Advertisement
ನಗರದ ಪಾಪಾಗ್ನಿ ಮಠದಲ್ಲಿ ಜಿಪಂ, ಫೌಂಡೇಷನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಆಯೋಜಿಸಿದ್ದಪಾಪಾಗ್ನಿ ನದಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,ಪಾಪಾಗ್ನಿಯು ಪಾಪ ಮತ್ತು ಅಗ್ನಿ ಪದಗಳಸಂಯುಕ್ತವಾಗಿದೆ. ದಂತಕಥೆಯ ಪ್ರಕಾರ, ಈಪ್ರದೇಶದಲ್ಲಿ ವಾಸಿಸುವ ಚೆಂಚಸ್ ಎಂಬ ಮುಗ್ಧಬುಡಕಟ್ಟು ಮುಖ್ಯಸ್ಥನನ್ನು ಒಮ್ಮೆ ಕೊಂದ ರಾಜನುತನ್ನ ಪಾಪಕ್ಕೆ ಶಿಕ್ಷೆ ಆಗಿ ಕುಷ್ಠರೋಗ ಪೀಡಿತನಾಗಿದ್ದನು.ಅವನು ಪಾಪಾಗ್ನಿ ನದಿಯಲ್ಲಿ ಸ್ನಾನ ಮಾಡಿದನಂತರವೇ ಅವನು ಬಾಧೆಯಿಂದಗುಣಮುಖನಾದನೆಂದು ಭಾವಿಸಲಾಗಿದೆ. ಆ ನದಿಯು ಅವನ ಪಾಪವನ್ನು ಬೂದಿ ಮಾಡಿತು ಎಂದು ಹೇಳಲಾಗುತ್ತದೆ. ಹೀಗಾಗಿ ಪಾಪಾಗ್ನಿ ಎಂಬ ಹೆಸರು ಪಡೆದುಕೊಂಡಿದೆ ಎಂದು ತಿಳಿಸಿದರು.
Related Articles
Advertisement
ಚಿಕ್ಕಬಳ್ಳಾಪುರ ಜಿಪಂ ಮುಖ್ಯ ಯೋಜನಾಧಿಕಾರಿ ಧನು ರೇಣುಕಾ ಮಾತನಾಡಿ, ಅಧುನಿಕ ಯುಗದಿಂದ ನಾವೆಲ್ಲ ಹಳ್ಳಿ ಸೊಗಡು ಮರೆಯುತ್ತಿದ್ದೇವೆ. ಪಟ್ಟಣಗಳಿಗೆ ವಲಸೆ ಹೋಗುತ್ತಿದ್ದೇವೆ. ಬರೀಮೆಕಾನಿಲ್ ಜೀವನ ಮಾತ್ರ ನಗರಗಳಲ್ಲಿ ನೋಡಲು ಸಾಧ್ಯವಿದೆ. ಸ್ನೇಹ, ಪ್ರೀತಿ, ಬಂಧುತ್ವ, ನಂಬಿಕೆ,ಒಬ್ಬರಿಗೊಬ್ಬರು ಸಹಾಯ ಮಾಡಿಕೊಳ್ಳುವ ಒಳ್ಳೆಯವಾತಾವರಣ ಗ್ರಾಮೀಣ ಭಾಗದಲ್ಲಿ ಮಾತ್ರ ನೋಡಬಹುದು ಎಂದು ಹೇಳಿದರು.
ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ: ಬಾಪೂಜಿಯವರ ಕನಸು ಕೂಡ ಹಳ್ಳಿ ಕಟ್ಟುವುದೇಆಗಿತ್ತು. ಗ್ರಾಮಗಳ ಉದ್ದಾರವಾಗದೇ ಈ ದೇಶದಅಭಿವೃದ್ಧಿ ಶೂನ್ಯ ಎಂದು ಸಾರಿದ್ದರು. ಗ್ರಾಮಗಳು ಅಭಿವೃದ್ಧಿ ಆಗಬೇಕಾದರೆ ಗ್ರಾಮಗಳಲ್ಲಿ ಇರುವ ಪ್ರಾಕೃತಿಕ ಸಂಪತ್ತು ಕಾಪಾಡುವುದು ಮುಖ್ಯ. ಈ
ನಿಟ್ಟಿನಲ್ಲಿ ಗ್ರಾಮ ವ್ಯವಸ್ಥೆಗಳನ್ನು ಬಲಪಡಿಸುವ ಮೂಲಕ ಸಾಮೂಹಿಕ ಆಸ್ತಿ ಸಂರಕ್ಷಿಸಿ ಅಭಿವೃದ್ಧಿಪಡಿಸಲು ಎಫ್‌ಇಎಸ್ ಸಂಸ್ಥೆ ಶ್ರಮಿಸುತ್ತಿದೆ. ಗ್ರಾಮಸ್ಥರೆಲ್ಲರೂ ಒಂದಾಗಿ ಈ ಆಸ್ತಿ ಉಳಿಸಿ ಅಭಿವೃದ್ಧಿಪಡಿಸುವ ಕಡೆ ನಮ್ಮ ಚಿಂತನೆ ಸಾಗಬೇಕು ಎಂದು ವಿವರಿಸಿದರು.
ನೀರಿನ ಪ್ರಾಮುಖ್ಯತೆ ಅರಿಯಬೇಕಿದೆ: ಫೌಂಡೇಶನ್ ಫಾರ್ ಎಕಲಾಜಿಕಲ್ ಸೆಕ್ಯೂರಿಟಿ ಸಂಸ್ಥೆಯ ಯೋಜನಾ ವ್ಯವಸ್ಥಾಪಕ ಆಗಟಮಡಕ ರಮೇಶ್ ಮಾತನಾಡಿ, ಮಾನವನ ಜೀವಿಸುವುದಕ್ಕೆ ಅಗತ್ಯವಾಗಿಬೇಕಾಗಿರುವುದಲ್ಲಿ ಗಾಳಿಯ ನಂತರದ ಸ್ಥಾನ ನೀರು. ಅದರ ಪ್ರಾಮುಖ್ಯತೆ ಅರಿಯಬೇಕಾಗಿದೆ. ಭೂಮಿಮೇಲೆ ಶೇ.70 ನೀರು ಇದ್ದರೂ ಪರದಾಟ ನಿಂತಿಲ್ಲ. ಅದರಲ್ಲಿ ಬಳಕೆಗೆ ಬರುವುದು ಶೇ.3 ಮಾತ್ರ. ಅದರಲ್ಲೂ ಶೇ.2 ಮಂಜುಗಡ್ಡೆ ಆಗಿದೆ ಎಂದು ಹೇಳಿದರು.
1,700 ವರ್ಷ ಇತಿಹಾಸ: ಉಳಿದ ಶೇ.1 ಸಿಹಿ ನೀರಿನಲ್ಲಿ ಕೃಷಿ, ಪಶು ಸಂಗೋಪನೆ, ಕುಡಿಯಲು, ಮನೆ ಬಳಕೆಗೆ, ಕಾರ್ಖಾನೆ ಮುಂತಾದವುಗಳಿಗೂ ಪೂರೈಕೆ ಆಗಬೇಕು. ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ನಾಡಲ್ಲಿ ಕೆರೆನೀರಾವರಿ ಕೃಷಿ ವ್ಯವಸ್ಥೆಗೆ 1,700 ವರ್ಷ ಇತಿಹಾಸವಿದೆ ಎಂದು ತಿಳಿಸಿದರು.
ಎಫ್‌ಇಎಸ್ ಸಂಸ್ಥೆಯ ಹಿರಿಯ ಯೋಜನಾ ವ್ಯವಸ್ಥಾಪಕ ಲೋಕೇಶ್, ಮುದ್ದೇನಹಳ್ಳಿ ಗ್ರಾಪಂ ಅಧ್ಯಕ್ಷಮುನಿನಾರಾಯಣಪ್ಪ, ಪಿಡಿಒ ತಿಪ್ಪಯ್ಯ, ಸದಸ್ಯೆಭಾಗ್ಯಮ್ಮ, ಶಿಡ್ಲಘಟ್ಟ ತಾಲೂಕು ಕೊತ್ತನೂರು ಗ್ರಾಪಂಅಧ್ಯಕ್ಷ ಮಂಜುನಾಥ್, ಎಫ್‌ಇಎಸ್ ಸಂಸ್ಥೆಯ ತಂಡದನಾಯಕ ವಿಜಯ್‌ಕುಮಾರ್, ರೀವಾರ್ಡ್ಸ್ ಸಂಸ್ಥೆಯಮುಖ್ಯಸ್ಥ ಹರಿಪ್ರಸಾದ್, ನಂದೀಶ್ವರ ರೂರಲ್ ಟ್ರಸ್ಟ್‌ನಈಶ್ವರಯ್ಯ, ವೆಂಕಟೇಶ್, ಬೂದಾಳ ರಾಮಣ್ಣ, ಎಫ್‌ಇಎಸ್ ಸಂಸ್ಥೆಯ ಸಂಯೋಜಕಿ ನಿಖತ್ ಪರ್ವೀಣ್,ನಯನ್‌ರೆಡ್ಡಿ, ಸಿಬ್ಬಂದಿ ಪಲ್ಲವಿ, ಕುಮಾರ್, ಉತ್ತನ್ನ, ಸುನೀಲ್, ಸೌಭಾಗ್ಯ, ಲೀಲಾವತಿ, ಸಿ.ನಾರಾಯಣಸ್ವಾಮಿ,ಗೋಪಿ, ಮುನಿರಾಜ್, ಸುಬ್ರಮಣಿ, ವಿಶ್ವನಾಥ್,ಪಂಚಾಯ್ತಿ ಸಂಪನ್ಮೂಲ ವ್ಯಕ್ತಿಗಳಾದ ವಿ.ಎಲ್.ಮಧು,ರಾಜಮ್ಮ, ಚಂದ್ರನಾಯಕ್, ರೇಖಾ ಮತ್ತಿತರರು ಭಾಗವಹಿಸಿದರು.