Advertisement
ಎಲ್ಲ ಗ್ರಾ.ಪಂ.ಗಳಲ್ಲಿ ಈ ಅಭಿಯಾನ ನಡೆಯಲಿದ್ದು, ಇದೇ ಅವಧಿಯಲ್ಲಿ ಒಂದು ಮಕ್ಕಳ ವಿಶೇಷ ಗ್ರಾಮ ಸಭೆಯೂ ನಡೆಯಲಿದೆ.
ತ್‌ಗಳ ಜವಾಬ್ದಾರಿಯನ್ನು ನಿಗದಿಪಡಿಸಿದೆ.
Related Articles
– ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ “ಕನ್ಯಾ ಶಿಕ್ಷಾ ಪ್ರವೇಶ್ ಉತ್ಸವ್’ ಅಂಗವಾಗಿ ಶಾಲೆಯಿಂದ ಹೊರಗುಳಿದ 11-14 ವರ್ಷದ ಹೆಣ್ಣು ಮಕ್ಕಳನ್ನು ಶಾಲೆಗೆ ದಾಖಲಿಸಬೇಕು.
– ಮಕ್ಕಳ ಜನನ ನೋಂದಣಿ, ಜನನ ಪ್ರಮಾಣಪತ್ರಗಳನ್ನು ವಿತರಿಸುವುದು.
– ಪೌಷ್ಟಿಕ ಆಹಾರ ಕುರಿತು ಮಾರ್ಗದರ್ಶನ, ಜಾಗೃತಿ ಮೂಡಿಸುವುದು.
– ಮಕ್ಕಳಿಗೆ ಚುಚ್ಚುಮದ್ದು ಪ್ರಾಮುಖ್ಯವನ್ನು ವಿವರಿಸುವುದು.
– ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಮ್ಮಿಕೊಳ್ಳುವುದು.
Advertisement
ಮಕ್ಕಳ ವಿಶೇಷ ಗ್ರಾಮ ಸಭೆಹತ್ತು ವಾರಗಳ ಅಭಿಯಾನದ ಸಂದರ್ಭದಲ್ಲಿ ಪ್ರತಿವಾರ ಚಟು ವಟಿಕೆಗಳನ್ನು ಕೈಗೊಳ್ಳಬೇಕು. ಈ ಅಭಿಯಾನದ ಅವಧಿಯಲ್ಲಿ ಒಂದು ದಿನ ಮಕ್ಕಳ ವಿಶೇಷ ಗ್ರಾಮ ಸಭೆಯನ್ನು ಆಯೋಜಿಸಬೇಕು. ಈ ಸಭೆಯಲ್ಲಿ ಮಕ್ಕಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಬೇಕು. ಇದರಲ್ಲಿ ಮಕ್ಕಳು ಅವರ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿ ಸಲು ಹೆಚ್ಚಿನ ಅವಕಾಶ ಕೊಡಬೇಕು. ಸಭೆಯಲ್ಲಿ ಕೇಳಿ ಬರುವ ಸಲಹೆ, ಅಭಿಪ್ರಾಯಗಳು ಮತ್ತು ಕೈಗೊಳ್ಳಲಾದ ನಿರ್ಣಯಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಜರಗಿಸಬೇಕು ಎಂದು ಇಲಾಖೆ ಸೂಚಿಸಿದೆ. ರಾಜ್ಯದಲ್ಲಿ 15 ವರ್ಷಗಳಿಂದ ಮಕ್ಕಳ ಗ್ರಾಮ ಸಭೆಗಳನ್ನು ನಡೆಸಲಾಗುತ್ತಿದೆ. ಹಳ್ಳಿಗಳಲ್ಲಿ ಮಕ್ಕಳ ಸಮಸ್ಯೆ, ಬೇಡಿಕೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಮುಂದೆ ಮಂಡಿಸಿ ಅಗತ್ಯ ಪರಿಹಾರ ಕಂಡುಕೊಳ್ಳುವುದಕ್ಕೆ ಮಕ್ಕಳ ಗ್ರಾಮ ಸಭೆ ಪ್ರಮುಖ ವೇದಿಕೆಯಾಗಿದೆ. ಮಕ್ಕಳ ಗ್ರಾಮ ಸಭೆಯನ್ನು ಒಂದು ದಿನಕ್ಕೆ ಸೀಮಿತಗೊಳಿಸಿದೆ ಅದಕ್ಕೆ ಅಭಿಯಾನದ ರೂಪ ನೀಡಲಾಗುತ್ತಿದೆ.
– ಉಮಾ ಮಹದೇವನ್,
ಅಪರ ಮುಖ್ಯ ಕಾರ್ಯದರ್ಶಿ, ಆರ್‌ಡಿಪಿಆರ್ ಇಲಾಖೆ -ರಫೀಕ್ ಅಹ್ಮದ್