Advertisement

ಸಾಧಕರ ಯಶಸ್ಸಿನ ಗುಟ್ಟು ತಿಳಿಸುವ ವಿಶೇಷ ಉಪನ್ಯಾಸ ಸರಣಿ

11:32 PM Jan 14, 2020 | mahesh |

ಪ್ರತಿ ದಿನ, ಪ್ರತಿ ಕ್ಷಣ ಒತ್ತಡದ ಬದುಕು. ಬದುಕಿನಲ್ಲಿ ಎಲ್ಲವೂ ಇದ್ದು ಏನೂ ಇಲ್ಲವೆಂಬ ಭ್ರಮೆ. ಪ್ರತಿಷ್ಠಿತ ಕಾಲೇಜಿನ ಮೆಟ್ಟಿಲೇರಿ ಓದಿ ಮುಗಿಸಿದ ಮೇಲೂ ಬದುಕಿನಲ್ಲಿ ಸಾರ್ಥ ಕತೆಯ ಕುರಿತು ಸಂಶಯ.

Advertisement

ದೊಡ್ಡ ದೊಡ್ಡ ಕಂಪನಿಗಳಲ್ಲಿ ಕೆಲಸ, ಕೋಟ್ಯಂತರ ರೂಪಾಯಿಗಳ ವ್ಯವಹಾರ, ನಿಮ್ಮದೇ ಕಂಪನಿ, ಗಗನಚುಂಬಿ ಟವರ್‌ಗಳಲ್ಲಿ ಮನೆ, ಕಪ್ಪು ಕಾರು ಹೀಗೆ ಜೀವನದಲ್ಲಿ ಎಷ್ಟೇ ಇದ್ದರೂ ತೃಪ್ತ ಭಾವ ಇರುವುದಿಲ್ಲ.

ಈ ಗುಂಪಿನ ಮಧ್ಯೆ ಇನ್ನೊಂದು ವರ್ಗವೂ ಇದೆ. ಬದುಕಿನಲ್ಲಿ ಸಮಸ್ಯೆ ಬಂದಾಗ ನಮ್ಮ ಮುಂದೆ ಎರಡು ಆಯ್ಕೆಗಳಿರುತ್ತವೆ. ಒಂದಾ ಆ ಸಮಸ್ಯೆಗೆ ಶರಣಾಗಿ ಬಲಿಯಾಗುವುದು ಅಥವಾ ಆ ಸಮಸ್ಯೆಯನ್ನೇ ನಮ್ಮ ಬೆಳವಣಿಗೆಗೆ ವೇದಿಕೆಯನ್ನಾಗಿ ಮಾಡಿ ಕೊಂಡು ಸಾಧಿಸುವುದು.

ಹೀಗೆ ಸಮಸ್ಯೆಯನ್ನೇ ಗೆಲುವಿನ ಮೆಟ್ಟಿಲಾಗಿ ಮಾಡಿಕೊಂಡು ಯಶಸ್ಸು ಕಂಡ ಸಾಧಕರ ಮಾತುಗಳನ್ನು ನೀವು ಕೇಳುವುದು ನಿಜಕ್ಕೂ ಸ್ಫೂರ್ತಿ ದಾಯಕ ಸಂಗತಿ.

ಹೌದು ಟೆಡ್‌ಟಾಕ್‌ ತಮ್ಮ ಯಶೋಗಾ ಥೆಯನ್ನು ಹಂಚಿಕೊಳ್ಳುವವರಿಗೆ ಉತ್ತಮ ವೇದಿಕೆ. ಸಾಧಿಸ ಬೇಕೆಂಬ ಛಲ ಇರುವವರೆಗೂ ಪ್ರೇರಣೆಯಾಗಿದೆ. 1984 ಫೆಬ್ರವರಿ 23 ರಂದು ಈ ಪರಿಕಲ್ಪನೆ ಪ್ರಾರಂಭವಾಗಿದ್ದು, ಸುಮಾರು 20 ಭಾಷೆಗಳಲ್ಲಿ 3000ಕ್ಕೂ ಹೆಚ್ಚು ವಿಡಿಯೋಗಳು ಯೂಟ್ಯೂಬ್‌ನಲ್ಲಿ ಲಭ್ಯವಿದೆ.

Advertisement

ತಂತ್ರಜ್ಞಾನ, ವಿಜ್ಞಾನ, ಶಿಕ್ಷಣ, ಮನೋ ರಂಜನೆ ಸೇರಿದಂತೆ ಹತ್ತಾರು ಕ್ಷೇತ್ರಗಳ ಸಾಧ ಕರು ತಮ್ಮ ಜೀವನ ಏರುಪೇರುಗಳಿಂದ ಹಿಡಿದು ಉತ್ತಮ ಜೀವನ ನಿರ್ವಹಣೆಗೆ ಅಗತ್ಯ ವಾಗುವ ಸ್ಪೂರ್ತಿದಾಯಕ ವಿಷಯವನ್ನು ಹಂಚಿಕೊಳ್ಳುತ್ತಾರೆ.

ಮತ್ತೂಂದು ಅಚ್ಚರಿಯ ಸಂಗತಿ ಎಂದರೆ ಇದುವರೆಗೂ ಇಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡ ಪ್ರತಿ ವ್ಯಕ್ತಿಯೂ ನನ್ನ ಕೈಯಲ್ಲಿ ಏನೂ ಆಗದೆಂದು ಕೈಚೆಲ್ಲಿ ಕುಳಿತು ಅನಂತರ ವಿಜಯ ಪತಾಕೆ ಹಾರಿಸಿದವರು. ಬದುಕಿನಲ್ಲಿ ಪ್ರೇರಣೆ ಎಂಬುದು ತೀರಾ ಮುಖ್ಯ. ಕೈ ಚೆಲ್ಲಿ ಕುಳಿತಾಗ ಮತ್ತೆ ಎದ್ದು ನಡೆಸುವುದು ಮತ್ತೂಬ್ಬರ‌ ಸಾಧನೆ.

Advertisement

Udayavani is now on Telegram. Click here to join our channel and stay updated with the latest news.

Next