Advertisement

ವಾಯುಸೇನೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಬಲ

02:54 AM Jul 03, 2020 | Sriram |

ಹೊಸದಿಲ್ಲಿ: ಚೀನದ ಜತೆಗೆ ಗಡಿ ಬಿಕ್ಕಟ್ಟು ವಿಷಮಿಸಿರುವ ನಡುವೆಯೇ 33 ಮುಂಚೂಣಿ ಯುದ್ಧ ವಿಮಾನಗಳು, ಬಹು ಸಂಖ್ಯೆಯ ಕ್ಷಿಪಣಿ ವ್ಯವಸ್ಥೆಗಳು ಮತ್ತು ಇತರ ಮಿಲಿಟರಿ ಸಾಮಗ್ರಿಗಳನ್ನು 38,900 ಕೋಟಿ ರೂ. ವೆಚ್ಚದಲ್ಲಿ ಖರೀದಿಸುವ ಮೂಲಕ ಸಶಸ್ತ್ರ ಪಡೆಗಳ ಬಲವರ್ಧನೆಗೆ ಭಾರತದ ರಕ್ಷಣ ಸಚಿವಾಲಯವು ಗುರುವಾರ ಸಮ್ಮತಿ ನೀಡಿದೆ.

Advertisement

ರಷ್ಯಾದಿಂದ ಮಿಗ್‌- 29 ಎಸ್‌ ವಿಮಾನಗಳ ಖರೀದಿ ಮತ್ತು ನವೀಕರಣಕ್ಕೆ 7,418 ಕೋಟಿ ರೂ. ವೆಚ್ಚವಾಗಲಿದೆ. ಇವುಗಳ ಜತೆಗೆ 12 ಸುಖೋಯ್‌ ಸು- 30 ಎಂಕೆಐ ಯುದ್ಧ ವಿಮಾನಗಳನ್ನು ಬೆಂಗಳೂರಿನ ಹಿಂದೂಸ್ಥಾನ್‌ ಏರೋನಾಟಿಕ್ಸ್‌ ಲಿಮಿಟೆಡ್‌ (ಎಚ್‌ಎಎಲ್‌)ನಿಂದ ಖರೀದಿಸಲಾಗುತ್ತಿದೆ. ಇದಕ್ಕಾಗಿ ರಕ್ಷಣ ಇಲಾಖೆ 10,730 ಕೋಟಿ ರೂ. ವಿನಿಯೋಗಿಸಲಿದೆ ಎಂದು ಡಿಫೆನ್ಸ್‌ ಅಕ್ವಿಸಿಶನ್‌ ಕೌನ್ಸಿಲ್‌ (ಡಿಎಸಿ) ತಿಳಿಸಿದೆ.

ವಿಮಾನಗಳ ನವೀಕರಣ
ಪ್ರಸ್ತುತ ಇರುವ 59 ಮಿಗ್‌- 29 ವಿಮಾನಗಳನ್ನು ನವೀಕರಣಗೊಳಿಸಲು ಕೂಡ ಡಿಎಸಿ ಸಭೆ ನಿರ್ಧರಿಸಿದೆ. ಮಿಗ್‌-29 ಎಸ್‌ಗಳನ್ನು ಆದಷ್ಟು ಬೇಗ ಹಸ್ತಾಂತರಿಸಲು ರಷ್ಯಾ ಒಪ್ಪಿದೆ. ಮಿಗ್‌-29 ವಿಮಾನ ನವೀಕರಣ ಯೋಜನೆಯನ್ನೂ ಬೇಗನೆ ಕೈಗೆತ್ತಿಕೊಳ್ಳಲಿದೆ. 59 ಮಿಗ್‌- 29ಗಳನ್ನು ನಾಲ್ಕನೇ ತಲೆಮಾರಿನ ಫೈಟರ್‌ ಜೆಟ್‌ಗಳಿಗೆ ಸಮನಾಗಿ ಉನ್ನತೀಕರಿಸಲಾಗುತ್ತಿದೆ.

ಆತ್ಮನಿರ್ಭರಕ್ಕೆ ಒತ್ತು
ಯುದ್ಧ ಸಾಮಗ್ರಿಗಳ ಖರೀದಿಗೆ ಮೀಸಲಿರಿಸಿರುವ 38,900 ಕೋಟಿ ರೂ.ಗಳಲ್ಲಿ 31,130 ಕೋಟಿ ರೂ.ಗಳ ಪ್ರಯೋಜನವನ್ನು ಸ್ಥಳೀಯ ಕೈಗಾರಿಕೆಗಳು ಪಡೆಯಲಿವೆ. ಡಿಆರ್‌ ಡಿಒ ಘಟಕದಲ್ಲಿ ಹೆಚ್ಚಿನ ಯೋಜನೆಗಳನ್ನು ಕೈಗೊಳ್ಳಲಾಗುತ್ತಿದೆ. ಪಿನಾಕಾ ಯುದ್ಧ ಸಾಮಗ್ರಿ, ಬಿಎಂಪಿ ಶಸ್ತ್ರಾಸ್ತ್ರ ನವೀಕರಣ ಮತ್ತು ಸಾಫ್ಟ್ ವೇರ್‌ ಡಿಫೈನ್‌x ರೇಡಿಯೊ, ಬಲುದೂರ ದಾಳಿ ಸಾಮರ್ಥ್ಯದ ಕ್ಷಿಪಣಿ ವ್ಯವಸ್ಥೆ ಮತ್ತು “ಅಸ್ತ್ರ’ ಕ್ಷಿಪಣಿಗಳನ್ನು ಡಿಆರ್‌ಡಿಒದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ.

ಏನೇನು ಖರೀದಿ?
-ಪಿನಾಕಾ ಶಸ್ತ್ರಾಸ್ತ್ರಗಳು
-ಬಿಎಂಪಿ ಶಸ್ತ್ರಾಸ್ತ್ರ ನವೀಕರಣಗಳು
-ಸೇನೆಗಾಗಿ ಸಾಫ್ಟ್ ವೇರ್‌ ಒಳಗೊಂಡ ರೇಡಿಯೋ
-1,000 ಕಿ.ಮೀ.ಗಳಷ್ಟು ಬಹುದೂರಕ್ಕೆ ದಾಳಿ ಮಾಡಬಲ್ಲ ಕ್ರೂಸ್‌ ಕ್ಷಿಪಣಿ ವ್ಯವಸ್ಥೆ
-248 ಅಸ್ತ್ರಾ ಕ್ಷಿಪಣಿಗಳು – ಕಣ್ಣಿಗೆ ಕಾಣ ದಷ್ಟು ದೂರಕ್ಕೆ ನೆಗೆಯಬಲ್ಲ ಸಾಮರ್ಥ್ಯ
-21ಮಿಗ್‌-29 ಎಸ್‌ ಫೈಟರ್‌ ಜೆಟ್‌
-ಸದ್ಯ ಇರುವ 59 ಮಿಗ್‌ 29 ಫೈಟರ್ ಗಳ ನವೀಕರಣ
-12 ಸುಖೋಯ್‌ ಎಂಕೆಐ ಏರ್‌ ಕ್ರಾಫ್ಟ್

Advertisement
Advertisement

Udayavani is now on Telegram. Click here to join our channel and stay updated with the latest news.

Next