Advertisement
ನಂದೊಂಥರ ರಗಡ್ ವ್ಯಕ್ತಿತ್ವ. ಕಾಲೇಜಲ್ಲಿ ತುಂಬಾ ಕೆಟ್ಟ ಹುಡುಗ, ಸ್ವಲ್ಪ ಒಳ್ಳೆ ಹುಡುಗ ಅನ್ನೋ ಥರದ ಕ್ಯಾರೆಕ್ಟರ್. ಕ್ಲಾಸಿಗೆ ಲೇಟ್ ಆಗಿ ಬರದೇ ಇದ್ದ ದಿನಗಳೇ ವಿರಳ. ಸೂರ್ಯನ ಬೆಳಕು ಮುಖಕ್ಕೆ ರಾಚಿದ ಮೇಲೆಯೇ ನನಗೆ ಬೆಳಗಾಗ್ತಿದ್ದಿದ್ದು, ಆಮೇಲೆ ಅರ್ಧಂಬರ್ಧ ತಿಂದು, ಅಮ್ಮನ ಬೈಗುಳಗಳೆಲ್ಲಾ ಆಶೀರ್ವಾದ ಅಂದ್ಕೊಂಡು ಬಸ್ ಹತ್ತಿದ್ರೆ ಮುಗೀತು. ಗೊತ್ತಲ್ವಾ, ಲೋಕಲ… ಬಸ್‌ಗಳಲ್ಲಿ ಆಗೋ ಕಾಮನ್ ಅವಾಂತರ? ಸಿಟಿ ಬಸ್ಟ್ಯಾಂಡ್ ತಲುಪುವವರೆಗೆ ಎಲ್ಲಾ ವಿಧದ ನೃತ್ಯ ಪ್ರಕಾರಗಳನ್ನು ಕುಂತಲ್ಲೇ ಮಾಡಿ ಮುಗಿಸಿರುತ್ತಿದ್ದೆ. ಮಳೆಗಾಲದಲ್ಲಿ ಬಸ್ಸಿನ ತಾರಸಿಯಿಂದ ಸೋರುವ ನೀರಿಗೆ ನನ್ನ ಮಳೆ ಡ್ಯಾನ್ಸ್ ಕೂಡ ಆಗಿಬಿಡುತ್ತಿತ್ತು. ಯಾರಿಗಂತ ಬೈಯ್ಯೋದು! ಕಚೀìಫ್ ಮರೆತು ಬಂದಾಗ ನನಗೆ ನಾನೇ ಬೈಕೊಂಡು ತೆಪ್ಪಗಾಗ್ತಿದ್ದೆ.
Related Articles
Advertisement
ಯಾಕೆ ಅಂದ್ರಾ? ಛತ್ರಿ ಕೊಂಡೊಯ್ಯುವುದೆಂದರೆ ಪಾಸಿಟಿವ್‌ಗಿಂತ ನೆಗೆಟಿವ್‌ಗಳೇ ಜಾಸ್ತಿ! ಒಮ್ಮೊಮ್ಮೆ ಮಳೆ ನಿಲ್ಲದೆ ಬೆಳಿಗ್ಗೆ ಮನೆ ಬಿಡೋ ಅಷ್ಟೊತ್ತಿಗೆ ಒಂದು ಕ್ಲಾಸ್ ಮುಗಿದು ಹೋಗಿರುತ್ತಿತ್ತು. ಆದ್ರೆ ಹೆಚ್ಚಿನ ಸಲ ರಸ್ತೆಯಲ್ಲಿ ತುಂತುರು ಮಳೆಯಲ್ಲಿ ನೆನೆಯೋ ಹುಡುಗನ ಮೇಲೆ ಉಕ್ಕಿ ಬರೋ ಕರುಣೆ ಪಕ್ಕದ್ಮನೆ ಹುಡ್ಗಿàರ ಹಾರ್ಟನ್ನು ಐಸ್ ಥರ ಕರಗಿಸಿ ಬಿಡ್ತಿತ್ತು ಅನ್ಸುತ್ತೆ. ಇದನ್ನೇ ನೋಡಿ ಪಾಸಿಟಿವ್ ಅಂತ ಆವಾಗ್ಲೆà ಹೇಳಿದ್ದು. ಒಂದೇ ಛತ್ರಿ ಕೆಳಗೆ ಒಂದು ಹುಡುಗಿ ಜೊತೆ ಜಿನುಗೋ ಮಳೆಯಲ್ಲಿ ವಾಕಿಂಗ್ ಹೋಗೋದು ಅಂದ್ರೆ ಸ್ವರ್ಗಕ್ಕೂ ಕಿಚ್ಚು ಹಚ್ಚಿದ ಹಾಗೆಯೇ ಅಲ್ವಾ? ಇನ್ನೂ ಅನುಭವಕ್ಕೆ ಬಂದಿÇÉಾ ಅಂದ್ರೆ ಟ್ರೈ ಮಾಡಿ ನೋಡಿ. ಅಯ್ಯೋ ಬರೀ ಛತ್ರಿ ನೋಡಿ ಬಿತ್ರಿ ಸಹವಾಸ ಮಾಡಿºಟ್ಟಿàರಾ ಆಮೇಲೆ.
ಬೀಳ್ಳೋ ಹೊಡೆತಕ್ಕೆ ನಾನಂತೂ ಹೊಣೆಗಾರ ಆಗಲಾರೆ!!ನಂಗೆ ಜೊತೆಯಾಗ್ತಿದ್ದ ರಮ್ಯಾ, ಕವನ, ಪ್ರತಿಮಾ ಎಲ್ಲರೂ ಕೊನೆವರೆಗೂ ನನ್ನ ಪಾಲಿನ ದೇವತೆಗಳೇ. ಅವರುಗಳ ಛತ್ರಿಯ ಆಯಸ್ಸು ಗಟ್ಟಿಯಾಗಿರಲಿ ಅಂತ ಬೇಡ್ಕೊಳ್ಳೋಕ್ಕಾದ್ರು ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗ್ತಿ¨ªೆ. ಒಂದೊಂದು ದಿನ ಮನೆ ಬಿಡುವ ಹೊತ್ತಿಗಾಗಲೇ ಒಂದು ಛತ್ರಿ ಸಿಕ್ಕರೆ ಲೋಕಲ… ಬಸ್ಸಲ್ಲಿ ಅರ್ಧ ಗಂಟೆ ಹರಟೆ ಪಕ್ಕಾ ಆಗಿರ್ತಿತ್ತು. ಹೌದು, ಇಂಥ ಮೀಟಿಂಗುಗಳೇ ಒಳ್ಳೆ ಗೆಳೆತನಕ್ಕೆ ನಾಂದಿ ಆಗ್ತಿತ್ತು. ಎಷ್ಟೋ ಸಲ ಥ್ಯಾಂಕÕ… ಹೇಳ್ಳೋದು ಮಳೆಗೋ, ಛತ್ರಿಗೋ ಅಂತ ಕನ್‌ಫ್ಯೂಸ್ ಆಗಿಬಿಡ್ತಿ¨ªೆ. ಭಟ್ಕಳದ ಬಸ್ಟ್ಯಾಂಡ್‌ಗೆ ಸರಿಯಾದ ಸಮಯಕ್ಕೆ ಬಸ್ ಬರೋದು ಅಂದ್ರೆ ತುಂಬಾ ಹೊಟ್ಟೆ ಹಸಿದಾಗ ಚಿಕನ್ ಬಿರಿಯಾನಿ ಸಿಕ್ಕಿಂದಂಗೇನೆ. ಟೈಮ… ಸಿಕ್ಕಾಗ ಬರೋ ಬಸ್ಸುಗಳಿಗೆ ಬಕ ಪಕ್ಷಿಗಳಂತೆ ಕಾಯ್ತಾ ನಿಂತಿರುವ ನಮಗೆÇÉಾ ಮಳೆರಾಯ ದೊಡ್ಡ ವಿಲನ್!! ಮಳೆ ಸುರಿಯೋವಾಗ ನೆನೆಯೋ ನನ್ನನ್ನು ನೋಡಿ ಪಕ್ಕದಲ್ಲಿರೋ ಒಬ್ಬಳಾದ್ರು ಹುಡುಗಿ ಹೃದಯ ಕರಗದೇ ಇರೋಕೆ ಸಾಧ್ಯಾನಾ? ಕೊನೆಗೂ ಛತ್ರಿ ಕೆಳಗಡೆ ನಾನ್ ನಿÇÉೋಕೆ ಒಂದು ಐದು ನಿಮಿಷ ಅಷ್ಟೇ ತಗುಲುತ್ತಿದ್ದಿದ್ದು. ಈ ಕೆಂಪು ಬಸ್ಸುಗಳನ್ನು ಕಾಯೋದೇ ಒಂದು ಹಿಂಸೆಯಾದರೆ ಬಸ್ಟ್ಯಾಂಡ್ ಎದುರಿಗೆ ಇರೋ ಕೆಸರು ಗ¨ªೆಯಲ್ಲಿ ಕಾಲಿಡೋದು ಇನ್ನೊಂದು ಗ್ರಹಚಾರ. ಛತ್ರಿ ಹಿಡಿದವಳ ಮುಖ ನೋಡಿ ಕೆನ್ನೆ ಕೆಂಪಾಗ್ತಿದ್ದಿದ್ದು. ಕಣÕನ್ನೆಯಲ್ಲಿ ಮಾತಾಡೋಕೆ ಶುರು ಮಾಡ್ತಿದ್ದಿದ್ದು, ಇವೆಲ್ಲಾ ನೆನಪಿಸಿಕೊಂಡಾಗಲೆÇÉಾ ಕಚಗುಳಿ ಇಟ್ಟಂಗಾಗುತ್ತೆ. ಅಷ್ಟಕ್ಕೆ ಮುಗಿಯೋ ಚಿಕ್ಕ ಕಥನಗಳೇನು ಅÇÉಾ ಬಿಡಿ ಅವು! ಈ ಛತ್ರಿಯ ಸಹವಾಸದಿಂದ ನನ್ನಂಥ ಎಷ್ಟೋ ಜನ ಹುಡುಗರು ಪ್ರೀತಿ ಬಲೆಗೂ ಬೀಳ್ಳೋ ಹಾಗಾಗಿದೆ. ಕೊನೆಗೆ ಬಸ್ ಇಳಿದು, ಮುಡೇìಶ್ವರದ ಸ್ವಾಗತ ಕಮಾನಿನ ಕೆಳಗೆ ಒಂದರ್ಧ ಕಿಲೋಮೀಟರ್ ನಡೆದು ಸಾಗಬೇಕಿದ್ದ ವಿದ್ಯಾ ದೇಗುಲಕ್ಕೆ ಮಳೆ ನಿಲ್ಲದ ಹೊತ್ತಲ್ಲಿ ಹುಡುಕಾಟ ಮತ್ಯಾವುದೋ ಛತ್ರಿಗೆ. ಅಲ್ಲಿಗೆ ಕಾಲೇಜಿನ ಮುಂಭಾಗ ತಲುಪುವವರೆಗಿನ ಪ್ರಯಾಣಕ್ಕೆ ಛತ್ರಿ ಜೊತೆಗೆ ಒಂದು ಬ್ಯೂಟಿಫುಲ… ವಾಕ್‌ವೆುàಟ್ ಕೂಡ!! ಅದ್ಯಾಕೋ ಈ ಹುಡ್ಗಿàರ ಜೊತೆ ನಡೆಯುವಾಗ, ಪಾಪ… ಅವರುಗಳ ಕೈನಲ್ಲಿ ಛತ್ರಿ ಇದ್ರೆ ಕೈ ನೋವು ಬರುತ್ತೇನೋ ಅಂತ ಇಸ್ಕೊಳ್ಳೋ ತುಂಬಾ ದೊಡ್ಡ ಮನಸ್ಸು ಹುಡುಗರದ್ದು. ಇದೇನು ಒಂದಿನಕ್ಕೆ ಮುಗಿಯೋ ಕಥೆ ಅÇÉಾ! ಮಳೆಗಾಲದಲ್ಲಿ ಛತ್ರಿಗಳ ಕೆಳಗೆ ನಡೆಯುವ ಪೋಲಿ ಹುಡುಗರ ಪ್ರೀತಿಯ ಕಥೆಗಳು ಸಾವಿರ. ಸದ್ಯದÇÉೇ ತುಂತುರು ಮಳೆಯಲ್ಲಿ ಬಣ್ಣದ ಛತ್ರಿಯ ಕೆಳಗೆ ಕಣÕನ್ನೆ, ಮುಗುಳುನಗೆಯಲ್ಲಿ ಶುರುವಾದ ಪ್ರೇಮ ಕಥೆಯೊಂದನ್ನು ಹಂಚಿಕೊಳ್ಳುತ್ತೇನೆ. ಅಲ್ಲಿಯವರೆಗೂ ನಿಮ್ಮ ಛತ್ರಿಗಳು ನಿಮ್ಮ ಜೊತೆಗೆ ಹುಷಾರಗಿರಲಿ ಅಯ್ತಾ? – ತಿರು ಭಟ್ಕಳ