಪುರ ಜಿಲ್ಲೆ

ಹೂಡಿಕೆ: ₹489.50 ಕೋಟಿ

ಉದ್ಯೋಗ: 275

2 ಸಂಸ್ಥೆ: ಗುರುದೇವ್ ರಿಫೈನರಿಸ್ & ಅಲೈಡ್ ಇಂಡಸ್ಟ್ರೀಸ್

ಸ್ಥಳ: ತಡವಳಗ ಪೋಸ್ಟ್, ವಿಜಯಪುರ ಜಿಲ್ಲೆ

ಹೂಡಿಕೆ: ₹488.49 ಕೋಟಿ

ಉದ್ಯೋಗ: 255

3 ಸಂಸ್ಥೆ: ದೇವಶ್ರೀ ಇಸ್ಪಾತ್ ಪೈವೇಟ್ ಲಿಮಿಟೆಡ್

ಸ್ಥಳ: ಹಳವರ್ತಿ ಗ್ರಾಮ, ಕೊಪ್ಪಳ ಜಿಲ್ಲೆ

ಹೂಡಿಕೆ: ₹470  ಕೋಟಿ

ಉದ್ಯೋಗ: 800

4 ಸಂಸ್ಥೆ: ಏಕಸ್ ಕನ್ಸೂಮರ್ ಪ್ರಾಡಕ್ಟಸ್ ಪೈವೇಟ್ ಲಿಮಿಟೆಡ್

ಸ್ಥಳ: ಇತ್ತಿಗಟ್ಟಿ ಗ್ರಾಮ, ಧಾರವಾಡ ಜಿಲ್ಲೆ

ಹೂಡಿಕೆ ₹456 ಕೋಟಿ

ಉದ್ಯೋಗ: 1,187

5 ಸಂಸ್ಥೆ: ಇಂಟಿಗ್ರೇಟೆಡ್ ಸೋಲಾರ್ ಪವರ್ ಪೈವೇಟ್ ಲಿಮಿಟೆಡ್

ಸ್ಥಳ: ಮಿಂಡಹಳ್ಳಿ ಗ್ರಾಮ, ಕೋಲಾರ ಜಿಲ್ಲೆ

ಹೂಡಿಕೆ: ₹441.08 ಕೋಟಿ

ಉದ್ಯೋಗ: 720

6 ಸಂಸ್ಥೆ: ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್

ಸ್ಥಳ: ಮೂಸಿನಾಯಕನ ಹಳ್ಳಿ ಗ್ರಾಮ, ಬಳ್ಳಾರಿ ಜಿಲ್ಲೆ

ಹೂಡಿಕೆ: ₹411 ಕೋಟಿ

ಉದ್ಯೋಗ: 65

7 ಸಂಸ್ಥೆ: ಶಶಿ ಅಲೊಯ್ಸ್ ಪೈವೇಟ್ ಲಿಮಿಟೆಡ್

ಸ್ಥಳ: ಭೈರನಾಯಕನಹಳ್ಳಿ ಗ್ರಾಮ, ಚಲ್ಲಕೆರೆ ತಾಲೂಕು, ಚಿತ್ರದುರ್ಗ

ಹೂಡಿಕೆ: ₹380 ಕೋಟಿ

ಉದ್ಯೋಗ: 400

8 ಸಂಸ್ಥೆ: ಎಸ್ ಎಫ್ ಎಸ್ ಗ್ರೂಪ್ ಇಂಡಿಯಾ ಪೈವೇಟ್ ಲಿಮಿಟೆಡ್

ಸ್ಥಳ: ಬೆಳಗಾವಿ ಜಿಲ್ಲೆ

ಹೂಡಿಕೆ: ₹ 250 ಕೋಟಿ

ಉದ್ಯೋಗ: 844

9 ಸಂಸ್ಥೆ: ಮೈಸೂರ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್

ಸ್ಥಳ: ರಾಯಚೂರು ಜಿಲ್ಲೆ

ಹೂಡಿಕೆ: ₹240  ಕೋಟಿ

ಉದ್ಯೋಗ: 157

10 ಸಂಸ್ಥೆ: ಲಾಮ್ ರಿಸರ್ಚ್ ಇಂಡಿಯಾ ಪೈವೇಟ್ ಲಿಮಿಟೆಡ್

ಸ್ಥಳ: ಬೆಂಗಳೂರು

ಹೂಡಿಕೆ: ₹235.91  ಕೋಟಿ

ಉದ್ಯೋಗ: 1,724

11 ಸಂಸ್ಥೆ: ಟಾಟಾ ಸೆಮಿಕಂಡೆಕ್ಟರ್ ಅಸೆಂಬ್ಲಿ ಅಂಡ್ ಟೆಸ್ಟ್ ಪೈವೇಟ್ ಲಿಮಿಟೆಡ್

ಸ್ಥಳ: ಕೊಲಾರ ಜಿಲ್ಲೆ

ಹೂಡಿಕೆ: ₹200 ಕೋಟಿ

ಉದ್ಯೋಗ: 155

12 ಸಂಸ್ಥೆ: ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್

ಸ್ಥಳ: ಬೆಂಗಳೂರು ಗ್ರಾಮಾಂತರ ಜಿಲ್ಲೆ

ಹೂಡಿಕೆ: ₹137 ಕೋಟಿ

ಉದ್ಯೋಗ: 1,908

Advertisement

Udayavani is now on Telegram. Click here to join our channel and stay updated with the latest news.

Next