Advertisement
ಸೆ.1ರಿಂದಲೇ ಹೆಸರು ಬೆಳೆ ಖರೀದಿಗಾಗಿ 18 ಕೇಂದ್ರ ಹಾಗೂ ಉದ್ದು ಬೆಳೆ ಖರೀದಿಗಾಗಿ ಮೂರು ಕೇಂದ್ರ ಸ್ಥಾಪಿಸಿದ್ದು, ಅ. 13ಕ್ಕೆ ರೈತರ ನೋಂದಣಿ ಮುಕ್ತಾಯಗೊಂಡಿದೆ. ಇದೀಗ ನ.27ರ ವರೆಗೆ ಖರೀದಿ ಪ್ರಕ್ರಿಯೆ ಸಾಗಿದ್ದು, ಈ ಅವಧಿಯೂ ಇನ್ನೊಂದು ವಾರದಲ್ಲಿ ಮುಕ್ತಾಯಗೊಳ್ಳಲಿದೆ. ಆದರೆ ಅ.13ಕ್ಕೆ ಮುಕ್ತಾಯವಾಗಿರುವ ರೈತರ ನೋಂದಣಿಯಲ್ಲಿ ಶೇ.50 ರೈತರಿಂದಲೂ ಈವರೆಗೆ ಹೆಸರು ಕಾಳು ಖರೀದಿಯಾಗಿಲ್ಲ. ಇನ್ನು ಉದ್ದು ಬೆಳೆದ ರೈತರಂತೂ ಖರೀದಿ ಕೇಂದ್ರಗಳತ್ತ ಹೆಜ್ಜೆಯನ್ನೇ ಇಟ್ಟಿಲ್ಲ. ಈ ವರ್ಷದಿಂದ ಆರಂಭಿಸಿರುವ ಸೋಯಾಬೀನ್ ಬೆಳೆ ಮಾರಾಟಕ್ಕೂ ರೈತರಿಂದ ಸ್ಪಂದನೆ ಸಿಗುವ ನಿರೀಕ್ಷೆ ಇಲ್ಲದಂತಾಗಿದೆ.
Related Articles
Advertisement
ಹೆಸರು ಖರೀದಿ ಅವಧಿ ವಿಸ್ತರಿಸಲು ರೈತ ಮುಖಂಡರ ಒತ್ತಾಯಜಿಲ್ಲೆಯಲ್ಲಿ ಬಿತ್ತನೆಯಾದ ಹೆಸರು ಬೆಳೆಯ ಪೈಕಿ ಅಧಿಕ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಹಾನಿ ಉಂಟಾಗಿದ್ದು, ಮೋಡ ಕವಿದ ವಾತಾವರಣದಿಂದ ಹೆಸರು ಕಾಳಿನ ತೇವಾಂಶ ಹೆಚ್ಚಳದಿಂದ ಬೆಂಬೆಲೆಯಡಿ ಖರೀದಿ ಪ್ರಕ್ರಿಯೆಗೆ ಹಿನ್ನಡೆಯಾಗಿತ್ತು. ಇದೀಗ ತೇವಾಂಶ ಪ್ರಮಾಣ ಸರಿ ಪ್ರಮಾಣದಲ್ಲಿ ಬರುತ್ತಿರುವ ಕಾರಣ ರೈತರು ಸಹ ಖರೀದಿ ಕೇಂದ್ರಗಳಲ್ಲಿ ಹೆಸರು ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ ಖರೀದಿ ಪ್ರಕ್ರಿಯೆ ನ.27ಕ್ಕೆ ಮುಕ್ತಾಯಗೊಳ್ಳಲಿದೆ. ಹೀಗಾಗಿ ಈ ಅವಧಿ ವಿಸ್ತರಣೆ ಮಾಡಬೇಕೆಂಬ ಬೇಡಿಕೆ ರೈತ ಸಮುದಾಯದಿಂದ ಕೇಳಿ ಬಂದಿದೆ. ಈ ಬಗ್ಗೆ ಅಧಿಕೃತವಾಗಿ ಜಿಲ್ಲಾಡಳಿತಕ್ಕೂ ರೈತ ಮುಖಂಡರು ಮನವಿ ಸಲ್ಲಿಸಿದ್ದಾರೆ. ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಖರೀದಿಯಾಗಿದ್ದು, ನ.27ಕ್ಕೆ ಖರೀದಿ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಈ ಅವಧಿ ವಿಸ್ತರಣೆಗಾಗಿ ಮನವಿ ಮಾಡಲಾಗಿದೆ. ಇನ್ನು ಉದ್ದು ಖರೀದಿಗಾಗಿ 72 ಜನ ರೈತರು ನೋಂದಣಿ ಮಾಡಿದ್ದರೂ ಈವರೆಗೂ ಯಾರೂ ಮಾರಾಟ ಮಾಡಿಲ್ಲ. ಇದೀಗ ಆರಂಭಿಸಿರುವ ಸೋಯಾಬೀನ್ ಖರೀದಿ ಕೇಂದ್ರಗಳಲ್ಲಿ ರೈತರ ನೋಂದಣಿ ಆರಂಭಿಸಿದ್ದು, ಆದರೆ ಮಾರುಕಟ್ಟೆಯಲ್ಲಿಯೇ ಅಧಿಕ ಬೆಲೆ ಇರುವ ಕಾರಣ ಯಾರೂ ನೋಂದಣಿ ಮಾಡಿಸಿಲ್ಲ.
ವಿನಯ್ ಪಾಟೀಲ, ಹುಬ್ಬಳ್ಳಿ ಶಾಖಾ
ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಸಹಕಾರ
ಮಾರಾಟ ಮಹಾಮಂಡಳ ಶಶಿಧರ್ ಬುದ್ನಿ