Advertisement
ಇದನ್ನೂ ಓದಿ : ಐಎಎಸ್ ಅಧಿಕಾರಿಗಳ ವರ್ಗಾವಣೆಗೆ ಕಾರಣವಾದ ಭೂ ಹಗರಣ: ತನಿಖೆಗೆ ಸಿದ್ದರಾಮಯ್ಯ ಆಗ್ರಹ
Related Articles
Advertisement
ಯಾವುದೇ ರಾಸಾಯನಿಕಗಳನ್ನು ಬಳಸದೇ ಅಥವಾ ಸಾಬೂನುಗಳ ಅಗತ್ಯವಿಲ್ಲದೆ, ಮರುಬಳಕೆ ಮಾಡಬಹುದಾದ ನೀರಿನ ಬಾಟಲಿಗಳನ್ನು ಸ್ವಚ್ಛವಾಗಿಡಲು ವಿಕಿರಣ ಬೆಳಕು ಅನುಕೂಲಕರ. ಸ್ವಯಂ-ಸ್ವಚ್ಛಗೊಳಿಸುವ ಬಾಟಲಿಗಳನ್ನು ತಯಾರಿಸುವ ಕೆಲವು ಪ್ರಮುಖ ಕಂಪನಿಗಳ ಪಟ್ಟಿ ಹಾಗೂ ಅದರ ವೈಶಿಷ್ಟ್ಯ ಈ ಕೆಳಗೆ ನೀಡಲಾಗಿದೆ.
ಕ್ರೇಜಿ ಕ್ಯಾಪ್
ಕ್ರೇಜಿಕ್ಯಾಪ್ ಬಾಟಲಿಯಲ್ಲಿ ನೀರು ಶುದ್ಧೀಕರಿಸುವ ಎರಡು ವಿಧಾನಗಳಿವೆ:
ನಾರ್ಮಲ್ ಮೋಡ್ (ನೀರಿನ ಕಾರಂಜಿಗಳು ಹಾಗೂ ನಲ್ಲಿಯಿಂದ ಬರುವ ನೀರನ್ನು ಶುದ್ಧೀಕರಿಸಬಲ್ಲ) ಹಾಗೂ ಕ್ರೇಜಿ ಮೋಡ್ (ನದಿ-ಸರೋವರಗಳ ನೀರುಗಳನ್ನು ಶುದ್ಧೀಕರಿಸುವ ಸಾಮರ್ಥ್ಯ ಉಳ್ಳವುಗಳು). ಕ್ರೇಜಿಕ್ಯಾಪ್ ಪ್ರಕಾರ, ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡುಗಳಲ್ಲಿ ನೀರು ಹಾಗೂ ಬಾಟಲಿ ಸ್ವಚ್ಛಗೊಳ್ಳುತ್ತದೆ ಹಾಗೂ ಕ್ರೇಜಿ ಮೋಡ್ ನಲ್ಲಿ ಶುದ್ಧೀಕರಣ ಪ್ರಕ್ರಿಯೆಯು ಎರಡೂವರೆ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಇದರ ಮತ್ತೊಂದು ವಿಶೇಷವೆಂದರೆ ನೀವು ಕೇವಲ ಕ್ಯಾಪ್ ಅನ್ನು ಖರೀದಿಸಿದರೂ ಸಾಕು. ಅದರ ಅಧಿಕೃತ ವೆಬ್‌ಸೈಟ್‌ನಲ್ಲಿ ಉಲ್ಲೇಖವಾಗಿರುವಂತೆ, ನಿಮ್ಮಲ್ಲಿ ಈಗ ಇರುವ ಬಾಟಲಿಗಳಿಗೆ ಅದರ ಮುಚ್ಚಳ (ಕ್ಯಾಪ್) ಹೊಂದಿಕೊಳ್ಳುತ್ತದೆ. ನೀವು ಅದನ್ನು ಆಟೋ ಕ್ಲೀನ್‌ನಲ್ಲೇ ಇಟ್ಟರೆ, ಒಂದು ಚಾರ್ಜ್ನಲ್ಲಿ ಸುಮಾರು ಎರಡು ತಿಂಗಳವರೆಗೆ ಇದು ಸಕ್ರಿಯವಾಗಿರುತ್ತದೆ.
ಲಾರ್ಕ್ ಬಾಟಲಿಗಳು
ಲಾರ್ಕ್ ಬಾಟಲಿಯಲ್ಲೂ ಎರಡು ಶುದ್ಧೀಕರಣ ವಿಧಾನಗಳಿವೆ: ನಾರ್ಮಲ್ ಮತ್ತು ಅಡ್ವೆಂಚರ್. ನಾರ್ಮಲ್ ಮೋಡ್‌ನಲ್ಲಿ 60 ಸೆಕೆಂಡುಗಳಲ್ಲಿ ಶೇ.99 ರೋಗಕಾರಕಗಳನ್ನು ಶುದ್ಧೀಕರಿಸಿದರೆ, ಅಡ್ವೆಂಚರ್ ಮೋಡ್‌ನಲ್ಲಿ ಇದು 3 ನಿಮಿಷ ತೆಗೆದುಕೊಳ್ಳುತ್ತದೆ. ಈ ಬಾಟಲಿಯಲ್ಲಿ ಮೇಲ್ಭಾಗದಲ್ಲಿರುವ ಬಟನ್‌ಅನ್ನು ಒತ್ತುವ ಮೂಲಕ ಬಯಸಿದಾಗಲೆಲ್ಲಾ ಲಘು ವಿಕಿರಣ ಶುದ್ಧೀಕರಣದ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಅದೇ ರೀತಿ ಸ್ವಯಂಚಾಲಿತವಾಗಿ ಪ್ರತಿ 2 ಗಂಟೆಗಳಿಗೊಮ್ಮೆ, 10 ಸೆಕೆಂಡುಗಳ ಕಾಲ ಆ್ಯಕ್ಟಿವ್ ಇರುತ್ತದೆ.
ನಾರ್ಮಲ್ ಮೋಡ್ ನಲ್ಲಿ ದಿನದಲ್ಲಿ 3-4 ಬಾರಿ ಶುಚಿಗೊಳಿಸಿದರೆ, ಫುಲ್ ಚಾರ್ಜ್ ಆಗಿರುವ ಲಾರ್ಕ್ ಬಾಟಲಿಯೂ ಎರಡು ತಿಂಗಳು ಪೂರ್ಣ ಸಕ್ರಿಯವಿರುತ್ತದೆ. ಅದೇ ರೀತಿ, ಅಡ್ವೆಂಚರ್ ಮೋಡ್‌ನಲ್ಲಿ ಬಳಸಿದರೆ, ಫುಲ್ ಚಾರ್ಜ್ 12 ದಿನಗಳ ಕಾಲ ಬಾಳಿಕೆ ಬರುತ್ತದೆ.
ಮಹಾಟನ್
ಮಹಾಟನ್ ಸ್ವಯಂ ಸ್ವಚ್ಛಗೊಳಿಸುವ ನೀರಿನ ಬಾಟಲಿಗಳು ಕೇವಲ ಒಂದೇ ಶುದ್ಧೀಕರಣದ ವಿಧಾನದಲ್ಲಿ ಲಭ್ಯವಿದೆ. ನೀರಿನಿಂದ 99.99% ರಷ್ಟು ರೋಗಕಾರಕಗಳನ್ನು ಇದು ತೆಗೆದುಹಾಕುತ್ತದೆ. ಕ್ರೇಜಿಕ್ಯಾಪ್ ಹಾಗೂ ಲಾರ್ಕ್ನಂತಲ್ಲದ ಮಹಾಟನ್‌ನಲ್ಲಿ ಪ್ರತ್ಯೇಕ ನೀರಿಗೆ ಪ್ರತ್ಯೇಕ ಸೆಟ್ಟಿಂಗ್‌ಗಳು ಇರುವುದಿಲ್ಲ. ಹಾಗಾಗಿ ಈ ಬಾಟಲಿಯಲ್ಲಿ ಹೊಳೆ, ಕೆರೆ, ನದಿಯ ನೀರನ್ನು ಜಾಸ್ತಿಯಾಗಿ ಬಳಕೆ ಮಾಡುವುದು ಸೂಕ್ತವಲ್ಲ.
ಮಹಾಟನ್ ಬಾಟಲಿಯು ಡಬಲ್ ವಾಲ್ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಮಾಡಲಾಗುತ್ತದೆ. ಆದ್ದರಿಂದ ಇದು ಬಾಳಿಕೆ ಬರುವುದರ ಬಗ್ಗೆ ಯಾವುದೇ ಸಂಶಯವಿಲ್ಲ. ಆಕಾರವೂ ಸಣ್ಣದಾಗಿರುವುದರಿಂದ ಯಾವುದೇ ಚೀಲದೊಳಗೆ ಹಾಕಿಟ್ಟು ಕೊಂಡುಹೋಗಲು ಸಮಸ್ಯೆಯಾಗದು. ಆದರೆ ಒಂದು ಹಿನ್ನಡೆಯೆಂದರೆ, ಮಹಾಟನ್ ಬಾಟಲಿಯಲ್ಲಿ ಕೇವಲ 350 ಎಂಎಲ್ ನೀರು ಹಿಡಿಯುವುದು. ಹೆಚ್ಚಿನ ನೀರು ಕುಡಿಯುವವರು ಪ್ರತಿನಿತ್ಯ 8-10 ಬಾರಿ ನೀರು ತುಂಬಿಸಬೇಕಾಗುತ್ತದೆ!
ಚಾರ್ಜ್ ಬಗ್ಗೆ ಹೇಳುವುದಾದರೆ, ಒಮ್ಮೆ ಫುಲ್ ಚಾರ್ಜ್ ಆದ ಮಹಾಟನ್ ಬಾಟಲ್ ಗರಿಷ್ಠ ಮೂರು ವಾರಗಳವರೆಗೆ ಆ್ಯಕ್ಟಿವ್ ಇರುತ್ತದೆ. ದಿನದಲ್ಲಿ ಮೂರು-ನಾಲ್ಕು ಬಾರಿ ಸಕ್ರಿಯಗೊಳಿಸಿದರೂ, ಇದರ ಬಾಳಿಕೆಯು ಕ್ರೇಜಿಕ್ಯಾಪ್ ಮತ್ತು ಲಾರ್ಕ್ಗಿಂತ ಸ್ವಲ್ಪ ಕಡಿಮೆಯೇ ಎನ್ನಬಹುದು.
ವೇಕ್ ಕಪ್
ವೇಕ್ ಕಪ್ ಅಲ್ಟ್ರಾ ವೈಲೆಟ್ ಲೈಟ್ ನೀರಿನ ಬಾಟಲಿಯು ಒಂದೇ ವಿಧಾನದಲ್ಲಿ ಲಭ್ಯವಿದೆ. ಮುಚ್ಚಳದಲ್ಲಿರುವ ಲಘು ವಿಕಿರಣ ತಂತ್ರಜ್ಞಾನವು ಬಾಟಲಿ ಒಳಗಿರುವ ಬ್ಯಾಕ್ಟೀರಿಯಾ, ವೈರಸ್‌ಗಳನ್ನು ತೆಗೆದುಹಾಕುವ ಮೂಲಕ ಮೇಲ್ಮೈಯನ್ನು ಸ್ವಚ್ಛಗೊಳಿಸುತ್ತದೆ. ಬಟನ್‌ಅನ್ನು ಕ್ಲಿಕ್ ಮಾಡುವುದರ ಮೂಲಕ ಆ್ಯಕ್ಟಿವ್ ಮಾಡಬಹುದು. ಮೂರು ನಿಮಿಷಗಳಲ್ಲಿ ಬಾಟಲಿಯು ಸ್ವಚ್ಛಗೊಳ್ಳುತ್ತದೆ.
ಮ್ಯಾಟ್ ಬ್ಲ್ಯಾಕ್ ಸ್ಟೇನ್ ಲೆಸ್ ಸ್ಟೀಲ್ ನಲ್ಲಿ ಬರುವ ಈ ಬಾಟಲಿಯಲ್ಲಿ 550 ಮಿಲಿಲೀಟರ್ ನೀರು ತುಂಬಿಸಬಹುದು. ಒಂದು ಬಾರಿ ಫುಲ್ ಚಾರ್ಜ್ ಆದರೆ ಒಂದು ತಿಂಗಳವರೆಗೆ ಸ್ವಯಂ ಶುದ್ಧೀಕರಣ ಪ್ರಕ್ರಿಯೆ ಮಾಡುತ್ತದೆ.
ಈ ಕೋವಿಡ್ ಕಾಲದಲ್ಲಿ ಸ್ವಚ್ಛತೆಗೆ ಸಿಕ್ಕ ಮಹತ್ವ ಅಷ್ಟಿಷ್ಟಲ್ಲ. ರೋಗಾಣುಗಳ ವಿರುದ್ಧ ಹೋರಾಡಲು ಮಾರುಕಟ್ಟೆಗೆ ಬರುವ ಯಾವುದೇ ಸಾಧನವನ್ನೂ ಕೊಳ್ಳಲು ಜನರು ಸಿದ್ಧರಿದ್ದಾರೆ. ಇದು ಹೇಗಾಗಿದೆ ಎಂದರೆ, ಬಹುತೇಕ ಎಲ್ಲಾ ಪ್ರಾಡಕ್ಟ್ಗಳೂ, ತಮ್ಮ ಜಾಹೀರಾತುಗಳಲ್ಲಿ, ವೈರಸ್ ವಿರುದ್ಧ ಹೋರಾಡುತ್ತದೆ ಎಂಬ ಸಂದೇಶ ಸಾರಲು ಪ್ರಾರಂಭಿಸಿತು. ಏನೇ ಆಗಲಿ, ವೈರಸ್ ವಿರುದ್ಧ ಒಗ್ಗಟ್ಟಿನಲ್ಲಿ ಹೋರಾಡೋಣ. ಈ ಲೇಖನದಲ್ಲಿ ಒಳಗೊಂಡಿರುವ ಎಲ್ಲಾ ವಿಷಯವು, ಮಾಹಿತಿ ಒದಗಿಸುವ ಉದ್ದೇಶಕ್ಕಾಗಿ ಮಾತ್ರ ಪ್ರಕಟಿಸಲಾಗಿದೆ. ಯಾವುದೇ, ವೈದ್ಯಕೀಯ ಸಲಹೆ ನೀಡುವ ಉದ್ದೇಶ ಇದರಲ್ಲಿಲ್ಲ.