Advertisement

ವಿದೇಶದಲ್ಲಿ ಕಥೆಯೊಂದು ಶುರುವಾಗಿದೆ

11:40 AM Jul 30, 2018 | Team Udayavani |

ದಿಗಂತ್‌ ನಾಯಕರಾಗಿರುವ “ಕಥೆಯೊಂದು ಶುರುವಾಗಿದೆ’ ಚಿತ್ರ ಆಗಸ್ಟ್‌ 3 ರಂದು ತೆರೆಕಾಣುತ್ತಿದೆ. ತುಂಬಾ ದಿನಗಳ ನಂತರ ತೆರೆಕಾಣುತ್ತಿರುವ ದಿಗಂತ್‌ ಚಿತ್ರ ಎಂಬುದು ಒಂದು ವಿಶೇಷವಾದರೆ, ಈಗಾಗಲೇ ವಿದೇಶದಲ್ಲಿರುವ ಕನ್ನಡಿಗರು ಸಿನಿಮಾ ನೋಡಿ ಖುಷಿಪಟ್ಟಿರೋದು ಮತ್ತೂಂದು ವಿಶೇಷ.

Advertisement

ಹೌದು, “ಕಥೆಯೊಂದು ಶುರುವಾಗಿದೆ’ ಚಿತ್ರದ ಪ್ರೀಮಿಯರ್‌ ಶೋ ವಿದೇಶದಲ್ಲಿ ಈಗಾಗಲೇ ಆರಂಭವಾಗಿದ್ದು, ಇಲ್ಲಿವರೆಗೆ 10 ಪ್ರೀಮಿಯರ್‌ ಶೋಗಳು ನಡೆದಿವೆ. ಇಂಗ್ಲೆಂಡ್‌, ಅಮೆರಿಕಾ, ಆಸ್ಟೇಲಿಯಾ ಹಾಗೂ ಜರ್ಮನಿಯಲ್ಲಿ ಪ್ರೀಮಿಯರ್‌ ಶೋಗಳು ನಡೆದಿದ್ದು, ಸಿನಿಮಾ ನೋಡಿದ ವಿದೇಶಿ ಕನ್ನಡಿಗರು “ಕಥೆ’ಯನ್ನು ಇಷ್ಟಪಟ್ಟಿದ್ದಾರೆ.

ಹೊಸ ಬಗೆಯ ಸಿನಿಮಾವನ್ನು ಪ್ರೇಕ್ಷಕರ ಮೆಚ್ಚುಗೆ ಗಳಿಸುವ ಮೂಲಕ ಚಿತ್ರತಂಡ ಖುಷಿಯಾಗಿದೆ. ಸದ್ಯ ನಾಲ್ಕು ದೇಶಗಳಲ್ಲಿ ಪ್ರೀಮಿಯರ್‌ ಆಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ದೇಶಗಳಲ್ಲಿ ಪ್ರೀಮಿಯರ್‌ ಶೋ ನಡೆಸುವ ಉದ್ದೇಶ ಚಿತ್ರತಂಡಕ್ಕಿದೆ. “ಫ್ಯಾಮಿಲಿ ಆಡಿಯನ್ಸ್‌ ಸಿನಿಮಾವನ್ನು ಇಷ್ಟಪಡುತ್ತಿದ್ದಾರೆ’ ಎಂದು ನಿರ್ಮಾಪಕರಲ್ಲೊಬ್ಬರಾದ ರಕ್ಷಿತ್‌ ಶೆಟ್ಟಿ ಖುಷಿ ಹಂಚಿಕೊಂಡಿದ್ದಾರೆ.

ದಿಗಂತ್‌ ನಾಯಕರಾಗಿರುವ ಈ ಚಿತ್ರವನ್ನು ಸೆನ್ನಾ ಹೆಗ್ಡೆ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಪೂಜಾ ದೇವರಿಯಾ ನಾಯಕಿ. ಈಗಾಗಲೇ ಚಿತ್ರದ ಟ್ರೇಲರ್‌ ಯಶಸ್ಸು ಕಂಡಿದ್ದು, ಸಿನಿಮಾಕ್ಕೂ ಅದೇ ರೀತಿಯ ಪ್ರತಿಕ್ರಿಯೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದೆ ಚಿತ್ರತಂಡ. ಅಂದಹಾಗೆ, “ಕಥೆಯೊಂದು ಶುರುವಾಗಿದೆ’ ನಾಲ್ಕು ದಿನದಲ್ಲಿ ನಡೆಯುವ ಕಥೆ.

Advertisement

ಸೋಮವಾರ ಆರಂಭವಾಗಿ ಗುರುವಾರ ಮುಗಿಯುತ್ತದೆ. ಪ್ರತಿಯೊಬ್ಬರ ಜೀವನದಲ್ಲಿ ಬರುವ ಕಥೆಯನ್ನು ಮಜಾವಾಗಿ ಹೇಳಲಾಗಿದೆಯಂತೆ. ಚಿತ್ರದಲ್ಲಿ ದಿಗಂತ್‌ ರೆಸಾರ್ಟ್‌ ಮಾಲೀಕರಾಗಿ ಕಾಣಿಸಿಕೊಂಡಿದ್ದಾರೆ. ಮಿಡ್‌ಲೈಫ್ಗೆ  ಬಂದ ಯುವಕನ ತಳಮಳನ್ನು ಇಲ್ಲಿ ತೋರಿಸಲಾಗಿದ್ದು,  ಮದುವೆಯಾಗುತ್ತಾ, ಇಲ್ವಾ ಎಂಬ ಅಂಶದ ಜೊತೆಗೆ ಒಂಟಿತನದ ಭಯವನ್ನು ಇಲ್ಲಿ ಬಿಂಬಿಸಲಾಗಿದೆಯಂತೆ.

ಈ ಚಿತ್ರದ ಮತ್ತೂಂದು ಹೈಲೈಟ್‌ ಎಂದರೆ ಚಿತ್ರದಲ್ಲಿ ಮೂರು ವಯಸ್ಸಿನವರ ಮೂಲಕ ಜೀವನವನ್ನು ಕಟ್ಟಿಕೊಡಲಾಗಿದೆ. 20ರಿಂದ 21ರ ಒಂದು ಜೋಡಿ., 30ರ ಯುವಕ, 60 ರ ಒಂದು ಜೋಡಿ ಹಾಗೂ ಅವರ ಚಿಂತನೆಗಳೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. ಈ ಚಿತ್ರ ರಕ್ಷಿತ್‌ ಶೆಟ್ಟಿಯವರ ಪರಂವಾ ಸ್ಟುಡಿಯೋ ಹಾಗೂ ಪುಷ್ಕರ್‌ ಅವರ ಪುಷ್ಕರ್‌ ಫಿಲಂಸ್‌ನಡಿ ನಿರ್ಮಾಣವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next