Advertisement
ಪೇಟೆಂಟ್‌ಗೆ ಅರ್ಜಿಕಾನ್ಪುರದ ಐಐಟಿಯಲ್ಲಿ ಮಾಸ್ಟರ್ ಆಪ್ ಡಿಸೈನ್ (ಎಂ.ಡೆಸ್) ಪದವಿ ಪಡೆದ ಕಾರ್ತಿಕ್ ಪಿ.ಬಿ. ಅವರ ಅಲೈಗ್ನೋ ಡಿಸೈನ್‌ಗೆ ಸಿಂಗಾಪುರದ ರೆಡ್ ಡಾಟ್ ಸಂಸ್ಥೆಯು ಈ ಸಾಲಿನ ಪ್ರಶಸ್ತಿ ನೀಡಿದೆ. ನಿವೃತ್ತ ಬ್ಯಾಂಕ್ ಉದ್ಯೋಗಿ ಪಿ.ಎಚ್.ಬಾಲಕೃಷ್ಣ-ಪಿ.ಬಿ.ಕವಿತಾ ದಂಪತಿಯ ಪುತ್ರ ಕಾರ್ತಿಕ್, ಕೆನರಾ ಪ.ಪೂ.ಕಾಲೇಜಿನಲ್ಲಿ ಪಿಯುಸಿ ಮುಗಿಸಿ ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಬಿಇ ಮುಗಿಸಿದ್ದರು. ಇನ್ಫೋಸಿಸ್‌ನಲ್ಲಿ ಉದ್ಯೋಗಿಯಾದರು. ಬಳಿಕ ಕಲಿಯಲೆಂದು ಉದ್ಯೋಗ ಬಿಟ್ಟು, ಐಐಟಿಯಲ್ಲಿ ಎಂ.ಡೆಸ್ ಪದವಿ ಪಡೆದರು. ವಿದ್ಯಾಭ್ಯಾಸದಲ್ಲಿದ್ದಾಗಲೇ ಹಲವು ಅವಶ್ಯಕ ಮಾದರಿಗಳ ಡಿಸೈನ್‌ಗಳನ್ನು ಸಿದ್ಧಪಡಿಸಿದ್ದು, ಪೇಟೆಂಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
Related Articles
ಎಳವೆಯಿಂದಲೂ ಕ್ರಿಯಾಶೀಲವಾಗಿ ಅಲೋಚಿಸ್ತುತಾ,ಏನಾದರೊಂದು ಸಾಧಿಸಬೇಕು ಎಂಬ ಛಲ ಹೊಂದಿದವನು. ಯಾವುದೇ ಕೆಲಸ ಮಾಡುವಾಗಲೂ ನಮ್ಮ ಸಲಹೆ ಪಡೆಯುತ್ತಾನೆ. ಆತನ ಎಲ್ಲ ಆಲೋಚನೆಗಳನ್ನು ಬೆಂಬಲಿಸುತ್ತಿದ್ದೇವೆ ಎನ್ನುತ್ತಾರೆ ಅವರ ತಂದೆ.
Advertisement
ದಾರಿಸೂಚಕದ ಡಿಸೈನ್ದಾರಿಸೂಚಕದ ಡಿಸೈನ್ ತಯಾರಿಸಲು ಕಾರ್ತಿಕ್ ಆರೇಳು ವರ್ಷದವನಾಗಿದ್ದಾಗ ತಂದೆ ಕೊಡಿಸಿದ್ದ ಭೂಪಟ ಮಾದರಿಯ ಆಟಿಕೆಯಿಂದ ಪ್ರೇರೇಪಣೆಗೊಂಡು ಇದನ್ನು ರೂಪಿಸಿದ್ದರು. ಅದರಲ್ಲಿ ಒಂದು ಲೇಯರ್‌ನಲ್ಲಿ ನಾವು ‘ಫ್ರಮ್ ‘ ಸ್ಥಳ ಹಾಗೂ ಇನ್ನೊಂದರಲ್ಲಿ ‘ಟು’ ಸ್ಥಳವನ್ನು ಆಯ್ಕೆ ಮಾಡಿದರೆ ಮಧ್ಯದಲ್ಲಿ ನಾವು ಸಾಗಬೇಕಾದ ಹಾದಿಯನ್ನು ತೋರಿಸುತ್ತದೆ. ಮೆಡಿಕಲ್ ಡಿವೈಸ್ ಡಿಸೈನ್
ಮಂಗಳೂರು ನಗರದಲ್ಲೇ ಉದ್ಯಮವೊಂದನ್ನು ಸ್ಥಾಪಿಸಿ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಕೈಗೆಟಕುವ ದರದಲ್ಲಿ ಮೆಡಿಕಲ್ ಡಿವೈಸ್‌ಗಳ ಡಿಸೈನ್‌ಗಳನ್ನು ಸಿದ್ಧಪಡಿಸುವ ಆಶಯ ಹೊಂದಿದ್ದೇನೆ. ಕೆಲವು ವೈದ್ಯರು, ಎಂಜಿನಿಯರ್‌ಗಳೊಂದಿಗೆ ಚರ್ಚಿಸಿ ಡಿಸೈನ್ ಸಿದ್ಧಪಡಿಸಲಾಗುವುದು. ಮಾಹಿತಿಗೆ ಆಸಕ್ತರು ಇಮೇಲ್ ವಿಳಾಸ karthikpb123@gmail.com ಸಂಪರ್ಕಿಸಿ.
– ಕಾರ್ತಿಕ್ ಕಿರಣ್ ಸರಪಾಡಿ