Advertisement

ಹೊಂಬುಜದಲ್ಲಿ ಶಾಸನ ಪತ್ತೆ

03:46 PM Feb 12, 2023 | Pranav MS |

ರಿಪ್ಪನ್‌ಪೇಟೆ: ಶ್ರೀಕ್ಷೇತ್ರ ಹೊಂಬುಜದಲ್ಲಿ ಇತ್ತೀಚೆಗೆ ಶಿಲ್ಪ ಸಹಿತ ಕಂದುಕ ಕ್ರೀಡೆಯ ಮಹತ್ವದ ಮೊದಲ ಶಾಸನವೊಂದು ಪತ್ತೆಯಾಗಿದೆ. ಸ್ವಸ್ತಿ ಶ್ರೀ ಜಗದ್ಗುರು ಡಾ|ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯರ ನೇತೃತ್ವದಲ್ಲಿ ಹೊಂಬುಜದ ಪದ್ಮಾವತಿ ಅಮ್ಮನವರ ಬಸದಿಯನ್ನು ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ಈ ಶಾಸನ ಪತ್ತೆಯಾಗಿದೆ.

Advertisement

ಪದ್ಮಾವತಿ ಅಮ್ಮನವರ ಬಸದಿಯ ಹಿಂದಿನ ಲಕ್ಕಿಗಿಡದ ಒತ್ತುಗಟ್ಟೆಯ ಗೋಡೆಯಲ್ಲಿದ್ದ ಈ ಶಾಸನಗಂಭದ ಒಂದೇ ಮುಖದ ಶಾಸನವು ಇದುವರೆಗೂ ಗೋಚರಿಸುತ್ತಿತ್ತು. ಈಗ ಈ ಶಾಸನವನ್ನು ಗೋಡೆಯಿಂದ ಹೊರ ತೆಗೆದಾಗ ನಾಲ್ಕೂ ಬದಿಯಲ್ಲಿ ಶಾಸನವಿರುವುದು ಕಂಡುಬಂದಿದೆ. ಶಾಸನಗಂಭದ ಪಶ್ಚಿಮ, ದಕ್ಷಿಣ ಹಾಗೂ ಪೂರ್ವ ಮುಖಗಳ ಪಾಠವು ಈಗಾಗಲೆ ಎಪಿಗ್ರಫಿಯ ಕರ್ನಾಟಿಕ ಸಂಪುಟ-8 ರಲ್ಲಿ ಪ್ರಕಟವಾಗಿದೆ.

ಸದ್ಯ ಉತ್ತರ ಮುಖದ ಶಾಸನವು ಅಪ್ರಕಟಿತವಾಗಿದ್ದು ಕಂದುಕ ಕ್ರೀಡೆಯ ಮಹತ್ವದ ವಿವರವನ್ನು ಒಳಗೊಂಡಿದೆ. ಈ ಕಂದುಕ ಕ್ರೀಡೆಯನ್ನೆ ಇಂದು ಪೋಲೋ ಆಟವೆಂದು ಕರೆಯುತ್ತಾರೆ. ಶಾಸನ ಸಂಶೋಧಕ ಡಾ| ರವಿಕುಮಾರ ಕೆ. ನವಲಗುಂದ ಇದನ್ನು ಪತ್ತೆ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next