Advertisement
ಬೆಟ್ಟಂಪಾಡಿ: ಮಕ್ಕಳ ಪ್ರತಿಭೆಯನ್ನು ಗುರುತಿಸಲು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಪೂರಕ. ಸುಪ್ತ ಪ್ರತಿಭೆಗೆ ಸರಿಯಾದ ವೇದಿಕೆ ಸಿಕ್ಕಿದರೆ ಮಾತ್ರ ಅನಾವರಣಗೊಳ್ಳಲು ಸಾಧ್ಯ ಎಂದು ಜಿ.ಪಂ.ಅಧ್ಯಕ್ಷೆ ಮೀನಾಕ್ಷಿ ಶಾಂತಿ ಗೋಡು ಅಭಿಪ್ರಾಯಪಟ್ಟರು. ಅವರು ಬೆಟ್ಟಂಪಾಡಿ ಪದವಿಪೂರ್ವ ಕಾಲೇಜು ಹಾಗೂ ಸರಕಾರಿ ಪ್ರೌಢಶಾಲಾ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಕಾಲೇಜಿನ ವಿಂಶತಿಯ ಸವಿನೆನಪಿಗಾಗಿ ಹೊರತಂದ ‘ಬಿಲ್ವ ಚಿಗುರು’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಡಿ. ಸುಕನ್ಯಾ ಮಾತನಾಡಿ, ಮಕ್ಕಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿರುತ್ತವೆ. ಸಿಕ್ಕಿದ ಅವಕಾಶವನ್ನು ಮಕ್ಕಳು ಬಳಸಿಕೊಂಡು ಮುಂದೆ ಶಾಲೆಗೆ ಮತ್ತು ಊರಿಗೆ ಉತ್ತಮ ಹೆಸರನ್ನು ತರುವಲ್ಲಿ ಪ್ರಯತ್ನಿಸಬೇಕೆಂದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ನಿಡ್ಪಳ್ಳಿ ಗ್ರಾ.ಪಂ. ಅಧ್ಯಕ್ಷೆ ಸುಮತಿ ಗಣೇಶ್ ಶುಭ ಹಾರೈಸಿದರು. ತಾ| ಪಂಚಾಯತ್ ಸದಸ್ಯರಾದ ಹರೀಶ್ ಬಿಜತ್ರೆ, ಮೀನಾಕ್ಷಿ ಮಂಜುನಾಥ, ಬೆಟ್ಟಂಪಾಡಿ ಗ್ರಾ. ಪಂ. ಅಧ್ಯಕ್ಷೆ ಉಮಾವತಿ ಸುಬ್ಬಪ್ಪ ಮಣಿ ಯಾಣಿ, ಕಾಲೇಜಿನ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಬಿ.ವೆಂಕಟ್ರಾವ್, ಸದಸ್ಯ ನಾಗರಾಜ್ ಘಾಟೆ ಮಾತನಾಡಿದರು.
Related Articles
Advertisement
ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಾಂಶುಪಾಲ ಬಿ. ಬಾಲಕೃಷ್ಣ ರಾವ್ ಸ್ವಾಗತಿಸಿದರು. ಪ್ರೌಢಶಾಲಾ ಹಿರಿಯ ಪದವೀಧರ ಶಿಕ್ಷಕ ಗಂಗಾಧರ. ಪಿ.ಎಸ್. ಪ್ರೌಢಶಾಲಾ ವರದಿ, ಹಿರಿಯ ಉಪನ್ಯಾಸಕಿ ರಜನಿ ಎಂ. ಕಾಲೇಜು ವರದಿ ವಾಚಿಸಿದರು. ಉಪನ್ಯಾಸಕ ಪ್ರಕಾಶ್ ಸ್ಮರಣ ಸಂಚಿಕೆಯ ಸ್ಥೂಲ ಪರಿಚಯ ನೀಡಿದರು. ಪದ್ಮನಾಭ ಎಸ್. ಬಹುಮಾನದ ಪಟ್ಟಿ ವಾಚಿಸಿದರು. ಪ್ರೌಢಶಾಲಾ ಪ್ರಭಾರ ಮುಖ್ಯ ಶಿಕ್ಷಕ ನಾರಾಯಣ ಕೆ. ವಂದಿಸಿದರು.