Advertisement
ಪಟ್ಟಣದ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ಬುಧವಾರ ಶಾಸಕ ರೇವಣ್ಣ, ಪತ್ನಿ ಭವಾನಿ ರೇವಣ್ಣ ಅವರು ಬೆಳಗ್ಗೆ 4.30ರಿಂದ 6 ಗಂಟೆಯವರೆಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸ್ವಗೃಹದಲ್ಲಿ ವಿಶೇಷ ಹೋಮ ನಡೆಸಿದರು. ರೇವಣ್ಣ ಅವರು ಮನೆಯಲ್ಲಿದ್ದಾರೆಂದರೆ ಸಾರ್ವಜನಿಕರು, ಕಾರ್ಯಕರ್ತರು, ಮುಖಂಡರು ಜಮಾಯಿಸುವುದು ಸಾಮಾನ್ಯ. ಆದರೆ ಪ್ರಜ್ವಲ್ ಪ್ರಕರಣದ ಅನಂತರ ಮನೆಯತ್ತ ಯಾರೂ ಸುಳಿಯುತ್ತಿಲ್ಲ.
ಮುಂಜಾನೆ ದೇಗುಲದಲ್ಲಿ ಪೂಜೆ, ಮನೆಯಲ್ಲಿ ಹೋಮ ನೆರವೇರಿಸಿದ ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರೇವಣ್ಣ, ಇದೊಂದು ಸುಳ್ಳಿನ ಆರೋಪ ವಾಗಿದ್ದು, ಇಂದು ಈ ಬಗ್ಗೆ ಮಾತನಾಡುವುದಿಲ್ಲ. ಏನೇ ಬಂದರೂ ನಾವು ಎದುರಿಸುತ್ತೇವೆ. ಎಲ್ಲವೂ ಸರಿ ಹೋಗುತ್ತೆ ಎಂದು ಹೇಳಿದರು. ಈಗಾಗಲೇ ಎಸ್‌ಐಟಿ ತಂಡ ನಮ್ಮ ಮನೆಗೆ ನೋಟಿಸ್ ಅಂಟಿಸಿದ್ದು, ಅದರಲ್ಲಿ ಏನಿದೆ ಎನ್ನುವುದನ್ನು ಗಮನಿಸಿಲ್ಲ. ಎಸ್‌ಐಟಿ ತಂಡದ ಎದುರು ತಮಗೆ ಗೊತ್ತಿರುವ ಮಾಹಿತಿ ದಾಖಲಿಸು ವುದಾಗಿ ತಿಳಿಸಿದರು. ಪೂಜೆ, ಹೋಮ ನೆರವೇರಿಸಿದ ಬಳಿಕ ರೇವಣ್ಣ ಅವರು ಬೆಂಗಳೂರಿಗೆ ತೆರಳಿದರು.