Advertisement

ಪ್ರೋತ್ಸಾಹವಿದ್ದರೆ ಯುವ ವಿಭಾಗದಿಂದ ಮಹತ್ವರ ಸಾಧನೆ: ಅನಿಲ್‌ ಹೆಗ್ಡೆ

03:27 PM Feb 21, 2024 | Team Udayavani |

ಮುಂಬಯಿ: ರಂಗಭೂಮಿ ನಿರಂತರ ಬೆಳೆಯಬೇಕು. ಆ ಮೂಲಕ ಮುಂದಿನ ಯುವ ಪೀಳಿಗೆ ನಮ್ಮ ಕಲೆ – ಸಂಸ್ಕೃತಿ ಬಗ್ಗೆ ಅರಿತುಕೊಳ್ಳಬೇಕು ಎನ್ನುವುದು ರಂಗಭೂಮಿ ಫೈನ್‌ ಆರ್ಟ್ಸ್‌ ನ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ನಾವು ಸತತ ಪ್ರಯತ್ನ ಮಾಡುತ್ತೇವೆ. ಶನೀಶ್ವರ ಮಂದಿರದ ಯುವ ವಿಭಾಗ ಹಾಗೂ ಮಹಿಳಾ ವಿಭಾಗವು ಸಕ್ರಿಯವಾಗಿದ್ದು, ಕಾರ್ಯಕ್ರಮದ ಯಶಸ್ಸುಗಳಲ್ಲಿ ಇವರ ಪಾತ್ರ ಮಹತ್ತರವಾಗಿದೆ. ಯುವ ವಿಭಾಗಕ್ಕೆ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಮಾರ್ಗ ದರ್ಶನ ನೀಡಿದರೆ ಅವರು ಯಾವುದೇ ಕಾರ್ಯವನ್ನು ಯಶಸ್ವಿಯಾಗಿ ಮಾಡುವುದರಲ್ಲಿ ಸಂಶಯವಿಲ್ಲ ಎಂದು ರಂಗಭೂಮಿ ಫೈನ್‌ ಆರ್ಟ್ಸ್ ಅಧ್ಯಕ್ಷ ಅನಿಲ್‌ ಕುಮಾರ್‌ ಹೆಗ್ಡೆ ಹೇಳಿದ್ದಾರೆ.

Advertisement

ನವಿಮುಂಬಯಿ ನೆರೂಲ್‌ ಶನೀಶ್ವರ ಮಂದಿರದ ರಂಗಮಂಟಪದಲ್ಲಿ ಫೆ. 19 ರಂದು ನಡೆದ ರಂಗಭೂಮಿ ಫೈನ್‌ ಆರ್ಟ್ಸ್ ನ 32ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ರಂಗಭೂಮಿಯ ಬೆಳವಣಿಗೆಯಲ್ಲಿ ಅನೇಕ
ಮಹನೀಯರ, ಮಾಜಿ ಅಧ್ಯಕ್ಷರ, ದಾನಿಗಳ ಸಹಕಾರ – ಪ್ರೋತ್ಸಾಹ ಸದಾ ಇದೆ. ಶ್ರೀ ಶನಿದೇವರ ಕೃಪಾಶೀರ್ವಾದದಿಂದಾಗಿ ಯಾವುದೇ ಕಾರ್ಯವನ್ನು ಯಶಸ್ವಿಗೊಳಿಸುತ್ತೇವೆಂಬ ಆತ್ಮವಿಶ್ವಾಸ ನಮ್ಮಲ್ಲಿದೆ ಎಂದು ತಿಳಿಸಿ, ಸಮಾರಂಭದ ಯಶಸ್ಸಿಗೆ ಸಹಕರಿಸಿದ ಎಲ್ಲ ಮಹನೀಯರಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಶನೀಶ್ವರ ಮಂದಿರದ ಕಾರ್ಯಾಧ್ಯಕ್ಷ ಸಂತೋಷ್‌ ಡಿ. ಶೆಟ್ಟಿ, ಗೌರವ ಅತಿಥಿಗಳಾಗಿ
ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಸಿಎ ಸುರೇಂದ್ರ ಶೆಟ್ಟಿ, ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್‌
ಎಂ. ಪೂಜಾರಿ ಉಪಸ್ಥಿತರಿದ್ದರು. ಇದೇ ಸಂದರ್ಭ ಸಮಾಜ ಸೇವಕ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಉಪಾಧ್ಯಕ್ಷ
ಜಗದೀಶ್‌ ಶೆಟ್ಟಿ ನಂದಿಕೂರು ಅವರನ್ನು ಸಮ್ಮಾನಿಸಲಾಯಿತು.

ಕ್ಷೇತ್ರದ ಪ್ರಬಂಧಕ ದಯಾನಂದ್‌ ಶೆಟ್ಟಿಗಾರ್‌ ಮತ್ತು ಕ್ಷೇತ್ರದ ಹಿರಿಯ ಸದಸ್ಯ ಶೇಖರ್‌ ಪಾಲನ್‌ ಅವರನ್ನು ಗೌರವಿಸಲಾಯಿತು. ಕ್ಷೇತ್ರದ ಉಪಾಧ್ಯಕ್ಷ ಗೋಪಾಲ್‌ ವೈ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ವಿ. ಕೆ. ಸುವರ್ಣ, ಗೌರವ ಕೋಶಾಧಿಕಾರಿ ವಿಶ್ವನಾಥ್‌ ಕೆ. ಪೂಜಾರಿ, ಜತೆ ಕಾರ್ಯದರ್ಶಿ ಜಯಕರ್‌ ಬಿ. ಪೂಜಾರಿ, ಜತೆ ಕೋಶಾಧಿಕಾರಿ ಕರುಣಾಕರ ಎಸ್‌. ಆಳ್ವ ಆದ್ಯಪ್ಪ ಡಿಗುತ್ತು, ವಿಶ್ವಸ್ತರಾದ ಕೃಷ್ಣ ಎಂ. ಪೂಜಾರಿ, ದಯಾನಂದ ಶೆಟ್ಟಿ, ತಾರಾನಾಥ್‌ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ರಂಗಭೂಮಿ ಫೈನ್‌ ಆರ್ಟ್ಸ್ ಉಪಾಧ್ಯಕ್ಷ ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತಾಡಿ, ಸ್ವಾಗತಿಸಿ, ಕಾರ್ಯ
ಕ್ರಮವನ್ನು ನಿರೂಪಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು ವಂದಿಸಿದರು. ಗೌರವ
ಕೋಶಾಧಿಕಾರಿ ತಾರಾನಾಥ್‌ ಶೆಟ್ಟಿ, ಜತೆ ಕೋಶಾಧಿಕಾರಿ ರಘು ಮೂಲ್ಯ, ಜತೆ ಕಾರ್ಯದರ್ಶಿ ಇಂದಿರಾ ಎಸ್‌. ಶೆಟ್ಟಿ, ಮಾಜಿ
ಅಧ್ಯಕ್ಷ ಜಗದೀಶ್‌ ಶೆಟ್ಟಿ ಪನ್ವಲ್‌ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ತುಳು – ಕನ್ನಡಿಗರು ಹೆಚ್ಚಿನ
ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Advertisement

ಮನೋರಂಜನೆ ಪ್ರಯುಕ್ತ ಸದಸ್ಯರಿಂದ ನೃತ್ಯ ವೈಭವ ಹಾಗೂ ರಂಗಮಿಲನ ಮುಂಬಯಿ ಇವರಿಂದ ಮನೋಹರ ಶೆಟ್ಟಿ
ನಂದಳಿಕೆ ನಿರ್ದೇಶನದಲ್ಲಿ ಆಯಿನ ಆಂಡ್‌ ಬುಡ್ಡುಬುಡ್ಲೆ ಎಂಬ ತುಳು ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.

ರಂಗಭೂಮಿ ಹಾಗೂ ಶನೀಶ್ವರ ದೇವಸ್ಥಾನದ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರಗಿದೆ. ಇದಕ್ಕಾಗಿ ಕಾರ್ಯಕರ್ತರನ್ನು
ಅಭಿನಂದಿಸುತ್ತೇನೆ. ಇನ್ನು ಮುಂದೆಯೂ ಇಲ್ಲಿ ಎಲ್ಲ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತವೆ.
*ಸಂತೋಷ್‌ ಡಿ. ಶೆಟ್ಟಿ
ಕಾರ್ಯಾಧ್ಯಕ್ಷ, ಶನೀಶ್ವರ ಮಂದಿರ

ಕಳೆದ 15 ದಿನಗಳಿಂದ ಶ್ರೀಕ್ಷೇತ್ರದಲ್ಲಿ ಭಜನ ಸಪ್ತಾಹ ಹಾಗೂ ಕ್ಷೇತ್ರದ ರಥೋತ್ಸವ ವಿಜೃಂಭಣೆಯಿಂದ ನಡೆಯುತ್ತಿದ್ದು, ಕ್ಷೇತ್ರದ ಮಹಿಳಾ ವಿಭಾಗದ ಪಾತ್ರವು ಇದರಲ್ಲಿ ತುಂಬಾ ಇದೆ. ಇದಕ್ಕಾಗಿ ಮಹಿಳಾ ವಿಭಾಗ ಹಾಗೂ ಕ್ಷೇತ್ರದ ಎಲ್ಲ ಭಕ್ತರು ಹಾಗೂ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಕ್ಷೇತ್ರದಲ್ಲಿ ಶ್ರೀದೇವರ ಕೃಪೆಯಿಂದ ಯಾವುದೇ ಕಾರ್ಯವನ್ನು ಕೈಗೆತ್ತಿಕೊಂಡರೂ ಅದು
ಯಶಸ್ವಿಯಾಗುತ್ತದೆ ಎಂಬ ಧೈರ್ಯ ನಮಗಿದೆ.
ಧರ್ಮದರ್ಶಿ ರಮೇಶ್‌ ಎಂ. ಪೂಜಾರಿ
ಅಧ್ಯಕ್ಷರು, ಶ್ರೀ ಶನೀಶ್ವರ ಮಂದಿರ

ನಮ್ಮ ಸನಾತನ ಸಂಸ್ಕೃತಿಯನ್ನು ಉಳಿಸಿ – ಬೆಳೆಸುವಲ್ಲಿ ಧಾರ್ಮಿಕ ಕ್ಷೇತ್ರಗಳ ಪಾತ್ರ ಬಹಳಷ್ಟಿದೆ. ನಮ್ಮ ಯುವ ಜನರಿಗೆ ಉತ್ತಮ ಮಾರ್ಗದರ್ಶನ ನೀಡಿ ಅವರಿಗೆ ನಮ್ಮ ಸಂಸ್ಕೃತಿ – ಧರ್ಮದ ಅರಿವನ್ನು ಮೂಡಿಸಿದಾಗ ಭಾರತೀಯ ಶ್ರೀಮಂತ ಸಂಸ್ಕೃತಿ ಬೆಳೆಯುತ್ತದೆ. ಇದರಿಂದ ನಮಗೆ ಉತ್ತಮವಾದ ಸುಸಂಸ್ಕೃತ ಜೀವನ ನಡೆಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ
ನೆರೂಲ್‌ನ ಶನೀಶ್ವರ ಮಂದಿರದ ಹಾಗೂ ರಂಗಭೂಮಿ ಕಾರ್ಯ ಚಟುವಟಿಕೆಗಳು ಅಭಿನಂದನೆಯವಾಗಿವೆ.
ಸಿಎ ಸುರೇಂದ್ರ ಶೆಟ್ಟಿ
ಅಧ್ಯಕ್ಷರು, ಬಾಂಬೆ ಬಂಟ್ಸ್‌ ಅಸೋಸಿಯೇಶನ್‌

ನನ್ನಿಂದ ಯಾವುದೇ ಸಮಾಜ ಸೇವೆನಡೆದಿದ್ದರೂ ಅದಕ್ಕೆ ಘನ್ಸೋಲಿ ಶ್ರೀ ಮೂಕಾಂಬಿಕಾ ಕ್ಷೇತ್ರದ ಶ್ರೀದೇವಿಯ ಅನುಗ್ರಹ ಮುಖ್ಯ ಕಾರಣ. ದೇವರ ಕೃಪೆಯಿಂದ ನಾನಿಂದು ಸಮಾಜದಲ್ಲಿ ಗುರುತಿಸಲ್ಪಟ್ಟಿದ್ದೇನೆ. ನನಗೆ ಸಮ್ಮಾನಿಸಿದ ಎಲ್ಲರಿಗೂ ಕೃತಜ್ಞತೆಗಳು.
*ಜಗದೀಶ್‌ ಶೆಟ್ಟಿ, ನಂದಿಕೂರು ಉಪಾಧ್ಯಕ್ಷರು, ಘನ್ಸೋಲಿ
ಶ್ರೀ ಮೂಕಾಂಬಿಕಾ ದೇವಾಲಯ

*ಚಿತ್ರ – ವರದಿ: ಸುಭಾಷ್‌ ಶಿರಿಯಾ

Advertisement

Udayavani is now on Telegram. Click here to join our channel and stay updated with the latest news.

Next