Advertisement

ಭಾರೀ ಮಳೆಗೆ ಕೊಚ್ಚಿಕೊಂಡು ಹೋದ ಪೋಸ್ಟ್ ಮ್ಯಾನ್! ಮನೆಯಿಂದ ಹೊರಟವರು ಮತ್ತೆ ವಾಪಸ್ ಆಗಿಲ್ಲ

04:22 PM Oct 16, 2020 | Nagendra Trasi |

ಹೈದರಾಬಾದ್:50 ವರ್ಷದ ಪೋಸ್ಟ್ ಮ್ಯಾನ್ ಸುಂದರ್ ರಾಜ್ ಅವರಿಗೆ ಅಕ್ಟೋಬರ್ 13ರಂದು ಇಲಾಖೆಯಿಂದ ಕರ್ತವ್ಯಕ್ಕೆ ಹಾಜರಾಗುವಂತೆ ಕರೆ ಬಂದಿತ್ತು. ಹೀಗೆ ಅಂಚೆ ಪತ್ರ ಸರಬರಾಜು ಮಾಡಲು ಹೋಗಿದ್ದ ಪೋಸ್ಟ್ ಮ್ಯಾನ್ ಕೊನೆಗೆ ಮನೆಗೆ ಮರಳಿ ಬರಲೇ ಇಲ್ಲ…ಹೈದರಾಬಾದ್ ನಲ್ಲಿ ಸುರಿದ ಭಾರೀ ಮಳೆಗೆ ಪೋಸ್ಟ್ ಮ್ಯಾನ್ ಕೊಚ್ಚಿಕೊಂಡು ಹೋಗಿದ್ದರು.

Advertisement

ಪೊಲೀಸರ ಮಾಹಿತಿ ಪ್ರಕಾರ, ಭಾರೀ ಮಳೆಯ ಪ್ರವಾಹಕ್ಕೆ ಕೊಚ್ಚಿ ಹೋಗಿದ್ದ ಪೋಸ್ಟ್ ಮ್ಯಾನ್ ಅವರ ಶವ ನಾಗೋಲೆ ಲೇಕ್ ಬಳಿ ಗುರುವಾರ ಪತ್ತೆಯಾಗಿತ್ತು. ಮನೆಯಿಂದ ಕರ್ತವ್ಯಕ್ಕೆ ತೆರಳಿದ್ದ ಪೋಸ್ಟ್ ಮ್ಯಾನ್ ಮನೆಗೆ ವಾಪಸ್ ಬಂದಿಲ್ಲ ಎಂದು ದೂರು ಕೊಟ್ಟ ಹಿನ್ನೆಲೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದರು.

ದೂರಿನ ಆಧಾರದ ಮೇಲೆ ಪೊಲೀಸರು ಶೋಧ ಕಾರ್ಯಕ್ಕೆ ಮುಂದಾಗಿದ್ದರು. ಸುಂದರ್ ರಾಜ್ ಅವರಿಗೆ ಅಂದು ಒಟ್ಟು 56 ಪತ್ರಗಳ ಬಟವಾಡೆ ಮಾಡಲು ತಿಳಿಸಲಾಗಿತ್ತು. ಅವರು ಜೈಪುರಿ ಕಾಲೋನಿ, ನುವ್ವುಲಾಬಂದಾ, ಎಪಿಸಿಒ ಕಾಲೋನಿ, ಹನುಮಾನ್ ನಗರ ಪ್ರದೇಶಗಳಲ್ಲಿ ಪತ್ರ ಬಟವಾಡೆ ಮಾಡಬೇಕಾಗಿತ್ತು ಎಂದು ವರದಿ ವಿವರಿಸಿದೆ.

ಅಂಚೆ ಕಚೇರಿ ಅಧಿಕಾರಿಗಳ ಪ್ರಕಾರ, ಸುಂದರ್ ರಾಜ್ ಅವರು ಅಕ್ಟೋಬರ್ 13ರಂದು ಅಂಚೆ ಪತ್ರ ಬಟವಾಡೆ ಮಾಡಬೇಕಾಗಿತ್ತು. ಆದರೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಬಟವಾಡೆ ಮಾಡದೇ ಇರುವ ಪತ್ರದ ಜತೆ ಕಚೇರಿಗೆ ವಾಪಸ್ ಬರುವಂತೆ ಸೂಚನೆ ನೀಡಲಾಗಿತ್ತು.

ಇದನ್ನೂ ಓದಿ:ಅ.16:Flipkart ಬಿಗ್ ಬಿಲಿಯನ್ ಡೇಸ್:ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್, ಕ್ಯಾಶ್ ಬ್ಯಾಕ್ ಆಫರ್

Advertisement

ಆದರೆ ಸುಂದರ್ ರಾಜ್ ಅವರು ನಾಪತ್ತೆಯಾಗಿದ್ದು, ಮಂಗಳವಾರ ಮನೆಗೆ ವಾಪಸ್ ಬಂದಿಲ್ಲ ಎಂಬ ಮಾಹಿತಿ ಬಂದ ನಂತರ ಬುಧವಾರ ಪೊಲೀಸರನ್ನು ಸಂಪರ್ಕಿಸಿ ದೂರು ನೀಡಲಾಗಿತ್ತು. ಸುಂದರ್ ರಾಜ್ ಕುಟುಂಬದ ಸದಸ್ಯರು ಕೂಡಾ ಅವರ ಪತ್ತೆಗಾಗಿ ಸಾಕಷ್ಟು ಶ್ರಮಿಸಿದ್ದರು. ಏತನ್ಮಧ್ಯೆ ಬಂಡ್ಲಾಗುಡಾ ಪ್ರದೇಶದಲ್ಲಿ ಒಂಬತ್ತು ಮಂದಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದರು. ಕೊನೆಗೆ ಗುರುವಾರ ಪೋಸ್ಟ್ ಮ್ಯಾನ್ ಅವರ ಶವ ಪತ್ತೆಯಾಗಿರುವುದಾಗಿ ಪೊಲೀಸ್ ಅಧಿಕಾರಿ ವಿವರಿಸಿದ್ದಾರೆ.

ಇದರಲ್ಲಿ ಬುಧವಾರ ಇಬ್ಬರು ಮಹಿಳೆಯರ ಶವ ಪತ್ತೆಯಾಗಿದ್ದು, ಓರ್ವ ಹಿರಿಯ ವ್ಯಕ್ತಿ ಜೀವಂತವಾಗಿ ಪತ್ತೆಯಾಗಿದ್ದರು. ಉಳಿದವರ ಪತ್ತೆಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next