Advertisement

Irrigation ಯೋಜನೆಗಳ ಚರ್ಚೆಗೆ ಸಂಸದರ ತಂಡ: ಡಿ.ಕೆ.ಶಿವಕುಮಾರ್‌

01:08 AM Jan 08, 2024 | Team Udayavani |

ಬೆಂಗಳೂರು: ರಾಜ್ಯದ ನೀರಾವರಿ ಸಮಸ್ಯೆಗಳ ಕುರಿತು ಚರ್ಚಿಸಲು 31 ಸಂಸದರ ತಂಡ ಎರಡು ದಿನ ಕಾವೇರಿ ನದಿ ವೀಕ್ಷಣೆಗೆ ಬರಲಿದೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹನಿ ಮತ್ತು ತುಂತುರು ನೀರಾವರಿ ಸೇರಿ ಸಣ್ಣ ನೀರಾವರಿ ಯೋಜನೆಗಳು, ಕೇಂದ್ರದ ತ್ವರಿತ ನೀರಾವರಿ ಯೋಜನೆ (ಎಐಬಿಪಿ) ಅಡಿ ರಾಜ್ಯದಲ್ಲಿ ಕೈಗೊಂಡ ಕ್ರಮಗಳು, ನೀರಿನ ನಿರ್ವಹಣೆಯಂತಹ ಹಲವು ವಿಚಾರಗಳ ಕುರಿತು ಈ ತಂಡ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದೆ ಎಂದು ತಿಳಿಸಿದರು.

ನದಿ ಜೋಡಣೆ ವಿಚಾರ ಪ್ರಸ್ತಾವದ ಬಗ್ಗೆ ಕೇಳಿದಾಗ, ಅದು ಕೇಂದ್ರ ಸರಕಾರದ ಯೋಜನೆ. ಇದೊಂದು ದೊಡ್ಡ ಯೋಜನೆಯಾಗಿದ್ದು, ಈಗ ವಿಷಯಾಂತರ ಆಗುವುದು ಬೇಡ. ನಾಳೆ ಮತ್ತು ನಾಡಿದ್ದು (ಜ. 8 9) ಕೇಂದ್ರದ 31 ಸಂಸದರ ತಂಡ ಕಾವೇರಿ ವೀಕ್ಷಣೆ ಮಾಡಲಿದೆ. ಅನಂತರ ನೀರಾವರಿ ಸಮಸ್ಯೆಗಳ ಬಗ್ಗೆ ರಾಜ್ಯದ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ಚರ್ಚೆ ನಡೆಸಲಿದೆ ಎಂದರು.

“ಉದಯವಾಣಿ’ ಜತೆಗೆ ಮಾತನಾಡಿದ ಜಲಸಂಪನ್ಮೂಲ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ನದಿ ಜೋಡಣೆಗೂ ಸಂಸದರ ತಂಡದ ಕಾವೇರಿ ವೀಕ್ಷಣೆಗೂ ಸಂಬಂಧ ಇಲ್ಲ. ರಾಜ್ಯದ ನೀರಾವರಿ ವಿಷಯಗಳ ಕುರಿತು ಈ ತಂಡ ಚರ್ಚಿಸ ಲಿದೆ. ಅದರಲ್ಲೂ ಮುಖ್ಯವಾಗಿ ಎಐಬಿಪಿ ಅಡಿ ಕೈಗೊಂಡ ಕ್ರಮಗಳು ಚರ್ಚೆಗೆ ಬರಲಿವೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next