Advertisement

150 ವೈದ್ಯ ಕಾಲೇಜುಗಳಿಗೆ ಕುತ್ತು?

11:23 PM May 30, 2023 | Team Udayavani |

ಹೊಸದಿಲ್ಲಿ: ದೇಶದ ಒಟ್ಟು 150 ವೈದ್ಯಕೀಯ ಕಾಲೇಜುಗಳು ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ಯ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಿಸುತ್ತಿವೆ. ಸೂಕ್ತ ತರಬೇತಿ ಹಾಗೂ ವೃತ್ತಿಪರ ಪ್ರಾಧ್ಯಾಪಕ‌ರನ್ನು ಹೊಂದಿಲ್ಲದೇ ಇರುವುದು, ವೈದ್ಯ ಕಾಲೇಜುಗಳು ಪಾಲಿಸ ಬೇಕಾದ ನಿಯಮಗಳನ್ನು ಪಾಲಿಸದೇ ಇರುವುದೇ ಈ ಬೆಳವಣಿಗೆಗೆ ಕಾರಣ. ಗುಜರಾತ್‌, ಅಸ್ಸಾಂ, ಪುದುಚೇರಿ, ತಮಿಳುನಾಡು, ಪಂಜಾಬ್‌, ಆಂಧ್ರ, ತ್ರಿಪುರಾ, ಪಶ್ಚಿಮ ಬಂಗಾಲಗಳ ಲ್ಲಿನ 150 ವೈದ್ಯ ಕಾಲೇಜುಗಳಿಗೆ ಮಾನ್ಯತೆ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಬಯೋ ಮೆಟ್ರಿಕ್‌, ಸಿಸಿಟಿವಿ ಅಳವಡಿಸದಿರುವುದು ಸೇರಿದಂತೆ ಹಲವು ಮಾನದಂಡಗಳ ಅಸಮರ್ಪಕ ಅನುಸರಣೆಯನ್ನೂ ಪತ್ತೆಹಚ್ಚಿದೆ. ಈಗಾಗಲೇ 40 ಕಾಲೇಜುಗಳು ಮಾನ್ಯತೆ ಕಳೆದುಕೊಂಡಿವೆ. ಈ ಬಗ್ಗೆ ಮೇಲ್ಮನವಿ ಸಲ್ಲಿಸಲೂ ಕಾಲೇಜಿನ ಆಡಳಿತ ಮಂಡಳಿಗೆ ಅವಕಾಶ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next