Advertisement
ಕುದೂರಿನ ವಿವಿಧ ಭಾಗದ ಬೀದಿಗಳಲ್ಲಿ ನಾಯಿಗಳ ಉಪಟಳ ದಿನೇ ದಿನೆ ಹೆಚ್ಚಾಗುತ್ತಿದೆ. ರಸ್ತೆ ಮೇಲೆ ಅಲ್ಲಲ್ಲಿ ಮಲಗಿರುತ್ತವೆ ಹಾಗೂ ಓಡಾಡುತ್ತಿರುತ್ತವೆ. ಯಾರಾದರೂ ರಸ್ತೆಯಲ್ಲಿ ಓಡಾಡುತ್ತಿದ್ದರೆ, ಅವರನ್ನು ಅಟ್ಟಿಸಿಕೊಂಡು ಹೋಗಿ ಕಚ್ಚುತ್ತವೆ. ಇನ್ನು ಮಕ್ಕಳು ಮನೆಯಿಂದ ಹೊರಗೆ ಬರುವಂತಿಲ್ಲ. ಜನರಿಗೆ ನಾಯಿ ಕಚ್ಚಿರುವ ಉದಾಹರಣೆಗಳಿವೆ.
Related Articles
Advertisement
ರಾತ್ರಿ ನಿದ್ದೆಗೆ ತೊಂದರೆ: ಗ್ರಾಮದೆಲ್ಲೆಡೆ ನಾಯಿಗಳ ಸಂಖ್ಯೆ ಉಲ್ಬಣಗೊಂಡಿದ್ದು, ಇಡೀ ರಾತ್ರಿ ಬೊಗಳುವುದರಿಂದ ರಾತ್ರಿ ನಿದ್ದೆ ಮಾಡದೆ ಪರಿತಪಿಸುವಂತಹ ವಾತಾವರಣ ನಾಯಿಗಳಿಂದ ನಿರ್ಮಾಣವಾಗಿದೆ.
ಮಂಗಗಳ ಹಾವಳಿ: ಮನೆಗಳ ಚಾವಣಿ ಮೇಲೆ ಹಾರುವ ಮಂಗಗಳು ಅಲ್ಲಿರುವ ಡಿಟಿಎಚ್ ಸೆಟ್ ಗಳನ್ನು ಹಾಳುಮಾಡುತ್ತಿವೆ. ಮನೆ ಹೆಂಚುಗಳನ್ನು ಒಡೆದು ಹಾನಿ ಮಾಡುತ್ತಿರುವ ಈ ಮಂಗಗಳ ಉಪ ಟಳದಿಂದಲೂ ಸ್ಥಳೀಯರು ಬೇಸತ್ತು ಹೋಗಿದ್ದಾರೆ.
ಇಂತಹ ಹಲವಾರು ಸಂದರ್ಭದಲ್ಲಿ ದುರ್ಘಟನೆಗಳು ನಡೆಯುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ, ಉದಾಸೀನ ತೋರುತ್ತಿದ್ದಾರೆ. ಇನ್ನು ನಾಯಿಗಳನ್ನು ಕೊಲ್ಲಲು ಮುಂದಾದರೆ ಅವರ ಮೇಲೆ ಪ್ರಾಣಿ ದಯಾ ಸಂಘದವರು ಪ್ರಕರಣ ದಾಖಲಿಸುತ್ತಾರೆ ಎಂದು ಇಲಾಖೆ ಅಧಿಕಾರಿಗಳು ನಾಯಿಗಳ ನಿಯಂತ್ರಣಕ್ಕೆ ಕಡಿವಾಣ ಹಾಕುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ಕೂಡಲೇ ನಾಯಿಗಳು ಮತ್ತು ಕೋತಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂಬುಂದು ಸಾರ್ವಜನಿಕರ ಅಗ್ರಹವಾಗಿದೆ.
ಕೆ.ಎಸ್.ಮಂಜುನಾಥ್