ಮಣಿಪಾಲ: ಐಪಿಎಲ್‌ನ 13ನೇ ಋತುವಿನ ಅರ್ಧದಷ್ಟು ಪಂದ್ಯಗಳನ್ನು ಈಗಾಗಲೇ ಆಡಲಾಗಿದೆ. ಐಪಿಎಲ್‌ನಲ್ಲಿ ಐದು ದಿನಗಳ mid-season transfer ಪ್ರಕ್ರಿಯೆಯು ಪ್ರಾರಂಭವಾಗಿದೆ. ಇದರ ಅಡಿಯಲ್ಲಿ ಆಟಗಾರರು ಎರಡೂ ತಂಡಗಳ ಪರಸ್ಪರ ಒಪ್ಪಿಗೆ ಇದ್ದರೆ ತಮ್ಮ ಫ್ರ್ಯಾಂಚೈಸ್ ಅನ್ನು ಬದಲಾಯಿಸಬಹುದಾಗಿದೆ.
ಯಾರು ಅರ್ಹರು
ಈ ಋತುವಿನಲ್ಲಿ ಆಡಲಾದ 7 ಪಂದ್ಯಗಳಲ್ಲಿ ಎರಡು ಅಥವ ಕಡಿಮೆ ಆಡಿದ ಆಟಗಾರರಿಗೆ ಮಾತ್ರ ಈ ವರ್ಗಾವಣೆ ವಿಂಡೋ ಅನ್ವಯಿಸುತ್ತದೆ. ಈ ಬಾರಿ ಅಂತಹ 90 ಆಟಗಾರರು mid-season transfer ವಿಂಡೋ ಅಡಿಯಲ್ಲಿ ಪರಸ್ಪರ ವಿನಿಮಯ ಮಾಡಿಕೊಳ್ಳಬಹುದಾಗಿದೆ.
ಇವುಗಳಲ್ಲಿ 12.50 ಕೋಟಿ ರೂ.ಗಳ ಮೌಲ್ಯದ ರಾಜಸ್ಥಾನ್ ರಾಯಲ್ಸ್‌ನ ಬೆನ್ ಸ್ಟೋಕ್ಸ್, 10 ಕೋಟಿ ರೂ.ಗಳ ಮೌಲ್ಯದ ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಕ್ರಿಸ್ ಮೊರಿಸ್, 8 ಕೋಟಿ ರೂ.ಗಳ ಮೌಲ್ಯದ ಮುಂಬೈ ಇಂಡಿಯನ್ಸ್‌ನ ನಾಥನ್ ಕೌಲ್ಟರ್ ನೈಲ್ ಮತ್ತು 5.25 ಕೋಟಿ ರೂ. ಮೌಲ್ಯದ ಡೆಲ್ಲಿ ಕ್ಯಾಪಿಟಲ್ಸ್ ನ ಅಜಿಂಕ್ಯಾ ರಹಾನೆ ಸೇರಿದ್ದಾರೆ. ಆದರೆ ಈ ಆಟಗಾರನ್ನು ಫ್ರ್ಯಾಂಚೈಸ್ ಗಳು ಬಿಟ್ಟುಕೊಡುವುದು ಅನುಮಾನ.
ವಿನಿಮಯ ಮಾಡಿಕೊಳ್ಳಬಹುದಾದ ಐಪಿಎಲ್‌ನ ದುಬಾರಿ ಆಟಗಾರರು
ಬೆನ್ ಸ್ಟೋಕ್ಸ್: 12.50 ಕೋಟಿ ರೂ. (ರಾಜಸ್ಥಾನ್ ರಾಯಲ್ಸ್)
ಕ್ರಿಸ್ ಮೋರಿಸ್: 10 ಕೋಟಿ ರೂ. (ರಾಯಲ್ ಚಾಲೆಂಜರ್ಸ್ ಬೆಂಗಳೂರು)
ನಾಥನ್ ಕೌಲ್ಟರ್ ನೈಲ್: 8 ಕೋಟಿ ( ಮುಂಬೈ ಇಂಡಿಯನ್ಸ್)
ಅಜಿಂಕ್ಯ ರಹಾನೆ: 5.25 ಕೋಟಿ (ಡೆಲ್ಲಿ ಕ್ಯಾಪಿಟಲ್ಸ್)
ಕರ್ನ್ ಶರ್ಮಾ: 5 ಕೋಟಿ ರೂ (ಚೆನ್ನೈ ಸೂಪರ್ ಕಿಂಗ್ಸ್)
Related Articles
ನಿಯಮ ಏನು ಹೇಳುತ್ತೆ?
-7 ಪಂದ್ಯಗಳನ್ನು ಆಡಿದ ತಂಡಗಳಿಗೆ ಮಾತ್ರ.
-ಆಟಗಾರರ ವರ್ಗಾವಣೆಗೆ ಎರಡೂ ತಂಡಗಳ ಪರಸ್ಪರ ಒಪ್ಪಿಗೆ ಅಗತ್ಯವಾಗಿರುತ್ತದೆ.
– ಈ ಋತುವಿನಲ್ಲಿ ಇಲ್ಲಿಯವರೆಗೆ ಎರಡು ಅಥವಾ ಕಡಿಮೆ ಪಂದ್ಯಗಳನ್ನು ಆಡಿದ ಆಟಗಾರರಿಗೆ ಮಾತ್ರ ವಿನಿಮಯ ಮಾಡಿಕೊಳ್ಳಲು ಅವಕಾಶ.
ಯಾವ ತಂಡದ ಎಷ್ಟು ಆಟಗಾರರು
ಮುಂಬೈ ಇಂಡಿಯನ್ಸ್‌ನ 13 ಆಟಗಾರರು, ಡೆಲ್ಲಿ ಕ್ಯಾಪಿಟಲ್ಸ್‌ನಿಂದ 13, ಕೋಲ್ಕತಾ ನೈಟ್ ರೈಡರ್ಸ್‌ನಿಂದ 10, ರಾಯಲ್ ಚಾಲೆಂಜರ್ಸ್ ಬೆಂಗಳೂರಿನಿಂದ 11, ಸನ್‌ರೈಸರ್ಸ್ ಹೈದರಾಬಾದ್‌ನಿಂದ 13, ರಾಜಸ್ಥಾನ್ ರಾಯಲ್ಸ್‌ನ 11, ಚೆನ್ನೈ ಸೂಪರ್ ಕಿಂಗ್ಸ್‌ನ 10, ಕಿಂಗ್ಸ್ ಇಲೆವೆನ್ ಪಂಜಾಬ್‌ನ 13 ಆಟಗಾರರು ವರ್ಗಾವಣೆಗೆ ಅರ್ಹತೆ ಪಡೆದಿದ್ದಾರೆ.