Advertisement

ಭಯೋತ್ಪಾದನೆ ಬಗೆಗೆ ಮೃದು ಧೋರಣೆ ಸರಿಯಲ್ಲ

10:13 PM Jan 04, 2023 | Team Udayavani |

ಭಯೋತ್ಪಾದನೆ; ಇಂದು-ನಿನ್ನೆಯ ಸಮಸ್ಯೆ ಅಲ್ಲ, ಅಷ್ಟೇ ಅಲ್ಲದೆ ಯಾವುದೇ ಒಂದು ದೇಶಕ್ಕೆ ಸೀಮಿತವಾಗಿಯೂ ಉಳಿದಿಲ್ಲ. ಆದರೆ ಕೆಲ ವೊಂದು ದೇಶಗಳು ಭಯೋತ್ಪಾದಕ ದಾಳಿಗಳಿಗೆ ನಿರಂತರವಾಗಿ ಗುರಿ ಯಾಗುತ್ತಲೇ ಇದೆ. ಉಗ್ರರ ಉಪಟಳ ಭಾರತವನ್ನೂ ಬಿಟ್ಟಿಲ್ಲ. ಆದರೆ ಪಾಕಿಸ್ಥಾನ ಸಹಿತ ವಿಶ್ವದ ಕೆಲವೊಂದು ದೇಶಗಳು ಭಯೋತ್ಪಾದನೆಗೆ ಕುಮ್ಮಕ್ಕು, ಹಣಕಾಸಿನ ನೆರವು, ಉಗ್ರರಿಗೆ ಆಶ್ರಯ ನೀಡುತ್ತಲೇ ಬಂದಿವೆ. ವಿಶ್ವಸಂಸ್ಥೆ ಮತ್ತು ಅಂತಾರಾಷ್ಟ್ರೀಯ ಸಮುದಾಯ ಈ ಬಗ್ಗೆ ಆ ರಾಷ್ಟ್ರಗಳಿಗೆ ಎಚ್ಚರಿಕೆ, ಕೆಲವೊಂದು ನಿರ್ಬಂಧಗಳನ್ನು ಹೇರಿ ಈ ಬಗ್ಗೆ ಎಚ್ಚರಿಕೆ ನೀಡುತ್ತ ಬಂದಿವೆಯಾದರೂ ಈ ದೇಶಗಳು ತಮ್ಮ ಚಾಳಿಯನ್ನು ಇನ್ನೂ ಬಿಟ್ಟಿಲ್ಲ. ಯಾವುದಾದರೊಂದು ದೇಶದಲ್ಲಿ ಭಯೋತ್ಪಾದನ ದಾಳಿ ನಡೆದಲ್ಲಿ ಜಗ ತ್ತಿನ ಇತರ ರಾಷ್ಟ್ರಗಳಿಂದ ಪ್ರತಿಭಟನೆ ವ್ಯಕ್ತವಾಗುತ್ತಿಲ್ಲ. ಇವೆಲ್ಲದರ ಹಿನ್ನೆಲೆ ಯಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಖಾತೆಯ ಸಚಿವ ಎಸ್‌.ಜೈಶಂಕರ್‌ ವಿದೇಶಿ ಟಿ.ವಿ.ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ನೀಡಿರುವ ತೀಕ್ಷ್ಣ ಹೇಳಿಕೆ ಇಡೀ ವಿಶ್ವ ಸಮುದಾಯವನ್ನು ಒಮ್ಮೆ ಚಿವುಟಿ ನೋಡಿಕೊಳ್ಳುವಂತೆ ಮಾಡಿರುವುದಂತೂ ಸುಳ್ಳಲ್ಲ.

Advertisement

ಸಚಿವ ಜೈಶಂಕರ್‌ ಅವರು ಪಾಕಿಸ್ಥಾನವನ್ನು ನೇರವಾಗಿ ಗುರಿಯಾಗಿಸಿ ಈ ಹೇಳಿಕೆಯನ್ನು ನೀಡಿರುವರಾದರೂ ಭಯೋತ್ಪಾದನೆಯ ಬಗೆಗಿನ ಭಾರತದ ನಿಲುವೇನು?, ಭಯೋತ್ಪಾದನೆಯ ನಿರ್ಮೂಲನೆಗೆ ಜಾಗತಿಕ ಸಮುದಾಯ ಇಡಬೇಕಾದ ಹೆಜ್ಜೆಯೇನು? ಎಂಬ ಬಗ್ಗೆ ನೇರವಾಗಿಯೇ ತಿಳಿಸಿಕೊಟ್ಟಿದ್ದಾರೆ. ಕೇವಲ ಭಾರತ ಮಾತ್ರವಲ್ಲದೆ ಜಾಗತಿಕ ಭಯೋತ್ಪಾದ ಕರ ಪಾಲಿಗೆ ಆಶ್ರಯತಾಣವಾಗಿರುವ ಪಾಕಿಸ್ಥಾನವನ್ನು ಜಗತ್ತಿನ ಮುಂದೆ ಬೆತ್ತಲಾಗಿಸಿದ್ದರೆ ಜಗತ್ತಿನ ಅದರಲ್ಲೂ ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳು ಭಯೋತ್ಪಾದನೆಯ ಕುರಿತಂತೆ ತಳೆದಿರುವ ಮೃದು ಧೋರಣೆಯನ್ನು ಪ್ರಶ್ನಿಸಿದ್ದಾರೆ.  ಭಯೋತ್ಪಾದನೆಯ ನಿರ್ಮೂಲನೆಗಾಗಿ ವಿಶ್ವಸಂಸ್ಥೆ ಆದಿ ಯಾಗಿ ವಿವಿಧ ಅಂತಾರಾಷ್ಟ್ರೀಯ ಒಕ್ಕೂಟ, ಸಂಘಟನೆಗಳು, ಶೃಂಗಸಭೆ ಗಳು, ಜಾಗತಿಕ ಅಧಿವೇಶನಗಳಲ್ಲಿ ನಿರ್ಣಯಗಳನ್ನು ಕೈಗೊಳ್ಳುತ್ತಲೇ ಬರ ಲಾಗಿದೆ. ಅಷ್ಟು ಮಾತ್ರವಲ್ಲದೆ ವಿಶ್ವದ ಯಾವುದೇ ದೇಶದಲ್ಲಿ ಭಯೋತ್ಪಾ ದಕ ಕೃತ್ಯ ನಡೆದಾಗ ಅದನ್ನು ತೀವ್ರವಾಗಿ ಖಂಡಿಸಿ, ಭಯೋತ್ಪಾದನೆಯ ವಿರುದ್ಧ ಸಾಂ ಕ ಹೋರಾಟಕ್ಕೆ ವಿಶ್ವ ಸಮುದಾಯ ಕರೆ ಕೊಡುತ್ತಲೇ ಬಂದಿದೆ. ಆದರೆ ಇವೆಲ್ಲವೂ ಕೇವಲ ಸಾಂದರ್ಭಿಕ ಖಂಡನೆ, ನಿರ್ಧಾರ ಗಳಾಗುತ್ತಿವೆಯೇ ವಿನಾ ಭಯೋತ್ಪಾದನೆ ನಿರ್ಮೂಲನೆಯ ತನ್ನ ಗುರಿ ಯನ್ನು ಸಾಧಿಸುವಲ್ಲಿ ಯಶಸ್ಸು ಕಂಡಿಲ್ಲ. ಯಥಾಪ್ರಕಾರ ಭಯೋತ್ಪಾದ ಕರು ತಮ್ಮ ದುಷ್ಕೃತ್ಯಗಳಲ್ಲಿ ನಿರತರಾದರೆ ಉಗ್ರ ಪೋಷಕ ರಾಷ್ಟ್ರಗಳು ಭಯೋತ್ಪಾದನೆಯನ್ನು ವಿಶ್ವದಲ್ಲಿ ಜೀವಂತವಾಗಿಡುವ ಕಾರ್ಯದಲ್ಲಿ ತೊಡಗಿಕೊಳ್ಳುತ್ತವೆ. ಪಾಕಿಸ್ಥಾನ ಪ್ರೇರಿತ ಭಯೋತ್ಪಾದನೆ ಭಾರತಕ್ಕೆ ಸಾಕಷ್ಟು ಸಂಕಷ್ಟಗಳನ್ನು ತಂದೊಡ್ಡಿದೆ. ಇದರ ಹೊರತಾಗಿಯೂ ಭಾರತ ಉಗ್ರರ ವಿರುದ್ಧ ಸಮರ ಸಾರುವ ಮೂಲಕ ಅವರ ಹುಟ್ಟಡಗಿಸುವ ಕಾರ್ಯ ಮಾಡುತ್ತಲೇ ಬಂದಿದೆ. ಹೀಗಿದ್ದರೂ ಪಾಕಿಸ್ಥಾನ ತನ್ನ ಚಾಳಿಯನ್ನು ಬಿಡದೆ ಉಗ್ರರಿಗೆ ಆಶ್ರಯ ನೀಡುತ್ತಿರುವುದು ಮುಂದಿನ ದಿನಗಳಲ್ಲಿ ಕೇವಲ ಭಾರತಕ್ಕೆ ಮಾತ್ರವಲ್ಲ ವಿಶ್ವಕ್ಕೇ ಸಂಚಕಾರ ತಂದೊಡ್ಡಲಿದೆ. ಇನ್ನಾದರೂ ಈ ನೆಲದಿಂದ ಭಯೋತ್ಪಾದನೆಯ ಬೇರನ್ನು ಕಿತ್ತೂಗೆಯಲು ಇಡೀ ವಿಶ್ವ ಸಮುದಾಯ ಸಂಕಲ್ಪ ತೊಡದೇ ಹೋದಲ್ಲಿ ಇದರಿಂದ ಇನ್ನಷ್ಟು ಅಪಾಯ ನಿಶ್ಚಿತ ಎಂಬ ಕಠಿನ ಎಚ್ಚರಿಕೆಯೂ ಸಚಿವರ ಈ ಹೇಳಿಕೆಯ ಹಿಂದಿದೆ. ಇದನ್ನು ಇನ್ನಾದರೂ ವಿಶ್ವ ಸಮುದಾಯ ಗಂಭೀರವಾಗಿ ಪರಿಗಣಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next