Advertisement

Kodavoor ಮೂಡುಬೆಟ್ಟು ಕಡಿದಾದ ತಿರುವು

02:47 PM Jul 31, 2024 | Team Udayavani |

ಮಲ್ಪೆ: ಕೊಡವೂರು ಪೇಟೆಯಿಂದ ಮೂಡುಬೆಟ್ಟು ಮಾರ್ಗವಾಗಿ ಆದಿಉಡುಪಿಗೆ ತೆರಳುವಾಗ ಮೂಡು ಬೆಟ್ಟು ನಾಗಬನದ ಬಳಿ ಕಡಿದಾದ ತಿರುವುಗಳಿರುವುದು ಮಾತ್ರವಲ್ಲದೆ ಈ ರಸ್ತೆ ತೀರ ಅಗಲ ಕಿರಿದಾಗಿದ್ದು ಆಗಾಗ್ಗೆ ಇಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಗಿ ಜನ ನಿತ್ಯ ತೊಂದರೆಯನ್ನು ಅನುಭವಿಸುತ್ತಿದ್ದಾ ರೆ.

Advertisement

ಮೊದಲೇ ಇಲ್ಲಿನ ರಸ್ತೆಯ ಇಕ್ಕೆಲಗಳಲ್ಲಿ ಚರಂಡಿಗಳ ವ್ಯವಸ್ಥೆ ಇಲ್ಲ. ಬದಿಯಲ್ಲಿ ಹೊಂಡಗಳು ಇರುವುದರಿಂದ ಹೊಂಡದಲ್ಲಿ ಮಳೆನೀರು ನಿಂತು ವಾಹನಗಳು ಹೊಂಡಕ್ಕೆ ಬೀಳುತ್ತಿರುವುದು ಸಾಮಾನ್ಯವಾಗಿದೆ. ರಸ್ತೆಯ ತಿರುವಿನ ಮಧ್ಯದಲ್ಲಿ ಚಪ್ಪಡಿ ಕಲ್ಲುಗಳಡಿಯಲ್ಲಿ ಮಣ್ಣು ರಾಶಿ ತುಂಬಿಕೊಂಡಿದ್ದು ರಸ್ತೆಯ ಇಕ್ಕೆಲಗಳಲ್ಲಿ ಕೆಸರುಮಯವಾಗಿ ಗದ್ದೆಯಂತಾಗಿದೆ. ಇಲ್ಲಿನ ರಸ್ತೆ ದಾಟಿ
ಮುಂದಿನ ಊರು ತಲುಪಬೇಕಾದರೆ ಸಾರ್ವಜನಿಕರು ಹರಸಾಹಸವನ್ನು ಪಡಬೇಕಾಗಿದೆ.

ಈ ಭಾಗದಲ್ಲಿ ಎರಡು ಮೂರು ಶಾಲೆಗಳಿದ್ದು ವಿದ್ಯಾರ್ಥಿಗಳಿಗೆ ನಡೆದಾಡಿಕೊಂಡು ಹೋಗಲು ತೊಂದರೆಯಾಗಿದೆ. ಶಾಲಾ ಕಾಲೇಜಿಗೆ ಬಸ್‌ನಲ್ಲಿ ತೆರಳುವಾಗ ಸರಿಯಾದ ಸಮಯಕ್ಕೆ ಪ್ರಯಾಣಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.

ಮಲ್ಪೆ ಆದಿ ಉಡುಪಿ ಮುಖ್ಯ ರಸ್ತೆಯು ತೀರಾ ಹದಗೆಟ್ಟ ಕಾರಣ ಕೊಡವೂರು, ವಡಭಾಂಡೇಶ್ವರ ಬೀಚ್‌ ಕಡೆ ಬರುವ ವಾಹನಗಳು ಈ ಮಾರ್ಗದಲ್ಲಿ ಬರುವುದರಿಂದ ಇದೀಗ ಇಲ್ಲಿ ವಾಹನ ಸಂಚಾರ ದಟ್ಟವಾಗಿರುತ್ತದೆ. ಆದಿಉಡುಪಿ ಮಲ್ಪೆಗೆ ಪ್ರಮುಖ ಬದಲಿ ರಸ್ತೆ ಇದಾಗಿರುವುದರಿಂದ ಸಂಬಂಧಪಟ್ಟ ಇಲಾಖಾಧಿಕಾರಿಗಳು ಇತ್ತ ಗಮನಹರಿಸಿ ಇಲ್ಲಿ ರಸ್ತೆಯನ್ನು ವಿಸ್ತರೀಕರಣಗೊಳಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

ಪ್ರಸ್ತಾವನೆ ಸಲ್ಲಿಕೆ
ಆದಿಉಡುಪಿ ಕೊಡವೂರು ಮಾರ್ಗದ ರಸ್ತೆ ಮತ್ತು ಕೊಡವೂರು ಬಳಿಯ ಸೇತುವೆ ವಿಸ್ತರೀಕರಣಕ್ಕೆ ಈಗಾಗಲೇ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಶಾಸಕರಿಗೂ ಮನವಿ ಮಾಡಲಾಗಿದ್ದು ಅವರಿಂದ ಸ್ಪಂದನೆಯೂ ದೊರಕಿದೆ. ಈ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಲಾಗುತ್ತದೆ.

Advertisement

–  ಶ್ರೀಶ ಭಟ್‌,ನಗರಸಭೆ ಸದಸ್ಯರು, ಮೂಡುಬೆಟ್ಟು ವಾರ್ಡ್‌

Advertisement

Udayavani is now on Telegram. Click here to join our channel and stay updated with the latest news.

Next